/newsfirstlive-kannada/media/post_attachments/wp-content/uploads/2025/04/us-woman2.jpg)
ಈಗಂತೂ ಯಾರಿಗೆ, ಯಾರ ಮೇಲೆ ಲವ್ ಆಗುತ್ತೆ ಅಂತ ಹೇಳೋದು ಕಷ್ಟ. ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಹಂಗಿಲ್ಲ. ಪ್ರೀತಿ ಅನ್ನೋದೊಂದು ಒಂದು ಶಕ್ತಿ. ಯಾರಿಗೆ, ಯಾರ ಮೇಲೆ, ಯಾವಾಗ, ಹೇಗೆ ಬೇಕಾದ್ರೂ ಲವ್ ಆಗಿ ಬಿಡಬಹುದು. ಆದರೆ ಪ್ರೀತಿಯಾದ ಮೇಲೆ ಆ ಪ್ರೀತಿಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ:ಇನ್ಸ್ಟಾದಲ್ಲಿ ಪತ್ನಿ ಮದುವೆ ವಿಡಿಯೋ ನೋಡಿ ಶಾಕ್ ಆದ ಪತಿ.. ಒಂದೇ ವಾರದ ಪ್ರೀತಿಗೆ ಕೈ ಕೊಟ್ಟ ಮಹಿಳೆ!
ಇದಕ್ಕೆ ಸಾಕ್ಷಿ ಎಂಬಂತೆ ಆಂಧ್ರಪ್ರದೇಶದ ಚಂದನ್ ಎಂಬ ಯುವಕನನ್ನು ಮದುವೆಯಾಗಲು ಅಮೆರಿಕದ ಮಹಿಳೆಯೊಬ್ಬರು ಭಾರತಕ್ಕೆ ಬಂದಿದ್ದಾರೆ. ಹೌದು ಮೂಲತಹ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ಹಾಗೂ ಚಂದನ್ ಇಬ್ಬರು ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿ ಲವ್ ಮಾಡಲು ಶುರು ಮಾಡಿಕೊಂಡಿದ್ದರು.
ಈ ಇಬ್ಬರ ಪ್ರೇಮಕಥೆಯು ತುಂಬಾ ಸರಳವಾಗಿದೆ. ಹಾಯ್ ಎಂಬ ಸಂದೇಶದಿಂದ ಶುರುವಾದ ಪ್ರೀತಿ ಈಗ ಮದುವೆ ಆಗುವ ತನಕ ಬಂದು ನಿಂತಿದೆ. ಈ ಬಗ್ಗೆ ಖುದ್ದು ಅಮೆರಿಕಾದ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಫೊರೆರೊ 14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಅಂತ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಮಡಿದ್ದಾರೆ.
View this post on Instagram
ಕೇವಲ 45 ಸೆಕೆಂಡುಗಳ ಕ್ಲಿಪ್‌ನಲ್ಲಿ ಈ ಇಬ್ಬರ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದು ಹೇಗೆ ಮರೆಯಲಾರದ ಬಂಧವಾಗ ಬದಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಈ ಇಬ್ಬರು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರಿಂದ ಇವರ ಪ್ರೇಮಕಥೆಗೆ ಅಪಾರ ಬೆಂಬಲ ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ