Advertisment

ಫ್ಯಾನ್ಸ್​ಗೆ ಗುಡ್​​ನ್ಯೂಸ್​​; ಆರ್​​ಸಿಬಿ ಸೇರಿದ ದಿನವೇ ಬದಲಾಯ್ತು ಈ ಆಟಗಾರನ ಲಕ್​!

author-image
Ganesh Nachikethu
Updated On
ನಾಯಕನ ಹುಡುಕಾಟದಲ್ಲಿ RCB; ರಾಹುಲ್, ಪಂತ್ ಅಲ್ಲ.. ಕಪ್ ಗೆದ್ದ ಹೀರೋಗೆ ಗಾಳ..!
Advertisment
  • 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್ ಮೆಗಾ ಹರಾಜು
  • ಆರ್​​ಸಿಬಿ ತಂಡ ಸೇರಿದ್ದೇ ಬದಲಾಯ್ತು ಈ ಕ್ರಿಕೆಟರ್​ ಲಕ್​​!
  • ಬರೋಬ್ಬರಿ 2.6 ಕೋಟಿಗೆ ಆರ್​​ಸಿಬಿ ತಂಡದ ಪಾಲಾದ್ರು

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಮೆಗಾ ಹರಾಜು ಕೊನೆಗೂ ಅಂತ್ಯಗೊಂಡಿದೆ. ಸೌದಿ ಅರೆಬಿಯಾದಲ್ಲಿ ಸತತ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸ್ಟಾರ್​ ಆಟಗಾರರೊಂದಿಗೆ ಯಂಗ್​ ಪ್ಲೇಯರ್ಸ್​ಗೂ ಮಣೆ ಹಾಕಿದೆ. ಇಂಗ್ಲೆಂಡ್ ತಂಡದ ಯುವ ಆಟಗಾರ ಆರ್​​ಸಿಬಿ ಟೀಮ್​​ ಸೇರಿದ್ದಾರೆ. ಈ ಆಟಗಾರ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಲಕ್ ಬದಲಾಗಿದೆ.

Advertisment

ಆರ್​​ಸಿಬಿ ಒಟ್ಟು 8 ವಿದೇಶಿ ಆಟಗಾರರನ್ನು ಖರೀದಿ ಮಾಡಿದೆ. ಈ ಪೈಕಿ ಮೂವರು ಇಂಗ್ಲೆಂಡ್​​ ಆಟಗಾರರು ಇದ್ದಾರೆ. ಇಂಗ್ಲೆಂಡ್‌ ತಂಡದ ಈ ಆಟಗಾರ ಟಿ20 ಮತ್ತು ಏಕದಿನ ಕ್ರಿಕೆಟ್​ ಮಾತ್ರ ಆಡುತ್ತಿದ್ರೂ ಟೆಸ್ಟ್​​ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈಗ ವೈಟ್​ ಜೆರ್ಸಿಯಲ್ಲೂ ಮಿಂಚಲು ರೆಡಿ ಆಗಿದ್ದಾರೆ ಇಂಗ್ಲೆಂಡ್​ ತಂಡದ 21 ವರ್ಷದ ಜಾಕೋಬ್ ಬೆಥೆಲ್.

publive-image

ಆರ್‌ಸಿಬಿ ತಂಡ ಸೇರಿದ ಜಾಕೋಬ್ ಬೆಥೆಲ್

ಇಂಗ್ಲೆಂಡ್​​ ತಂಡದ ಪರ ಟೆಸ್ಟ್​ ಡೆಬ್ಯೂ ಮಾಡಲು ಮುಂದಾಗಿರೋ ಯುವ ಆಟಗಾರರನ್ನು ಆರ್​​ಸಿಬಿ 2ನೇ ದಿನದ ಮೆಗಾ ಹರಾಜಿನಲ್ಲಿ ಖರೀದಿ ಮಾಡಿದೆ. ಇವರು ಬರೋಬ್ಬರಿ 2.6 ಕೋಟಿಗೆ ಆರ್​​ಸಿಬಿ ತಂಡದ ಪಾಲಾದ್ರು.

ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮುಂದಿನ ತಿಂಗಳು ಎಂದರೆ ಡೆಸೆಂಬರ್​​​ 28ನೇ ತಾರೀಕು ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಘೋಷಣೆ ಆಗಿದ್ದು, ಜಾಕೋಬ್ ಬೆಥೆಲ್ ಅವರಿಗೆ ಆಡುವ ಅವಕಾಶ ಸಿಕ್ಕಿದೆ.

Advertisment

ಇಂಗ್ಲೆಂಡ್ ತಂಡ ಹೀಗಿದೆ..!

ಜಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಒಲ್ಲಿ ಪೋಪ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ ಸನ್, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್.

ಇದನ್ನೂ ಓದಿ: KL​​ ರಾಹುಲ್​​ ಕೈ ಬಿಟ್ಟ ಬೆಂಗಳೂರು; RCB ವಿರುದ್ಧ ವಿರಾಟ್​ ಕೊಹ್ಲಿ ಅಸಮಾಧಾನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment