newsfirstkannada.com

ಬಾಂಗ್ಲಾ ಪ್ರಧಾನಿಗೆ ಆದ ಗತಿಯೇ ನಿಮಗೂ ಬರುತ್ತೆ.. ರಾಜ್ಯಪಾಲರ ವಿರುದ್ಧ ಐವಾನ್ ಡಿಸೋಜಾ ಮಾತಿಗೆ ಆಕ್ರೋಶ!

Share :

Published August 20, 2024 at 6:51am

    ಪ್ರಾಸಿಕ್ಯೂಷನ್ ವಿರುದ್ಧ ಹೋರಾಟದಲ್ಲಿ ಸಿಎಂಗೆ ತಾತ್ಕಾಲಿಕ ರಿಲೀಫ್

    ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂದ ಸಿಎಂ ಸಿದ್ದರಾಮಯ್ಯ

    ಮಾತಿನಿಂದ ಸಮಸ್ಯೆಯೊಂದನ್ನ ಮೈ ಮೇಲೆ ಎಳೆದುಕೊಂಡ ಐವಾನ್ ಡಿಸೋಜಾ

ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಸಿಎಂಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಸಂಭ್ರಮಾಚರಣೆ ಮನೆ ಮಾಡಿದೆ. ಈ ನಡುವೆ ಸಿದ್ದು ಬೆಂಬಲಿಸಿ ಪ್ರತಿಭಟಿಸ್ತಿದ್ದ ಐವಾನ್ ಡಿಸೋಜಾ, ತಮ್ಮ ಮಾತಿನಿಂದಲೇ ಸಮಸ್ಯೆಯೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಗವರ್ನರ್ ವರ್ಸಸ್ ಸರ್ಕಾರದ ನಡುವಿನ ಸಮರ ಪೀಕ್ ಲೆವೆಲ್​ಗೆ ಬಂದು ನಿಂತಿದೆ. ರಾಜಕೀಯದ ಹೊರತಾಗಿ ಕಾನೂನು ಹೋರಾಟದ ಹಾದಿ ಶುರುವಾಗಿತ್ತು. ದಿಢೀರ್​ ಅಂತ ಬಂದು ಅಪ್ಪಳಿಸಿದ ಭೂ ಬೇತಾಳನಿಂದ ತಲ್ಲಣಿಸಿದ ಸಿಎಂ ಸಿದ್ದರಾಮಯ್ಯ, ದಿಢೀರ್​​ ಚೇತರಿಕೆ ಕಂಡು ಗವರ್ನರ್ ಅನುಮತಿಸಿದ್ದ ಪ್ರಾಸಿಕ್ಯೂಷನ್‌ ವಿರುದ್ಧ ತೊಡೆತಟ್ಟಿದ್ದಾರೆ. ಕಾನೂನು ಸಂಕೋಲೆ ಬಿಡಿಸಿಕೊಳ್ಳಲು ಹೈಕೋರ್ಟ್​​ನಲ್ಲಿ ಮಹಾ ಹೋರಾಟವೇ ನಡೆದಿದ್ದು, ಸಿದ್ದರಾಮಯ್ಯಗೆ ವಾರದ ರಿಲೀಫ್​​ ಸಿಕ್ಕಿದೆ.

ಹೈಕೋರ್ಟ್​ನ ಆದೇಶ ಸ್ವಾಗತಿಸಿದ ಸಿದ್ದರಾಮಯ್ಯ

ಹೈಕೋರ್ಟ್​ನಿಂದ ತಾತ್ಕಾಲಿಕ ರಿಲೀಫ್ ಸಿಗ್ತಿದ್ದಂತೆ, ಈ ಆದೇಶವನ್ನ ಸಿಎಂ ಸ್ವಾಗತಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರೋ ಸಿಎಂ ಸತ್ಯಮೇವ ಜಯತೇ ಎಂದಿದ್ದಾರೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸತ್ಯಕ್ಕೆ ಅಂತಿಮ ಗೆಲುವು’

ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಈ ನೆಲದ ಕಾನೂನನ್ನು ಗೌರವಿಸುವ ಓರ್ವ ಪ್ರಜೆಯಾಗಿ ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಣಯದ ವಿರುದ್ಧ ಘನ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ, ಮುಂದಿನ ವಿಚಾರಣೆಯವರೆಗೆ ವಿಶೇಷ ನ್ಯಾಯಾಲಯಗಳು ವಿಚಾರಣೆ ಮುಂದೂಡಬೇಕು, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ.
#ಸತ್ಯಮೇವಜಯತೆ
-ಸಿಎಂ ಸಿದ್ದರಾಮಯ್ಯ

ಹೀಗೆ ಸತ್ಯಮೇವ ಜಯತೇ ಅಂತಾ ಹೋರಾಟದಲ್ಲಿ ಜೋಶ್​ನೊಂದಿಗೆ ಮುನ್ನುಗ್ಗೋ ಸುಳಿವನ್ನ ಸಿಎಂ ನೀಡಿದ್ದಾರೆ. ಇನ್ನೊಂದೆಡೆ ಹೈಕೋರ್ಟ್​ನ ಆದೇಶದ ಬೆನ್ನಲ್ಲೇ ಸಂಭ್ರಮಾಚರಣೆಯೂ ಹಸ್ತಪಡೆಯ ಮೊಗಸಾಲೆಯಲ್ಲಿ ಕಾಣಸಿಕ್ಕಿತ್ತು. ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಎಂಎಲ್​ಸಿ ಐವಾನ್ ಡಿಸೋಜಾ ನೇತೃತ್ವದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರು ಸಂಭ್ರಮದ ಸದ್ದು ಮಾಡಿದ್ರು.

ಹೀಗೆ ಸಂಭ್ರಮಾಚರಣೆ ಮಾಡ್ತಿರೋ ಐವಾನ್ ಡಿಸೋಜಾ ಯಡವಟ್ಟೊಂದನ್ನ ಮಾಡ್ಕೊಂಡಿದ್ದಾರೆ. ತಮ್ಮ ಮಾತಿನಿಂದಲೇ ಸಮಸ್ಯೆಯೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ MLC ಐವನ್ ಡಿಸೋಜಾ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಐವನ್ ಡಿಸೋಜಾ ಎಚ್ಚರಿಕೆಯೊಂದನ್ನ ನೀಡಿದ್ದರು. ರಾಜ್ಯಪಾಲರನ್ನ ರಾಷ್ಟ್ರಪತಿ ಹಿಂದಕ್ಕೆ ಕರೆಸಿಕೊಳ್ಳದಿದ್ರೆ ಬಾಂಗ್ಲಾ ಪ್ರಧಾನಿಗೆ ಆದ ಗತಿಯೇ ಬರುತ್ತೆ ಅನ್ನೋ ವಾರ್ನಿಂಗ್ ಗವರ್ನರ್​ಗೆ​ ಕೊಟ್ಟಿದ್ರು.

ಯಾವಾಗ ಇಂಥದ್ದೊಂದು ಹೇಳಿಕೆಯನ್ನ ಐವಾನ್ ಡಿಸೋಜಾ ನೀಡಿದ್ರೋ ಆಕ್ರೋಶ ಭುಗಿಲೆದ್ದಿತ್ತು. ಐವನ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯ್ತು. ಬಿಜೆಪಿ ಯುವಮೋರ್ಚಾದ ಪಡೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆ ಮುಂಭಾಗ ಧರಣಿ ಕುಳಿತು ಹೋರಾಟದ ಕಹಳೆ ನಡೆಸ್ತು.

ಹೀಗೆ ಪ್ರತಿಭಟಿಸೋ ಜೊತೆಗೆ ಐವಾನ್ ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪಟ್ಟು ಬಿಗಿಗೊಳಿಸಲಾಗಿತ್ತು. ಕಾನೂನು ತಜ್ಞರ ಸಲಹೆ ಪಡೆದು‌ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಲಿಖಿತ ಭರವಸೆ ಕೊಟ್ಟ ಮೇಲಷ್ಟೇ ಬಿಜೆಪಿ ಯುವ ಮೋರ್ಚಾ ಮುಖಂಡರು ಪ್ರತಿಭಟನೆ ಹಿಂಪಡೆದುಕೊಂಡ್ರು.

ಒಟ್ನಲ್ಲಿ ಐವಾನ್ ಡಿಸೋಜಾರಿಗೆ ತಮ್ಮ ಮಾತೇ ಮುಳುವಾಗಿ ಕಾಡೋ ಸಾಧ್ಯತೆ ಕಂಡು ಬರ್ತಿದೆ. ಅತ್ತ ಒಂದು ವಾರದ ರಿಲೀಫ್ ಪಡೆದಿರೋ ಸಿಎಂ ಸಿದ್ದರಾಮಯ್ಯ ಮುಂದಿನ ಹೋರಾಟಕ್ಕೆ ಅಣಿಯಾಗ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾ ಪ್ರಧಾನಿಗೆ ಆದ ಗತಿಯೇ ನಿಮಗೂ ಬರುತ್ತೆ.. ರಾಜ್ಯಪಾಲರ ವಿರುದ್ಧ ಐವಾನ್ ಡಿಸೋಜಾ ಮಾತಿಗೆ ಆಕ್ರೋಶ!

https://newsfirstlive.com/wp-content/uploads/2024/08/Ivan-Dsouza.jpg

Load More