Advertisment

ಸಿನಿಮಾ ಹೀರೋ, ಹೀರೋಯಿನ್ ಥರಾ ನೀವು ಕಾಣಬೇಕಾ? ಅದು IV ಬ್ಯೂಟಿ ಥೆರಪಿಯಿಂದ ಮಾತ್ರ ಸಾಧ್ಯ!

author-image
Bheemappa
Updated On
ಸಿನಿಮಾ ಹೀರೋ, ಹೀರೋಯಿನ್ ಥರಾ ನೀವು ಕಾಣಬೇಕಾ? ಅದು IV ಬ್ಯೂಟಿ ಥೆರಪಿಯಿಂದ ಮಾತ್ರ ಸಾಧ್ಯ!
Advertisment
  • ಐವಿ ಥೆರಪಿ ಮೊರೆ ಹೋಗುತ್ತಿರುವ ಭಾರತದ ಸಾಕಷ್ಟು ಜನರು
  • ವಯಸ್ಸು ಆಗಿಲ್ಲವೆಂಬಂತೆ ಕಾಣಲು ಇದನ್ನು ಒಮ್ಮೆ ಟ್ರೈ ಮಾಡಿ!
  • ಯಂಗ್ ಆಗಿ ಕಾಣಬೇಕಾ, ತ್ವಚೆ ಹೊಳೆಯಬೇಕಂದ್ರೆ, IV ಬೇಕು

ಸುಂದರ, ಅತಿ ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಅದರಲ್ಲೂ ಮಹಿಳೆಯರಲ್ಲಿ ನಾನೇ ಚೆನ್ನಾಗಿ ಕಾಣಬೇಕು ಎನ್ನುವ ಪೈಪೋಟಿ ಜಾಸ್ತಿನೇ ಇರುತ್ತದೆ. ಹೀಗಾಗಿ ಬ್ಯೂಟಿ ಪಾರ್ಲರ್​, ಸ್ಪಾ, ಮಸಾಜ್‌ ಹಾಗೂ ಫೇಶಿಯಲ್​ಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಾರೆ. ಸದ್ಯ ಇಂತಹವುಗಳ ಸಾಲಿಗೆ ಮತ್ತೊಂದು ಸೇರ್ಪಡೆಗೊಂಡಿದೆ. ಅದೇ IV ಅಂದರೆ ಇಂಟ್ರಾವೆನಸ್. ಹ್ಹಾ.. ಹೀಗಂದರೆ ಏನು ಎನ್ನುವುದಕ್ಕೆ ಉತ್ತರ ಇಲ್ಲಿದೆ.

Advertisment

ಇದನ್ನೂ ಓದಿ:ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

ಇಂಟ್ರಾವೆನಸ್ ಅಥವಾ IV ಎನ್ನುವುದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿಗಳನ್ನು ದ್ರವದ (ಲಿಕ್ವಿಡ್​) ರೂಪದಲ್ಲಿ ದೇಹಕ್ಕೆ ನೀಡುವ ವಿಧಾನವಾಗಿದೆ. ಈಗಾಗಲೇ ಹೆಚ್ಚಿನ ಜನರು ಈ IV ಥೆರಪಿ ಕುರಿತು ತಿಳಿದುಕೊಂಡಿದ್ದಾರೆ. ಆದರೆ ಸಾಮಾನ್ಯ ಜನರಿಗೆ ಇದರ ಅರಿವು ಕಡಿಮೆ ಇದೆ ಎನ್ನಬಹುದು. ಸದ್ಯ ವಿಶ್ವದಾದ್ಯಂತ ಈ ವೈದ್ಯಕೀಯ ತಂತ್ರವನ್ನು ಸೌಂದರ್ಯದ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ. ಅಮೆರಿಕದ ಬ್ಯೂಟಿ ನಟಿ ಕಿಮ್ ಕರ್ದಾಶಿಯನ್, ಮಾಡೆಲ್ ಕೆಂಡಾಲ್ ಜೆನ್ನರ್ ಹಾಗೂ ಸಿಂಗರ್ ಅಡೆಲ್ ಇವರೆಲ್ಲರೂ ಈ ಥೆರಪಿಯ ಪೋಸ್ಟರ್​ಗಳಾಗಿದ್ದಾರೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಲಾರಿ.. ಡ್ರೈವರ್​ ಸೇಫ್ ಆದ್ರಾ?

Advertisment

publive-image

ಸದ್ಯ ಇಂತಹ ಐವಿ ಥೆರಪಿ ಭಾರತಕ್ಕೂ ಕಾಲಿಟ್ಟಿದ್ದು ಸಾಕಷ್ಟು ಜನರು ಇದರ ಮೊರೆ ಹೋಗುತ್ತಿದ್ದಾರೆ. ಹೊಳೆಯುವ ಚರ್ಮಕ್ಕಾಗಿ, ಎನಾನ್ಸಡ್​ ಇಮ್ಯುನಿಟಿ, ಕೂದಲು ಉದುರುವುದನ್ನ ತಡೆಯಲು, ವಯಸ್ಸು ಆಗದಂತೆ ಕಾಣಲು, ಬ್ಯೂಟಿಯಾಗಿ ಕಾಣಲು ಉತ್ತಮವಾದ ಕ್ಲಿನಿಕ್​ಗಳಿಗೆ ತೆರಳಿ ಜನ ಈ ಐವಿ ಥೆರಪಿ ಪಡೆದುಕೊಳ್ಳುತ್ತಿದ್ದಾರೆ. ಕೆಲವೊಂದು ಆಸ್ಪತ್ರೆಗಳಲ್ಲಿ ಮಹಿಳೆಯರು ಎಲ್ಲಾ ಚೆನ್ನಾಗಿದ್ದರು ಬೆಡ್​​ ಮೇಲೆ ಕೈಗೆ ಇಂಜೆಕ್ಷನ್​ ಹಾಕಿಸಿಕೊಂಡು ಗ್ಲೂಕೋಸ್ ಮಾದರಿಯ ಬಾಟಲಿಯಿಂದ ಈ ಐವಿ ತೆಗೆದುಕೊಳ್ಳುವುದನ್ನು ನೋಡಿರುತ್ತೀರಿ. ಅವರು ತಮ್ಮ ಸೌಂದರ್ಯಕ್ಕಾಗಿ ಇದನ್ನು ತೆಗೆದುಕೊಳ್ಳುತ್ತಿರುತ್ತಾರೆ.

ಒಮ್ಮೆ ಬಾಲಿವುಡ್ ಹೀರೋ ಅರ್ಜುನ್ ಕಪೂರ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಸ್ಪತ್ರೆಯ ಬೆಡ್​ ಮೇಲೆ ಇರೋ ಫೋಟೋ ಶೇರ್ ಮಾಡಿದ್ದರು. ಈ ವೇಳೆ ಅವರ ಫ್ಯಾನ್ಸ್​ ಆತಂಕ ವ್ಯಕ್ತಪಡಿಸಿದ್ದರು. ಆದರೆ ಅರ್ಜುನ್ ಕಪೂರ್, ವಿಟಮಿನ್ ಥೆರಪಿ ಪಡೆದುಕೊಳ್ಳಲು ಆಸ್ಪತ್ರೆಗೆ ತೆರಳಿದ್ದರು. ತಮ್ಮ ರಕ್ತಕ್ಕೆ ನೇರವಾಗಿ ಹೆಚ್ಚಿನ ಜೀವಸತ್ವ ಹಾಗೂ ಖನಿಜಗಳನ್ನು ಪಡೆಯಲು ಈ ಐವಿ ಥೆರಪಿ ತೆಗೆದುಕೊಂಡಿದ್ದರು. ಇದು ನಾವು ಸೇವಿಸಿದಂತ ಆಹಾರದ ಜೀರ್ಣಕ್ರಿಯೆಯ ಪ್ರಕ್ರಿಯೆ ಬೈಪಾಸ್ ಮಾಡುವುದರಿಂದ ಐವಿ ಚಿಕಿತ್ಸೆ, ಜೀವಸತ್ವಗಳು ಮತ್ತು ಖನಿಜಗಳನ್ನ ಬೇಗನೆ ಹೀರಿಕೊಳ್ಳಲು ಸಹಕರಿಸುತ್ತದೆ. ಚರ್ಮದ ಆರೈಕೆ ಹೊರ ಭಾಗದಿಂದ ಅಷ್ಟಾಗಿ ಸಾಧ್ಯವಿಲ್ಲ. ಆದರೆ ಒಳಗಿನಿಂದ ಚರ್ಮವನ್ನು ಬೇಗನೆ ಆರೈಕೆ ಮಾಡಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು. ಇದಕ್ಕೆ ಐಪಿ ಥೆರಪಿ ತೆಗೆದುಕೊಂಡರೇ ಪಳ.. ಪಳ.. ಹೊಳೆಯುವ ಚರ್ಮ ಪಡೆಯುವುದು ಸುಲಭ ಎನ್ನಬಹುದು.

ಇದನ್ನೂ ಓದಿ: ಮಫ್ಲರ್​​ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?

Advertisment

publive-image

IV ಸೌಂದರ್ಯ ಚಿಕಿತ್ಸೆ ಎಂದರೇನು?
ಡ್ರಿಪ್‌ಗಳಲ್ಲಿ ಡ್ರಿಪ್​​ಗಳಲ್ಲಿ ಗ್ಲುಟಾಥಿಯೋನ್ ಹೊರತುಪಡಿಸಿದರೆ ವಿಟಮಿನ್ C, B (B1, B2, B3, B5, B6 ಮತ್ತು B12), ಬಯೋಟಿನ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸತುವನ್ನು ಬಳಸಲಾಗುವ ಸಾಮಾನ್ಯ ಪೋಷಕಾಂಶಗಳಾಗಿವೆ. ಇವು ರಕ್ತದಲ್ಲಿ ಸೇರಿಕೊಳ್ಳುವುದರಿಂದ ಸಾಮಾನ್ಯವಾಗಿ ಮನುಷ್ಯನ ಸೌಂದರ್ಯ ದುಪ್ಪಟ್ಟು ಆಗುತ್ತದೆ.

ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!

ಐವಿ ಬ್ಯೂಟಿ ಡ್ರಿಪ್ಸ್ ಇಂಟ್ರಾವೆನಸ್ ಇನ್ಫ್ಯೂಷನ್‌ಗಳಾಗಿದ್ದು ಚರ್ಮದ ಆರೋಗ್ಯ ಸುಧಾರಿಸಿ ನಮ್ಮನ್ನು ಇನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತವೆ. ಐವಿ ಸೌಂದರ್ಯ ಚಿಕಿತ್ಸೆ ಎಂದರೆ ಒಬ್ಬ ಮನುಷ್ಯನನ್ನು ಸಂಪೂರ್ಣವಾಗಿ ಯಂಗ್ ಆ್ಯಂಡ ಎನರ್ಜಿಟಿಕ್ ಆಗಿರುವಂತೆ ಕಣುವಂತೆ ಮಾಡುತ್ತದೆ. ಆರೋಗ್ಯ ಸುಧಾರಿಸಲು ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳ ಮಿಶ್ರಣ ನೇರವಾಗಿ ರಕ್ತದ ಜೊತೆ ಬೆರೆಯುವಂತೆ ಉದ್ದೇಶಿಸಲಾಗಿರುವ ಥೆರಪಿಯೇ ಐವಿ. ಐವಿ ಡ್ರಿಪ್ಸ್ ತ್ವಚೆಯನ್ನ ಹೈಡ್ರೇಟ್ ಮಾಡಿ ವಯಸ್ಸಿನ ಪ್ರಕ್ರಿಯೆ ನಿಧಾನಗೊಳಿಸುತ್ತದೆ. ಇದರಿಂದ ಆರೋಗ್ಯಕರವಾದ ಹೊಳಪು ತ್ವಚೆಗೆ ಬರುತ್ತದೆ ಎಂದು ಚರ್ಮರೋಗ ತಜ್ಞ ಡಾ.ವೀನು ಜಿಂದಾಲ್ ಹೇಳುತ್ತಾರೆ.

Advertisment

ವಿಟಮಿನ್​ಗಳಿಂದ ಚರ್ಮಕ್ಕೆ ಹೇಗೆ ಪ್ರಯೋಜನ? 

  • ವಿಟಮಿನ್ ಸಿ: ಕಾಲಜನ್ ಉತ್ಪಾದನೆ ಹೆಚ್ಚಿಸುವುದರಿಂದ ಚರ್ಮದ ವಿನ್ಯಾಸ ಸುಧಾರಿಸಿ ಮೈ ಬಣ್ಣ ಕಾಂತಿಯುತವಾಗುತ್ತದೆ.
  • ಗ್ಲುಟಾಥಿಯೋನ್: ಉತ್ಕರ್ಷಣ ನಿರೋಧಕ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ಚರ್ಮದ ಟೋನ್ ಹೆಚ್ಚಿಸುತ್ತದೆ.
  • ವಿಟಮಿನ್ ಬಿ-2: ಶಕ್ತಿ ಉತ್ಪಾದನೆಗೆ ಅವಶ್ಯಕವಾದ ವಿಟಮಿನ್. ಉರಿಯೂತ ಕಡಿಮೆ ಮಾಡಲು ಸಹಾಯ ಮಾಡಿ ಆರೋಗ್ಯಕರ ಚರ್ಮಕ್ಕೆ ಸಹಕರಿಸುತ್ತೆ.
  • ವಿಟಮಿನ್ ಬಿ- 3: ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸಿ ಉರಿಯೂತ ಕಡಿಮೆ ಮಾಡುವುದರೊಂದಿಗೆ ಚರ್ಮದ ಹೊಳಪಿಗೆ ಕಾರಣವಾಗುತ್ತೆ.
  • ವಿಟಮಿನ್ ಬಿ- 5: ಚರ್ಮವನ್ನು ಹೈಡ್ರೇಟ್ ಮಾಡಿ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.
  • ವಿಟಮಿನ್ B- 6: ಕಾಲಜನ್ ಉತ್ಪಾದನೆಯಿಂದ ಉರಿಯೂತ ಕಡಿಮೆಗೊಳಿಸಿ ಚರ್ಮದ ಆರೈಕೆ ಉತ್ತೇಜಿಸುತ್ತದೆ.
  • ಬಯೋಟಿನ್: ಕೂದಲು, ಉಗುರುಗಳು ಮತ್ತು ಚರ್ಮವನ್ನು ಬಲಪಡಿಸುತ್ತದೆ.

publive-image

ಐವಿ ಬ್ಯೂಟಿ ಡ್ರಿಪ್‌ಗಳನ್ನು ತೆಗೆದುಕೊಳ್ಳುವಾಗ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಇದು ನಿಮಗೆ ಅವಶ್ಯಕ ಇದೆಯೇ, ಇದರಿಂದ ಯಾವುದಾದ್ರೂ ಅಪಾಯಗಳು ಇವೆಯಾ, ಡ್ರಿಪ್​ಗಳು ಪರಿಣಾಮಕಾರಿ ಆಗಿವೆಯೇ ಎಂಬುದನ್ನ ಮನನ ಮಾಡಿಕೊಳ್ಳಬೇಕು. ಈ ಚಿಕಿತ್ಸೆ ಆರೋಗ್ಯವಂತ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಅಲ್ಲದೇ ಸೂಕ್ತ ವೈದ್ಯರ ಬಳಿ ಇದರ ಬಗ್ಗೆ ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳಬೇಕು. ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳು ಇರುವವರು ಇದನ್ನು ತೆಗೆದುಕೊಳ್ಳಬಾರದು. ಕೆಲವೊಮ್ಮೆ ಆರೋಗ್ಯವಂತರ ಮೇಲೆಯು ಅಡ್ಡ ಪರಿಣಾಮವಾಗೋ ಸಾಧ್ಯತೆ ಇರುತ್ತದೆ. ಹೀಗಾಗಿ ಬೇರೆ ಇತರೆ ಕಾಯಿಲೆ ಹಾಗೂ ಅಲರ್ಜಿಗಳಿದ್ದರೇ ಮೊದಲೇ ತಿಳಿಸಿರಬೇಕು. ವೈದ್ಯರ ಸಲಹೆ ಮೇರೆಗೆ ಈ ಐವಿ ಬ್ಯೂಟಿ ಡ್ರಿಪ್‌ ತೆಗೆದುಕೊಳ್ಳುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment