/newsfirstlive-kannada/media/post_attachments/wp-content/uploads/2025/04/OM-PRAKASH-1.jpg)
ನಿವೃತ್ತ ಐಪಿಎಸ್ ಓಂ ಪ್ರಕಾಶ್ ಪ್ರಕರಣದ ತನಿಖೆಯಲ್ಲಿ ಭಾರೀ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಕೊಲೆ ಮಾಡಿದ ಬಳಿಕ ಪತ್ನಿ ಪಲ್ಲವಿ ವಿಡಿಯೋ ಕಾಲ್ ಮಾಡಿದ್ದರಂತೆ!
ವಾರದ ಹಿಂದೆಯೂ ಇಬ್ಬರ ನಡುವೆ ಗಲಾಟೆ
ಅಂದ್ಹಾಗೆ ಕೊಲೆ ವಿಷಯ ಪೊಲೀಸರಿಗೆ ಮುಟ್ಟಿಸಿದ್ದ ಓಂ ಪ್ರಕಾಶ್ ಪತ್ನಿ ಪಲ್ಲವಿ, ಇತ್ತೀಚೆಗೆ ಸಾಕಷ್ಟು ಕೂಪಿತಗೊಂಡಿದ್ದರು. ಕೆಲ ವಿಷಯಗಳಿಗೆ ಮಾನಸಿಕವಾಗಿ ಜರ್ಜರಿತವಾಗಿದ್ರು. ಈ ಕೊಲೆಗೆ ಕಾರಣ ನಿನ್ನೆ ಆಗಿದ್ದ ಗಲಾಟೆ ಮಾತ್ರವೇ ಅಲ್ಲ ಇದರ ಹಿಂದೆ ವಾರದ ಕಥೆಯೇ ಇದೆ. ವಾರದ ಹಿಂದಷ್ಟೇ ಐಪಿಎಸ್ ಅಧಿಕಾರಿಗಳ ಫ್ಯಾಮಿಲಿ ವಾಟ್ಸಾಪ್ ಗ್ರುಪ್ಗೆ ಓಂ ಪ್ರಕಾಶ್ ಪತ್ನಿ ಪಲ್ಲವಿ, ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ಬಗ್ಗೆ ಮೆಸೇಜ್ ಮಾಡಿದ್ರಂತೆ.
ಇದನ್ನೂ ಓದಿ: CSKಗೆ ಹಿಗ್ಗಾಮುಗ್ಗಾ ಬಾರಿಸಿದ ರೋಹಿತ್, ಸೂರ್ಯಕುಮಾರ್.. ಧೋನಿಗೆ ಭಾರೀ ಅವಮಾನ!
ನನಗೆ ಮತ್ತು ಮಗಳಿಗೆ ಮಾನಸಿಕ, ದೈಹಿಕ ಹಿಂಸೆ ಆರೋಪದ ಜೊತೆಗೆ ಶೂಟ್ ಮಾಡ್ತೀನಿ ಅಂತ ಭಯ ಬೀಳಿಸ್ತಿದ್ರು ಅಂತ ಟೆಕ್ಸ್ಟ್ ಮೆಸೇಜ್ನಲ್ಲಿ ಆರೋಪಿಸಿದ್ರಂತೆ. ನನ್ನ ಪತಿ ಓಂ ಪ್ರಕಾಶ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಅಂತ ಅಧಿಕಾರಿಗಳಿಗೂ ಮನವಿನೂ ಮಾಡಿದ್ದರಂತೆ. ಈಗ ಕೊಲೆ ಬಳಿಕ ಪೊಲೀಸರಿಗೂ ತಾವೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಇನ್ನೋರ್ವ ನಿವೃತ್ತ ಡಿಜಿ ಮತ್ತು ಐಜಿಪಿ ಪತ್ನಿಗೆ ಪಲ್ಲವಿ ವಿಡಿಯೋ ಕಾಲ್ ಮಾಡಿ, I have finished monster ಅಂದ್ರೆ ರಾಕ್ಷಸನ ಸಂಹರಿಸಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಖಾರದ ಪುಡಿ ಎರಚಿ ಕೊಲೆ
ಓಂ ಪ್ರಕಾಶ್ ಹತ್ಯೆಗೂ ಮುನ್ನ ಖಾರದ ಪುಡಿ ಎರಚಿರೋದು ಪತ್ತೆಯಾಗಿದೆ.. ಖಾರದ ಪುಡಿ ಎರಚಿದ ಬಳಿಕ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರೋ ಬಗ್ಗೆ ಶಂಕೆ ಇದೆ.. ಕೊಲೆ ನಡೆದ ಘಟನಾ ಸ್ಥಳದಲ್ಲಿ ಖಾರದ ಪುಡಿ ಇರುವುದು FSL ತಂಡ ದೃಢೀಕರಿಸಿದೆ ಅಂತ ಗೊತ್ತಾಗಿದೆ.
ಇದನ್ನೂ ಓದಿ: ‘ಗೆಲುವಿನ ಕ್ರೆಡಿಟ್ ಯಾರಿಗೆ ಅಂದರೆ..’ ಗೆದ್ದ ಖುಷಿಯಲ್ಲಿ RCB ಕ್ಯಾಪ್ಟನ್ ಹೊಗಳಿದ್ದು ಯಾರನ್ನ..?
ಕೊಲೆ ಮಾಡಿದ್ದ ಸ್ಥಳದಲ್ಲಿ ಪತ್ತೆಯಾಯ್ತು ಎರಡು ಚಾಕು!
ಕೊಲೆ ಮಾಡಿದ ಬಳಿಕ ಓಂ ಪ್ರಕಾಶ್ ಡೆಡ್ ಬಾಡಿಯನ್ನ ಬೆಡ್ ಶೀಟ್ನಲ್ಲಿ ಸುತ್ತಿಟ್ಟಿದ್ದರಂತೆ. ಕೊಲೆ ಮಾಡಿದ್ದ ಸ್ಥಳದಲ್ಲಿ ಪೊಲೀಸರಿಗೆ ಎರಡು ಚಾಕು, ಒಂದು ಬಿಯರ್ ಬಾಟಲ್ ಪತ್ತೆಯಾಗಿದೆ. ಅವೆರಡನ್ನ ಪೊಲೀಸರು ಜಪ್ತಿ ಮಾಡಿ ಫಿಂಗರ್ ಪ್ರಿಂಟ್ ಪರಿಶೀಲನೆ ಕಳುಹಿಸಿದ್ದಾರೆ.
ಇದನ್ನೂ ಓದಿ: ‘ಮನೆಗೆ ಬರ್ಲಾ ಎಂದೆ, ಬೇಡ ಮೇಡಂ ಇದ್ದಾರೆ ಅಂದ್ರು..’ ಹತ್ಯೆ ಆಗುವ ಮೊದಲು ಓಂ ಪ್ರಕಾಶ್ ಮಾತಾಡಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ