/newsfirstlive-kannada/media/post_attachments/wp-content/uploads/2024/04/sallu1.jpg)
ಬಾಲಿವುಡ್​​ ಸ್ಟಾರ್​​​ ನಟ ಸಲ್ಮಾನ್​​ ಖಾನ್​​ಗೆ ಮತ್ತೆ ಜೀವ ಭಯ ಶುರುವಾಗಿದೆ. ಸಲ್ಮಾನ್​ ಮನೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಗ್ಯಾಂಗ್‌ಸ್ಟರ್ ಲಾರೆನ್ಸ್​​​ ಬಿಶ್ನೋಯ್​​ ತಂಡ ಘಟನೆಯ ಹೊಣೆ ಹೊತ್ತಿದೆ. ಇದು ಕೇವಲ ಟ್ರೇಲರ್​ ಅಷ್ಟೇ ಅಂತ ವಾರ್ನಿಂಗ್ ಕೊಟ್ಟಿದೆ. ಬಾಲಿವುಡ್​​​ನ ನಟ ಸಲ್ಮಾನ್​ ಖಾನ್​ಗೆ ಜೀವ ಬೆದರಿಕೆ ಇರುವುದು, ಅದಕ್ಕಾಗಿ ಅವರಿಗೆ ಭಾರೀ ಭದ್ರತೆ ಒದಗಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇದೀಗ ಬಾಲಿವುಡ್​​​​ ಬ್ಯಾಡ್​ ಬಾಯ್‌ಗೆ ಮತ್ತೆ ಆತಂಕ ಎದುರಾಗಿದೆ. ದುಷ್ಕರ್ಮಿಗಳು ಸಲ್ಲೂ ಮನೆ ಮುಂದೆ ಗುಂಡಿನ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದಾರೆ.
ಇದನ್ನೂ ಓದಿ:ಫಿಲಿಪ್ ಸಾಲ್ಟ್ ಭರ್ಜರಿ ಬ್ಯಾಟಿಂಗ್.. ಕೋಲ್ಕತ್ತಾ ವಿರುದ್ಧ ಕನ್ನಡಿಗ ಕೆ.ಎಲ್ ರಾಹುಲ್ ಪಡೆಗೆ ಹೀನಾಯ ಸೋಲು
/newsfirstlive-kannada/media/post_attachments/wp-content/uploads/2024/04/SALMAN_KHAN.jpg)
ಸಲ್ಮಾನ್ ಖಾನ್ ಹತ್ಯೆಗೆ ನಡೀತಾ ಸ್ಕೆಚ್?
ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್​ ಖಾನ್​ ಅವರ ಮುಂಬೈ ಬಾಂದ್ರಾ ಪ್ರದೇಶದಲ್ಲಿರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್ ಮೇಲೆ ದುಷ್ಕರ್ಮಿಗಳು ಫೈರಿಂಗ್​ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಐದು ಗಂಟೆ ಸುಮಾರಿಗೆ ಎರಡು ಬೈಕ್​​ನಲ್ಲಿ ಬಂದ ಅಪರಿಚಿತರು ಸಲ್ಲು ನಿವಾಸದ ಮೇಲೆ ಐದು ಸುತ್ತಿನ ಪೈರಿಂಗ್​ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಸಲ್ಮಾನ್​ ಖಾನ್​ ಮನೆಯಲ್ಲಿದ್ದರೋ, ಇಲ್ವೋ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಘಟನೆ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಕ್ರೈಂ ಬ್ಯಾಂಚ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಚುರುಕು ಮಾಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್​​ ಶಿಂಧೆ ಸಹ ಸಲ್ಮಾನ್​​ ಖಾನ್​ಗೆ ಕರೆ ಮಾಡಿ ಮಾತನಾಡಿ ಭದ್ರತೆಯನ್ನ ಹೆಚ್ಚಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/04/SALMAN_KHAN_1.jpg)
ಇದು ‘ಟ್ರೇಲರ್​’ ಅಷ್ಟೆ ಎಂದ ಅನ್ಮೋಲ್​​​
ಸಲ್ಮಾನ್​ ಖಾನ್​ ಮನೆ ಮುಂದೆ ನಡೆದ ಕೃತ್ಯವನ್ನು ಲಾರೆನ್ಸ್​​​​ ಗ್ಯಾಂಗ್​​​​ ಕಡೆ ಅವರೇ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು, ಆದ್ರೆ ಘಟನೆ ನಡೆದು ಕೆಲ ಹೊತ್ತಿನ ಬಳಿಕ, ಈ ಘಟನೆ ನಡೆಸಿದ್ದು ನಾವೇ ಅಂತ ಲಾರೆನ್ಸ್​​​ ಬಿಶ್ನೋಯ್​​​ ಸಹೋದರ ಅನ್ಮೋಲ್​​ ಬಿಶ್ನೋಯ್​​​ ಫೇಸ್​ಬುಕ್​ನಲ್ಲಿ ಪೋಸ್ಟ್​​​ ಮಾಡಿದ್ದಾರೆ. ಸಲ್ಮಾನ್​ ಇದು ಕೇವಲ ಟ್ರೇಲರ್ ಅಷ್ಟೆ, ಇದು ನಿಮಗೆ ಕೊನೆಯ ಎಚ್ಚರಿಕೆ ಅಂತ ಬೆದರಿಕೆ ಹಾಕಿದ್ದಾರೆ. ಸಲ್ಮಾನ್​ಗೆ ಈಗಾಗಲೇ ಸರ್ಕಾರ ವೈ ಪ್ಲಸ್​​​ ಭದ್ರತೆಯನ್ನ ಒದಗಿಸಿದೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಅವರ ಮೇಲೆ ಕೊಲೆ ಬೆದರಿಕೆ ಬರುತ್ತಿರುವುದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us