ಆರ್​​ಸಿಬಿ ಸೇರಿದ ಬೆನ್ನಲ್ಲೇ ಈ ಆಟಗಾರನಿಗೆ ಖುಲಾಯಿಸಿದ ಅದೃಷ್ಟ; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​

author-image
Ganesh Nachikethu
Updated On
ಆರ್​​ಸಿಬಿ ಸೇರಿದ ಬೆನ್ನಲ್ಲೇ ಈ ಆಟಗಾರನಿಗೆ ಖುಲಾಯಿಸಿದ ಅದೃಷ್ಟ; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​
Advertisment
  • ಇತ್ತೀಚೆಗಷ್ಟೇ ಆರ್​​ಸಿಬಿ ತಂಡ ಸೇರಿದ್ದ ಯುವ ಬ್ಯಾಟರ್​​
  • ಸ್ಫೋಟಕ ಬ್ಯಾಟರ್ ಜೇಕಬ್​ಗೆ ಖುಲಾಯಿಸಿದ ಅದೃಷ್ಟ!
  • ಆರ್​​ಸಿಬಿ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಜೇಕಬ್​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡವನ್ನು ಕಟ್ಟಿದೆ. ಅದರಲ್ಲೂ ಈ ಬಾರಿ ಹರಾಜಿನಲ್ಲಿ ಯುವಕರಿಗೆ ಮಣಿ ಹಾಕಿರೋ ಆರ್​​ಸಿಬಿ ಸಾಕಷ್ಟು ಅಚ್ಚರಿ ಮೂಡಿಸಿದೆ. ಆರ್​​ಸಿಬಿ ತಂಡಕ್ಕೆ ಇಂಗ್ಲೆಂಡ್​ ತಂಡದ ಸ್ಫೋಟಕ ಬ್ಯಾಟರ್​​ ಎಂಟ್ರಿ ನೀಡಿದ್ದಾರೆ. ಈಗ ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಅವರಿಗೆ ಅದೃಷ್ಟ ಖುಲಾಯಿಸಿದೆ.

ಇಂಗ್ಲೆಂಡ್ ತಂಡದ ಭರವಸೆಯ ಯುವ ಆಲ್‌​​ರೌಂಡರ್ ಜೇಕಬ್​​. ಇವರಿಗೆ ಕೇವಲ 21 ವರ್ಷ. ಇತ್ತೀಚೆಗೆ ನಡೆದ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬರೋಬ್ಬರಿ 2.6 ಕೋಟಿ ನೀಡಿ ಖರೀದಿ ಮಾಡಿತ್ತು. ಸದ್ಯ ಟೆಸ್ಟ್​ನಲ್ಲಿ ಅಬ್ಬರಿಸಿರೋ ಇವರು ಐಪಿಎಲ್​ನಲ್ಲೂ ಆರ್​​ಸಿಬಿ ತಂಡದ ಪರ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಇದರ ಮಧ್ಯೆ ಆರ್​​ಸಿಬಿ ಫ್ಯಾನ್ಸ್​ಗೆ ಇವರು ಗುಡ್​ನ್ಯೂಸ್​ ಒಂದು ನೀಡಿದ್ದಾರೆ.

ಜೇಕಬ್ ಬೆಥೆಲ್​​ಗೆ 2 ವರ್ಷ ಕೇಂದ್ರ ಗುತ್ತಿಗೆ

ಇತ್ತೀಚೆಗಷ್ಟೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ದೇಶದ ಆಟಗಾರರಿಗೆ ಹೊಸ ಒಪ್ಪಂದಗಳನ್ನು ಪ್ರಕಟಿಸಿದೆ. ಕೆಲವು ಆಟಗಾರರಿಗೆ 1 ವರ್ಷದ ಕೇಂದ್ರ ಗುತ್ತಿಗೆ ನೀಡಿದ್ದು, ಇನ್ನೂ ಹಲವರಿಗೆ 2 ವರ್ಷ ಕೊಡಲಾಗಿದೆ. 2 ವರ್ಷಗಳ ಕೇಂದ್ರ ಒಪ್ಪಂದ ಪಡೆದ ಆಟಗಾರರಲ್ಲಿ ಜೇಕಬ್ ಬೆಥೆಲ್ ಹೆಸರು ಕೂಡ ಇದೆ.

ಹೊಸ ದಾಖಲೆ ಬರೆದ ಜೇಕಬ್​​

ಇತ್ತೀಚೆಗೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದವರು ಇಂಗ್ಲೆಂಡ್‌ನ ಯುವ ಸ್ಫೋಟಕ ಬ್ಯಾಟರ್ ಜೇಕಬ್ ಬೆಥೆಲ್. ಇವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್​​ ಕ್ರಿಕೆಟ್​ನಲ್ಲೇ ಜೇಕಬ್ ಬೆಥೆಲ್ ಅವರು ಕೇವಲ 37 ಬಾಲ್​ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರ ಎನಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಜೇಕಬ್ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಜೇಕಬ್​​​ 37 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ಗಳ ನೆರವಿನಿಂದ ಅಜೇಯ 50 ರನ್ ಬಾರಿಸಿದ್ರು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ ನೆರವಾದರು.

ಇದನ್ನೂ ಓದಿ:ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್.. ಶರವೇಗದ ಸೆಂಚುರಿ ಸಿಡಿಸಿದ ಯುವ ಬ್ಯಾಟರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment