BREAKING: ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ; ಕಲ್ಲು ತೂರಾಟ; 8 ಮಂದಿ ಅರೆಸ್ಟ್​

author-image
Ganesh Nachikethu
Updated On
BREAKING: ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ; ಕಲ್ಲು ತೂರಾಟ; 8 ಮಂದಿ ಅರೆಸ್ಟ್​
Advertisment
  • ಪುಷ್ಪಾ 2 ವಿವಾದದ ಬಳಿಕ ನಟ ಅಲ್ಲು ಅರ್ಜುನ್ ವಿರುದ್ಧ ಆಕ್ರೋಶ
  • ಹೈದರಾಬಾದ್‌ನಲ್ಲಿರೋ ಅಲ್ಲು ಅರ್ಜುನ್ ನಿವಾಸದ ಮೇಲೆ ದಾಳಿ!
  • ಕಲ್ಲು ತೂರಾಟ ನಡೆಸಿ ವಿದ್ಯಾರ್ಥಿ ಹೋರಾಟಗರರಿಂದ ದಾಂಧಲೆ

ಹೈದರಾಬಾದ್​: ಪುಷ್ಪಾ 2 ವಿವಾದದ ಬಳಿಕ ನಟ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್​ ರೆಡ್ಡಿ ಸೇರಿದಂತೆ ಹಿರಿಹ ರಾಜಕಾರಣಿಗಳು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಹೈದರಾಬಾದ್‌ನಲ್ಲಿರೋ ನಟ ಅಲ್ಲು ಅರ್ಜುನ್ ಜೂಬಿಲಿ ಹಿಲ್ಸ್ ನಿವಾಸದ ಮೇಲೆ ಉಸ್ಮಾನಿಯಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಈ ಸಂಬಂಧ ಮಾತಾಡಿದ ಹೈದರಾಬಾದ್​ ಪೊಲೀಸ್ರು ಕೇಸ್​ನಲ್ಲಿ ಉಸ್ಮಾನಿಯಾ ಯೂನಿವರ್ಸಿಟಿ Joint Action Committee ( JAC) ಅನ್ನೋ ಸಂಘಟನೆಗೆ ಸೇರಿದ 8 ಮಂದಿ ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಗಿದೆ. ಇವರು ಅಲ್ಲು ಅರ್ಜುನ್​ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದರು.

ಏನಿದು ಪುಷ್ಪಾ 2 ವಿವಾದ?

ಡಿಸೆಂಬರ್ 4ನೇ ತಾರೀಕು ಥಿಯೇಟರ್​ ಒಂದರ ಬಳಿಕ ಪುಷ್ಪಾ 2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತ ಆಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು. ಈಗ ಉಸ್ಮಾನಿಯಾ ವಿವಿ Joint Action Committee ವಿದ್ಯಾರ್ಥಿ ಹೋರಾಟಗಾರರು ಅಲ್ಲು ಅರ್ಜುನ್​ ವಿರುದ್ಧ ಹೋರಾಟ ನಡೆಸಿದ್ದರು. ಅಲ್ಲು ಅರ್ಜುನ್​​ ಮನೆ ಮೇಲೆ ಮೇಲೆ ಕಲ್ಲು ತೂರಾಟ ನಡೆಸಿ ಎಲ್ಲರ ಗಮನ ಸೆಳೆದರು.

ತೆಲಂಗಾಣ ವಿಧಾನಸಭೆಯಲ್ಲೂ ಪುಷ್ಪ 2 ಪ್ರಕರಣ ಪ್ರತಿಧ್ವನಿಸಿದೆ. ಸಿಎಂ ರೇವಂತ್ ರೆಡ್ಡಿ ಅವರೇ ಅಲ್ಲು ಅರ್ಜುನ್​ ವಿರುದ್ಧ ಹೇಳಿಕೆ ನೀಡಿದ್ರು. ಸಿಎಂ ಹೇಳಿಕೆ ಬಳಿಕ ಅಲ್ಲು ಅರ್ಜುನ್ ಜುಬ್ಲಿ ಹಿಲ್ಸ್​​ನಲ್ಲಿರೋ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕೌಂಟರ್​ ನೀಡಿದ್ರು.

ಇದನ್ನೂ ಓದಿ: ಟೀಮ್​ ಇಂಡಿಯಾದಿಂದ ರಾಹುಲ್​ಗೆ ಕೊಕ್​; ಆರ್​​ಸಿಬಿ ಸ್ಟಾರ್​ ಆಟಗಾರನಿಗೆ ಜಾಕ್​ಪಾಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment