/newsfirstlive-kannada/media/post_attachments/wp-content/uploads/2025/06/INDORE-COUPLE-3.jpg)
ಮಧ್ಯ ಪ್ರದೇಶದ ಇಂಧೋರ್ ನವ ಜೋಡಿಯ ಹನಿಮೂನ್ ಪ್ರಕರಣ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪ್ರಕರಣ ನಡೆಸ್ತಿರುವ ಪೊಲೀಸರಿಗೆ ಒಂದೊಂದೇ ಅಸಲಿ ವಿಚಾರಗಳು ಗೊತ್ತಾಗುತ್ತಿವೆ.
ರಾಜಾ ರಘುವಂಶಿ ಮೇಲೆ ಇಷ್ಟವಿಲ್ಲದೇ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡಿದ್ದ ಸೋನಂ ಮದ್ವೆಯಾದ ಮೂರೇ ದಿನಕ್ಕೆ ರಾಜಾ ರಂಘುವಂಶಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಳು ಅನ್ನೋದು ಈಗಾಗಲೇ ತಿಳಿದಿದೆ. ತನಿಖೆಯಲ್ಲಿ ಗೊತ್ತಾಗಿರುವ ಮತ್ತೊಂದು ವಿಚಾರವೆಂದರೆ, ಹನಿಮೂನ್ಗೆ ಹೋದಾಗ ಮೆಘಾಲಯದಲ್ಲಿ ತನ್ನ ಸುಪಾರಿ ಪ್ಲಾನ್ ಸಕ್ಸಸ್ ಆಗದಿದ್ರೆ ಪ್ಲಾನ್-ಬಿ ರೆಡಿ ಮಾಡಿದ್ದಳಂತೆ! ಊಟದಲ್ಲಿ ವಿಷ ನೀಡಿ ಪ್ರಾಣ ತೆಗೆಯಲು ಪ್ಲಾನ್ ಮಾಡಿದ್ದಂತೆ..
ಇದನ್ನೂ ಓದಿ: ಸುಪಾರಿ ಪ್ಲಾನ್ ಸಕ್ಸಸ್ ಆಗದಿದ್ದರೆ.. ಹನಿಮೂನ್ಗೂ ಮುನ್ನ ಪ್ಲಾನ್-ಬಿ ರೆಡಿ ಮಾಡಿದ್ದ ಸೋನಂ..!
ತನಿಖೆ ವೇಳೆ ಗೊತ್ತಾಗಿರುವ ಮತ್ತೊಂದು ವಿಚಾರ ಏನೆಂದರೆ, ಆರೋಪಿ ಸೋನಮ್ಗೆ ರಾಜು ಕುಶ್ವಾಹಾ ಜೊತೆ ಅಫೇರ್ ಇರೋದು ಆಕೆಯ ತಂದೆ-ತಾಯಿಗೆ ಮುಂಚೆಯೇ ಗೊತ್ತಿತ್ತು ಎಂದು ಮೃತ ರಾಜಾ ರಘುವಂಶಿ ಸೋದರ ವಿಪಿನ್ ರಘುವಂಶಿ ಮಾಹಿತಿ ನೀಡಿದ್ದಾರೆ. ಸೋನಂ ತನ್ನ ತಾಯಿಯ ಬಳಿ ತಾನು ರಾಜು ಕುಶ್ವಾಹನ ಮದುವೆ ಆಗುತ್ತೇನೆ ಎಂದಿದ್ದಾಳೆ.
ಆದರೆ ಇದಕ್ಕೆ ಆಕೆಯ ತಾಯಿ ಒಪ್ಪಿಲ್ಲ. ನಮ್ಮ ಸಮುದಾಯದವರ ಜೊತೆ ಮಾತ್ರವೇ ವಿವಾಹವಾಗಬೇಕು ಎಂದಿದ್ದರಂತೆ. ಅದಕ್ಕೆ ಸೋನಂ ನಾನು ಬೇರೆಯವರನ್ನು ಮದುವೆಯಾಗುತ್ತೇನೆ. ಆದರೆ ನಂತರ ಏನಾದರೂ ಅನಾಹುತವಾದರೆ ಅದಕ್ಕೆ ನಾನು ಹೊಣೆಯಲ್ಲ. ನನ್ನ ಮದುವೆಯಾದ ವ್ಯಕ್ತಿಗೆ ಏನು ಮಾಡುತ್ತೇನೆ ಅಂತಾ ನೋಡುತ್ತೀರಿ ಎಂದು ಎಚ್ಚರಿಕೆ ನೀಡಿದ್ದಳಂತೆ ಎಂದು ವಿಪಿನ್ ರಘುವಂಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆಂಡ್ತಿ ಅಲ್ಲ ರಾಕ್ಷಸಿ!.. ತಾನೇ ಮದುವೆ ಆಗಿದ್ದ ಸೋನಮ್, ಗಂಡನಿಗೆ ಸುಪಾರಿ ಕೊಟ್ಟಿದ್ದು ಯಾಕೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ