newsfirstkannada.com

ಅಮೆರಿಕ ಪೊಲೀಸ್​​​ನಿಂದ ಭಾರತದ ವಿದ್ಯಾರ್ಥಿನಿಯ ಹತ್ಯೆ; ಹೊಸ ತಿರುವು ಪಡೆದುಕೊಂಡ ಪ್ರಕರಣ

Share :

Published February 22, 2024 at 9:05am

Update February 22, 2024 at 9:06am

    23 ವರ್ಷದ ಜಾನ್ವಿ ಕಂದುಲಾ ಅಮೆರಿಕದಲ್ಲಿ ಸಾವು

    ಪೊಲೀಸ್ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಇಲ್ಲ

    ಕಳೆದ ಜನವರಿಯಲ್ಲಿ ಸಾವನ್ನಪ್ಪಿರುವ ಜಾನ್ವಿ ಕಂದುಲಾ

ಭಾರೀ ಸಂಚಲನ ಮೂಡಿಸಿದ್ದ ಜಾನ್ವಿ ಕಂದುಲಾ (Jaahnavi Kandula) ಸಾವು ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಿಸದಿರಲು ಅಮೆರಿಕನ್ ಪೊಲೀಸರು ನಿರ್ಧರಿಸಿದ್ದಾರೆ.

ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಿಸುವುದಿಲ್ಲ ಎಂದು ಕಿಂಗ್ ಕೌಂಟಿ ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ. ಜಾನ್ವಿ ಕಂದುಲಾ ಸಾವು ತುಂಬಾ ದುಃಖ ತಂದಿದೆ. ಪೊಲೀಸ್ ವಾಹನ ಡಿಕ್ಕಿ ಹೊಡೆದು, 23 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿರೋದು ವಿಷಾದಕರ. ಆದರೆ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲು ಯಾವುದೇ ಪುರಾವೆ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಕಂದುಲಾ ಅವರು ಪೊಲೀಸ್ ಅಧಿಕಾರಿಯ ವಾಹನಕ್ಕೆ ಬಲಿಯಾಗಿದ್ದಾರೆ. ವರದಿಗಳ ಪ್ರಕಾರ ಪೊಲೀಸ್​ ಅಧಿಕಾರಿ ಕೆವಿನ್ ಡೇವ್ ಗಂಟೆಗೆ 119 ಕಿಲೋ ಮೀಟರ್‌ ಸ್ಪೀಡ್​​ನಲ್ಲಿ ಬಂದು ಆ್ಯಕ್ಸಿಡೆಂಟ್ ಮಾಡಿದ್ದ. ಆದರೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಸಾಬೀತು ಮಾಡಲು ಸಾಕ್ಷ್ಯಗಳ ಕೊರತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜಾನ್ವಿ ಕಂದುಲಾ ಯಾರು?
23 ವರ್ಷದ ಜಾನ್ವಿ ಕಂದುಲಾ ಆಂಧ್ರ ಪ್ರದೇಶದವಳು. ಸೌತ್ ಲೇಕ್ ಯೂನಿಯನ್‌ನಲ್ಲಿರುವ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಳು. 2021ರಲ್ಲಿ ಕಂದುಲಾ ಬೆಂಗಳೂರಿನಿಂದ ಅಮೆರಿಕಕ್ಕೆ ಹೋಗಿದ್ದಳು.

ಮೃತಪಟ್ಟಿದ್ದು ಹೇಗೆ..? ಪೊಲೀಸ್ ಕಾರಿಗೆ ಡಿಕ್ಕಿ ಹೊಡೆದು ಜಾನ್ವಿ ಕಂದುಲಾ ಸಾವನ್ನಪ್ಪಿದ್ದಾಳೆ. ಜಾನ್ವಿ ಕಂದುಲಾ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ವರದಿ ಪ್ರಕಾರ ಕಾರು ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಗಂಟೆಗೆ 119 ಕಿಮೀ ವೇಗದಲ್ಲಿ ಹೋಗುತ್ತಿದ್ದ. ಡಿಕ್ಕಿ ಹೊಡೆದ ನಂತರ ಬಾಲಕಿಯ ದೇಹವು 100 ಅಡಿಗಿಂತ ಹೆಚ್ಚು ದೂರ ಹೋಗಿ ಬಿದ್ದಿತ್ತು. ದುರ್ಘಟನೆ ಬಳಿಕ ಜಾನ್ವಿ ಅವರನ್ನು ಹಾರ್ಬರ್‌ವ್ಯೂ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕ ಪೊಲೀಸ್​​​ನಿಂದ ಭಾರತದ ವಿದ್ಯಾರ್ಥಿನಿಯ ಹತ್ಯೆ; ಹೊಸ ತಿರುವು ಪಡೆದುಕೊಂಡ ಪ್ರಕರಣ

https://newsfirstlive.com/wp-content/uploads/2024/02/KANDULA.jpg

Load More