ಟೆಸ್ಟ್​​ ಕ್ರಿಕೆಟ್​ನಲ್ಲೇ ಅತೀ ವೇಗದ ಅರ್ಧಶತಕ; ದಾಖಲೆ ಬರೆದ RCB ಸ್ಫೋಟಕ ಬ್ಯಾಟರ್​​

author-image
Ganesh Nachikethu
Updated On
ಟೆಸ್ಟ್​​ ಕ್ರಿಕೆಟ್​ನಲ್ಲೇ ಅತೀ ವೇಗದ ಅರ್ಧಶತಕ; ದಾಖಲೆ ಬರೆದ RCB ಸ್ಫೋಟಕ ಬ್ಯಾಟರ್​​
Advertisment
  • ಟೆಸ್ಟ್​​ ಕ್ರಿಕೆಟ್​​ನಲ್ಲೇ ಇತಿಹಾಸ ಬರೆದ ಆರ್​​ಸಿಬಿ ಸ್ಟಾರ್​
  • ಇತ್ತೀಚೆಗಷ್ಟೇ ಆರ್​​ಸಿಬಿ ತಂಡ ಸೇರಿದ್ದ ಯುವ ಬ್ಯಾಟರ್​​
  • ಯುವ ಸ್ಫೋಟಕ ಬ್ಯಾಟರ್ ಜೇಕಬ್ ಬೆಥೆಲ್ ಸಾಧನೆ!

ಇತ್ತೀಚೆಗೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದವರು ಇಂಗ್ಲೆಂಡ್‌ನ ಯುವ ಸ್ಫೋಟಕ ಬ್ಯಾಟರ್ ಜೇಕಬ್ ಬೆಥೆಲ್. ಇವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್​​ ಕ್ರಿಕೆಟ್​ನಲ್ಲೇ ಜೇಕಬ್ ಬೆಥೆಲ್ ಅವರು ಕೇವಲ 37 ಬಾಲ್​ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರ ಎನಿಸಿದ್ದಾರೆ.

ವಿಶ್ವ ದಾಖಲೆ ಮಾಡಿದ ಆರ್​​ಸಿಬಿ ಸ್ಟಾರ್​​

ಇಂದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಜೇಕಬ್ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಜೇಕಬ್​​​ 37 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ಗಳ ನೆರವಿನಿಂದ ಅಜೇಯ 50 ರನ್ ಬಾರಿಸಿದ್ರು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ ನೆರವಾದರು.

ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​​ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ಬ್ಯಾಟರ್‌ ಮಿಸ್ಬಾ ಉಲ್ ಹಕ್ 21 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿದ್ದರು. ಇದಾದ ಬಳಿಕ ಬೆನ್ ಸ್ಟೋಕ್ಸ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ 24 ಎಸೆತಗಳಲ್ಲಿ ಈ ಸಾಧನೆ ಮಾಡಿದ್ರು.

ಆರ್​​ಸಿಬಿ ಸೇರಿದ್ದ ಜೇಕಬ್​​

ಇಂಗ್ಲೆಂಡ್ ತಂಡದ ಭರವಸೆಯ ಯುವ ಆಲ್‌​​ರೌಂಡರ್ ಜೇಕಬ್​​. ಇವರಿಗೆ ಕೇವಲ 21 ವರ್ಷ. ಇತ್ತೀಚೆಗೆ ನಡೆದ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬರೋಬ್ಬರಿ 2.6 ಕೋಟಿ ನೀಡಿ ಖರೀದಿ ಮಾಡಿತ್ತು. ಸದ್ಯ ಟೆಸ್ಟ್​ನಲ್ಲಿ ಅಬ್ಬರಿಸಿರೋ ಇವರು ಐಪಿಎಲ್​ನಲ್ಲೂ ಆರ್​​ಸಿಬಿ ತಂಡದ ಪರ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:IPL 2025: ಆರ್​​ಸಿಬಿ ತಂಡದಿಂದ ಈ ಆಟಗಾರನನ್ನು ಹೊರಹಾಕಲು ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment