/newsfirstlive-kannada/media/post_attachments/wp-content/uploads/2024/10/Itel-Flip-One.jpg)
Itel Flip One: ಫ್ಲಿಪ್ ಸ್ಮಾರ್ಟ್ಫೋನ್ಗಳು ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆಯನ್ನು ಪಡೆದಿವೆ. ಈಗಾಗಲೇ ಜನಪ್ರಿಯ ಕಂಪನಿಗಳು ಫ್ಲಿಪ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇದೀಗ ಐಟೆಲ್ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಫ್ಲಿಪ್ ಒನ್ ಫೋನನ್ನು ಪರಿಚಯಿಸಿದೆ.
ಐಟೆಲ್ ಪರಿಚಯಿಸಿರುವ ಫ್ಲಿಪ್ ಫೋನ್ ಕೀಪ್ಯಾಡ್ ಫೀಚರ್ ಫೋನ್ ಆಗಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಪ್ರೀಮಿಯಂ ಲೆದರ್ ಬ್ಯಾಕ್ ಮತ್ತು ಗ್ಲಾಸ್ ಕೀಬೋರ್ಡ್ ವಿನ್ಯಾಸದಲ್ಲಿ ಪರಿಚಯಿಸಿದೆ.
ಇದನ್ನೂ ಓದಿ: BSNL ಮತ್ತಷ್ಟು ಗ್ರಾಹಕರ ಸ್ನೇಹಿ.. Jio, Airtelನಲ್ಲಿ ಇಲ್ಲದ ವಿಶೇಷ ಸೌಲಭ್ಯ, ದುಸ್ರಾ ಮಾತಾಡಂಗೇ ಇಲ್ಲ!
ಐಟೆಲ್ ಫ್ಲಿಪ್ ಒನ್ 2.4 ಇಂಚಿನ ಡಿಸ್ಪ್ಲೇ ಹೊಂದಿದ್ದು, ಇದರಲ್ಲಿ 1200mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದ್ರೆ 7 ದಿನಗಳವರೆಗೆ ಬರುತ್ತೆ. ಟೈಪ್-ಸಿ ಚಾರ್ಜಿಂಗ್ ಪೋರ್ಟ್ನೊಂದಿಗೆ ಬರುತ್ತದೆ.
ಇದನ್ನೂ ಓದಿ: ಪ್ರೀತಿಸಿದ ಯುವಕನ ಜೊತೆಗೆ ಮದುವೆಗೆ ನಿರಾಕರಣೆ.. ಕುಟುಂಬದ 13 ಜನರನ್ನು ವಿಷ ಹಾಕಿ ಕೊಂದ ಯುವತಿ
ಗ್ರಾಹಕರಿಗಾಗಿ ಐಟೆಲ್ ಫ್ಲಿಪ್ ಒನ್ ತಿಳಿ ನೀಲಿ, ಕಿತ್ತಳೆ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. 2499 ರೂಪಾಯಿಗೆ ಖರೀದಿಸಲು ಸಿಗುತ್ತದೆ. ಇದರ ಖರೀದಿ ಜೊತೆಗೆ ಒಂದು ವರ್ಷದ ವ್ಯಾರಂಟಿಯನ್ನು ಕಂಪನಿ ನೀಡಿದೆ.
ಇದಲ್ಲದೆ ಈ ಫೋನಿನಲ್ಲಿ ಕಿಂಗ್ ವಾಯ್ಸ್ ವೈಶಿಷ್ಟ್ಯ, ಬ್ಲೂಟೂತ್ ಕರೆ ಸೌಲಭ್ಯ, 13 ಭಾಷೆಗಳ ಬೆಂಬಲವನ್ನು ಐಟೆಲ್ ಫ್ಲಿಪ್ ಒನ್ ಪಡೆದಿದೆ. ಡ್ಯುಯೆಲ್ ಸಿಮ್ ಕಾರ್ಡ್ನಲ್ಲಿ. ವಿಜಿಎ ಕ್ಯಾಮೆರಾವನ್ನು ನೀಡಲಾಗಿದೆ. ಎಫ್ಎಮ್ ರೇಡಿಯೋ ಕೂಡ ಆಲಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ