/newsfirstlive-kannada/media/post_attachments/wp-content/uploads/2024/10/JOB_BANKS.jpg)
ಗ್ರೂಪ್- ಎ ಉದ್ಯೋಗಗಳನ್ನು ನೇಮಕಾತಿ ಮಾಡಲು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) ಅರ್ಜಿಗಳನ್ನು ಆಹ್ವಾನ ಮಾಡಿದೆ. ಇವು ಮಹತ್ವದ ಉದ್ಯೋಗಗಳಾಗಿದ್ದು ಇದಕ್ಕೆ ನಿರ್ಧಿಷ್ಟ ಪದವಿ ಪೂರ್ಣಗೊಳಿಸಿದವರಿಗೆ ಮಾತ್ರ ಅವಕಾಶ ಇದೆ. ಉದ್ಯೋಗಗಳು ಕೂಡ ಬೆರಳೆಣಿಕೆಯಷ್ಟು ಇದ್ದಿದ್ದರಿಂದ ಅಭ್ಯರ್ಥಿಗಳು ಆದಷ್ಟು ಬೇಗ ಎಲ್ಲ ದಾಖಲೆಗಳನ್ನು ಸಿದ್ಧ ಪಡಿಸಿಕೊಂಡು ಅರ್ಜಿ ಸಲ್ಲಿಬೇಕು.
ಕೇಂದ್ರ ಸರ್ಕಾರದಡಿ ಐಟಿಬಿಪಿ ಇಲಾಖೆ ಬರುತ್ತಿದೆ. ಸದ್ಯ ಇದೀಗ ಗ್ರೂಪ್- ಎ, 27 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿ ಸಲ್ಲಿಸಬೇಕು ಎನ್ನುವವರು ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
ಇದನ್ನೂ ಓದಿ:ಕ್ರೀಡಾ ಸಚಿವಾಲಯ ಅಡಿ ಉದ್ಯೋಗಗಳ ನೇಮಕಾತಿ.. ಎಷ್ಟು ಹುದ್ದೆಗಳು ಖಾಲಿ ಇವೆ?
ವಿದ್ಯಾರ್ಹತೆ ಏನು ಕೇಳಲಾಗಿದೆ?
ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಆಹ್ವಾನಿಸಿರುವ ಉದ್ಯೋಗಗಳಿಗೆ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಪದವಿಯಲ್ಲಿ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ (Veterinary Science and Animal Husbandry) ಕೋರ್ಸ್ ಅನ್ನೇ ಮಾಡಿರಬೇಕು. ಇಂತಹವರಿಗೆ ಮಾತ್ರ ಅರ್ಜಿಗೆ ಹಾಕಲು ಅವಕಾಶ ಇದೆ. ಹೆಚ್ಚುವರಿಯಾಗಿ, ಅಭ್ಯರ್ಥಿಗಳು ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿಕೊಳ್ಳಬೇಕು.
ಈ ಉದ್ಯೋಗಗಳಿಗೆ ಇರುವ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ನೀಡುವುದಾದರೆ, ಜನರಲ್, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು 400 ರೂಪಾಯಿಗಳನ್ನು ಪಾವತಿ ಮಾಡಬೇಕು. ಅದರಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ, ಮಹಿಳೆಯರಿಗೆ ಶುಲ್ಕ ವಿನಾಯತಿ ಇದೆ.
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಭ್ಯರ್ಥಿಗಳು ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಮುಖಪುಟ (homepage) ದಲ್ಲಿ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ. ನೋಂದಣಿ ನಂತರ ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸಬೇಕು. ಅಂತಿಮವಾಗಿ ಸಬ್ಮೀಟ್ ಕೊಟ್ಟು ಅರ್ಜಿಯ ಪಿಂಟ್ ಅನ್ನು ತೆಗೆದುಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ