/newsfirstlive-kannada/media/post_attachments/wp-content/uploads/2024/11/JOBS_ITBPF.jpg)
ಭಾರತ ಸರ್ಕಾರದ ಅಡಿ ಕೆಲಸ ನಿರ್ವಹಿಸಲು ಆಸಕ್ತಿವುಳ್ಳ ಅಭ್ಯರ್ಥಿಗಳಿಗೆ ಶುಭ ಸುದ್ದಿಯೊಂದು ಒಲಿದು ಬಂದಿದೆ. ಈ ಕೆಲಸ ಮಾಡಲು ಇಷ್ಟ ಇರುವ ಮಹಿಳೆಯರು, ಪುರುಷರು ಇಬ್ಬರೂ ಈಗಲೇ ತಮ್ಮ ದಾಖಲೆಗಳನ್ನು ರೆಡಿಮಾಡಿಕೊಂಡು ನಾಳೆಯಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಇವೆಲ್ಲ ಕೇಂದ್ರ ಸರ್ಕಾರದ ಉದ್ಯೋಗಗಳು ಆಗಿದ್ದರಿಂದ ಪರೀಕ್ಷೆ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇತರೆ ಎಲ್ಲ ಪ್ರಕ್ರಿಯೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತವೆ.
ಐಟಿಬಿಪಿಎಫ್​ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್​) ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವಂತ ಗ್ರೂಪ್- ಬಿ ಮತ್ತು ಸಿ ಹುದ್ದೆಗಳನ್ನು ತುಂಬಲಾಗುತ್ತಿದೆ. ಇವು ಟೆಲಿಕಮ್ಯುನಿಕೇಶನ್​ಗೆ ಸಂಬಂಧಿಸಿದ್ದು ನೂರಲ್ಲ, ಇನ್ನೂರಲ್ಲ ಐದು ನೂರಕ್ಕೂ ಅಧಿಕ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಐಟಿಬಿಪಿಎಫ್ ಅಧಿಕೃತ ವೆಬ್​ಸೈಟ್​ ಮೂಲಕವೇ ಅರ್ಜಿ ಸಲ್ಲಿಸಬೇಕು. ನಾಳೆ ಅಂದರೆ ನವೆಂಬರ್ 15 ರಿಂದ ಈ ಉದ್ಯೋಗಗಳಿಗೆ ಸಂಬಂಧಿಸಿದ ಲಿಂಕ್​ ಅನ್ನು ಬಿಡುಗಡೆ ಮಾಡಲಾಗುತ್ತದೆ.
ಮಾಸಿಕ ಸಂಭಾವನೆ?
ಸಬ್​ಇನ್​ಸ್ಪೆಕ್ಟರ್- ₹35,400 ರಿಂದ ₹ 1,12,400
ಹೆಡ್​ ಕಾನ್​ಸ್ಟೆಬಲ್- ₹25,500 ರಿಂದ ₹ 81,100
ಕಾನ್​ಸ್ಟೆಬಲ್- ₹21,700 ರಿಂದ ₹ 69,100
ಇದನ್ನೂ ಓದಿ: ಈ ಜಿಲ್ಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಎಷ್ಟು ಉದ್ಯೋಗಗಳು ಖಾಲಿ ಇವೆ?
/newsfirstlive-kannada/media/post_attachments/wp-content/uploads/2024/09/JOBS-2.jpg)
ಹುದ್ದೆಗಳ ಹೆಸರು, ಎಷ್ಟು ಕೆಲಸಗಳು?
- ಸಬ್​ಇನ್​ಸ್ಪೆಕ್ಟರ್- 78
- ಸಬ್​ಇನ್​ಸ್ಪೆಕ್ಟರ್- 14
- ಹೆಡ್​ ಕಾನ್​ಸ್ಟೆಬಲ್- 325
- ಹೆಡ್​ ಕಾನ್​ಸ್ಟೆಬಲ್- 58
- ಕಾನ್​ಸ್ಟೆಬಲ್- 44
- ಕಾನ್​ಸ್ಟೆಬಲ್- 07
- ಒಟ್ಟು ಹುದ್ದೆಗಳು- 526
ಅಭ್ಯರ್ಥಿಗಳಿಗೆ ವಯಸ್ಸು ಎಷ್ಟು ಆಗಿರಬೇಕು?
- ಸಬ್​ಇನ್​ಸ್ಪೆಕ್ಟರ್- 20 ರಿಂದ 25 ವರ್ಷಗಳು
- ಹೆಡ್​ ಕಾನ್​ಸ್ಟೆಬಲ್- 18 ರಿಂದ 25 ವರ್ಷಗಳು
- ಕಾನ್​ಸ್ಟೆಬಲ್- 18 ರಿಂದ 23 ವರ್ಷಗಳು
ಈ ದಿನಾಂಕಗಳನ್ನು ನೆನಪಿಡಿ
ಆನ್​ಲೈನ್ ಅರ್ಜಿ ಸಲ್ಲಿಕೆ ಆರಂಭ- 15 ನವೆಂಬರ್ 2024
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 14 ಡಿಸೆಂಬರ್ 2024
ಅರ್ಜಿ ಶುಲ್ಕ ಎಷ್ಟು?
ಸಬ್​ಇನ್​ಸ್ಪೆಕ್ಟರ್- 200 ರೂಪಾಯಿ
ಹೆಡ್​ ಕಾನ್​ಸ್ಟೆಬಲ್- 100 ರೂಪಾಯಿ
ಎಸ್​​ಸಿ, ಎಸ್​​ಟಿ, ವಿಶೇಷ ಚೇತನರಿಗೆ, ಮಾಜಿ ಸೈನಿಕರಿಗೆ ವಿನಾಯಿತಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us