/newsfirstlive-kannada/media/post_attachments/wp-content/uploads/2025/05/Jacob_Bethell.jpg)
ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಯುವ ಆಟಗಾರ ಜಾಕೋಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ನಿಂದ ಹಾಫ್ಸೆಂಚುರಿ ಬಾರಿಸಿದ್ದಾರೆ. ಬ್ಯಾಟಿಂಗ್ ಮಾಡುವಾಗ ಬೆಥೆಲ್ ಅವರ ಬ್ಯಾಟ್ ಮುರಿದು ಹೋದ ಕಾರಣ ಔಟ್ ಆಗಿ ನಿರಾಶೆ ಅನುಭವಿಸಿದರು.
ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎಂ.ಎಸ್ ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್ ಆರ್ಸಿಬಿ ಪರವಾಗಿ ಓಪನರ್ಗಳಾಗಿ ಕ್ರೀಸ್ಗೆ ಆಗಮಿಸಿದ್ದು ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದನ್ನೂ ಓದಿ: RCB ಸ್ಟಾರ್ ಪೇಸರ್ಗೆ ಏನಾಯಿತು.. ಪಂದ್ಯದಿಂದಲೇ ಜೋಶ್ ಹ್ಯಾಜಲ್ವುಡ್ ಔಟ್, ಕಾರಣ?
ತವರಿನ ನೆಲದಲ್ಲಿ ಚೆನ್ನೈ ಬೌಲರ್ಗಳನ್ನು ಮನಬಂದಂತೆ ಚಚ್ಚಿದ ಯುವ ಆಟಗಾರ ಬೆಥೆಲ್ ಒಳ್ಳೆಯ ರನ್ಗಳನ್ನು ಕೊಳ್ಳೆ ಹೊಡೆದು ಅರ್ಧಶತಕ ಸಿಡಿಸಿದರು. 2ನೇ ಪಂದ್ಯದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಚೆನ್ನೈ ವಿರುದ್ಧ 28 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಅದ್ಭುತವಾದ ಬೌಂಡರಿಗಳು ಹಾಗೂ 2 ಅಮೋಘವಾಗ ಸಿಕ್ಸರ್ನಿಂದ 53 ರನ್ಗಳನ್ನು ಬಾರಿಸಿದರು.
ಇನ್ನು ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಸಿಡಿಸಿದ್ದು ವಿಶೇಷ ಎನಿಸಿತು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಜಾಕೋಬ್ ಬೆಥೆಲ್ ಅವರು ಈಗ ಟ್ರ್ಯಾಕ್ಗೆ ಮರಳಿದಂತೆ ಆಗಿದೆ. ಫಿಲ್ ಸಾಲ್ಟ್ ಇಲ್ಲದ ಬರವನ್ನು ಬೆಥೆಲ್ ನೀಗಿಸಿದಂತೆ ಆಗಿದೆ. 55 ರನ್ ಗಳಿಸಿ ಆಡುವಾಗ ಡೆವಾಲ್ಡ್ ಬ್ರೆವಿಸ್ ಅವರಿಗೆ ಕ್ಯಾಚ್ ಕೊಡುವ ಮೂಲಕ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಬೆಥೆಲ್ 91 ರನ್ಗಳ ಜೊತೆಯಾಟವಾಡಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ