/newsfirstlive-kannada/media/post_attachments/wp-content/uploads/2024/10/Jail.jpg)
- ಜೈಲಿನಿಂದ ನಿರ್ದೇಶಕನಿಗೆ ಬಂತೊಂದು ಪತ್ರ
- ನನಗೆ ಸಿನಿಮಾ ವ್ಯವಹಾರವಲ್ಲವೆಂದ ರಕ್ಕಮ್ಮನ ಪ್ರಿಯಕರ
- ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ಹೀಗೆ ಮಾಡಿದ್ದಾರೆ ಎಂದು ಉಲ್ಲೇಖ
200 ಕೋಟಿ ರೂಪಾಯಿ ವಂಚನೆ ಕೇಸ್​ ಸಂಬಂಧ ತಿಹಾರ್​ ಜೈಲಿನಲ್ಲಿರುವ ಸುಕೇಶ್​​ ಚಂದ್ರಶೇಖರ್​ ಜೈಲಿನಿಂದ ಖ್ಯಾತ ನಿರ್ದೇಶಕರೊಬ್ಬರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಕಂಪನಿ ಷೇರುಗಳನ್ನು ತೆಗೆದುಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ.
ಸುಕೇಶ್​​ ಚಂದ್ರಶೇಖರ್​​ರವರು ಜೈಲಿನಿಂದ ನಿರ್ದೇಶಕ ಮತ್ತು ನಿರ್ಮಾಪಕರಾದ ಕರಣ್​ ಜೋಹರ್​ಗೆ ಪತ್ರ ಬರೆದಿದ್ದಾರೆ. ತಮ್ಮ ಧರ್ಮ ಪ್ರೊಡಕ್ಷನ್ ಕಂಪನಿಯ ಷೇರುಗಳಲ್ಲಿ ಪ್ರಮುಖ ಷೇರುಗಳನ್ನು ತೆಗೆದುಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ.
[caption id="attachment_93302" align="alignnone" width="800"] ನಟಿ ಜಾಕ್ವೆಲಿನ್​ ಫರ್ನಾಂಡಿಸ್​​ ಪ್ರಿಯಕರ ಸುಕೇಶ್​​[/caption]
ಪತ್ರದಲ್ಲಿ ಸುಕೇಶ್​​ ಚಂದ್ರಶೇಖರ್​,‘ನನ್ನ ಕಂಪನಿ ಎಲ್​ಎಸ್​​ ಹೋಲ್ಡಿಂಗ್ಸ್​​ ಬ್ರಿಟಿಷ್​ ವರ್ಜಿನ್​ ಐಲ್ಯಾಂಡ್ಸ್​ನಲ್ಲಿ ನೋಂದಣಿಯಾಗಿದೆ. ನಾವು ಆನ್​ಲೈನ್​ ಗೇಮಿಂಗ್​​, ಕಾರ್ಪೋರೇಟ್​​ ಸಂಪರ್ಕ ಜೊತೆಗೆ ವ್ಯಾಪಾರದಲ್ಲಿ ಆಸಕ್ತಿಯನ್ನು ಹೊಂದಿದ್ದೇವೆ. ಅಂತರಾಷ್ಟ್ರೀಯ ವ್ಯವಹಾರಗಳನ್ನು ನಡೆಸುತ್ತೇವೆ ಮತ್ತು ಈ ಸೇವೆಗಳನ್ನು ಸುಗಮಗೊಳಿಸುತ್ತೇವೆ. ಇದಲ್ಲದೆ, ಎಲ್​ಎಸ್​​ ಹೋಲ್ಡಿಂಗ್ಸ್​​ ಚಲನಚಿತ್ರ ನಿರ್ಮಾಣ ಮತ್ತು ಹಣಕಾಸು ಕಂಪನಿಯನಗನು ಹೊಂದಿದೆ. ನಮ್ಮ ವಾರ್ಷಿಕ ವಹಿವಾಟು ಸುಮಾರು 6300 ಕೋಟಿ ರೂಪಾಯಿಯನ್ನು ಹೊಂದಿದೆ ಎಂದು ಬರೆದಿದ್ದಾರೆ.
ಎಲ್​ಎಸ್ ಫಿಲ್ಮ್​ ಕಾರ್ಪ್​​​​​ ಹೆಸರಿನ ಕಂಪನಿ 70ಕ್ಕೂ ಹೆಚ್ಚು ಭಾರತೀಯ ಸಿನಿಮಾಗಳಿಗೆ ಹಣ ನೀಡಿದೆ. ಓಟಿಟಿ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ​​ಭಾರತೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದ ಸಂಬಂಧ ಹೊಂದುವುದು ಈ ಸಮಯದಲ್ಲಿ ಮುಖ್ಯವಾಗಿದೆ. ಇದರ ಜೊತೆಗೆ ಬೆಸ್ಟ್​ ಡೈರೆಕ್ಟರ್​ ಮತ್ತು ತಾರೆಯರ ಸಹಯೋಗದೊಂದಿಗೆ ಕೆಲಸ ಮಾಡುವುದು ಮುಖ್ಯವಾಗಿದೆ. ನಿಮ್ಮೊಂದಿಗೆ ಕೈ ಜೋಡಿಸುವ ಮೂಲಕ ಧರ್ಮ ಪ್ರೊಡಕ್ಷನ್​​ ವಿಶ್ವಾಸಾರ್ಹತೆಯ ಲಾಭವನ್ನು ಪಡೆಯಬಹುದಾಗಿದೆ. ನನಗೆ ಸಿನಿಮಾ ವ್ಯಾಪಾರವಲ್ಲ, ಆದರೆ ಉತ್ಸಾಹ ಮತ್ತು ಭಾವನೆಯನ್ನು ಹೊಂದಿದ್ದೇನೆ. ಯಾಕೆಂದರೆ ನಾನು ವೈಯಕ್ತಿಕವಾಗಿ ಸಿನಿಮಾ ಪ್ರೇಮಿ ಎಂದು ಪತ್ರದಲ್ಲಿ ಸುಕೇಶ್​ ಬರೆದಿದ್ದಾರೆ.
ಇದನ್ನೂ ಓದಿ: ಟಾಕ್ಸಿಕ್ ಸಿನಿಮಾ ಸೆಟ್‌ನಲ್ಲಿ ರಾಕಿಂಗ್ ಸ್ಟಾರ್ ಹೊಸ ಲುಕ್.. ಯಶ್ ಟಾಪ್ 10 ಫೋಟೋಗಳು ಇಲ್ಲಿವೆ!
ನನ್ಮ ಮೇಲಿನ ಎಲ್ಲ ಪ್ರಕರಣ ರಾಜಕೀಯ ಪ್ರೇರಿತ. ನನ್ನ ವಿರುದ್ಧ ಇಲ್ಲಿಯವರೆಗೆ ಏನೇ ಆರೋಪ ಮಾಡಿದರೂ ಅದು ಸುಳ್ಳು. ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ಹೀಗೆ ಮಾಡಿದ್ದಾರೆ. ನನ್ನ ಎಲ್ಲಾ ವ್ಯಾಪಾರ ಮತ್ತು ಉದ್ಯಮದ ಎಲ್ಲಾ ಹಣಕಾಸು ಕುರಿತ ಹೇಳಿಕೆಗಳನ್ನು ನಾನು ನಿಮಗೆ ನೀಡುತ್ತೇನೆ ಎಂದು ಹೇಳಿದ್ದಾರೆ
ಜೊತೆಗೆ ನಾನು ನನ್ನ ಕುಟುಂಬ ಧರ್ಮ ಪ್ರೊಡಕ್ಷನ್​ನ ದೊಡ್ಡ ಅಭಿಮಾನಿ. ಅದಕ್ಕೆ ಕರಣ್​ ಜೋಹರ್​ ಎಂಬ ಅದ್ಭುತ ವ್ಯಕ್ತಿ ಕಾರಣ. ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿರುವ ಜಾಕ್ವೆಲಿನ್​​ ನನ್ನ ಜೀವನದ ಪ್ರೀತಿಯ ಪ್ರಮುಖ ವಿಷಯವಾಗಿದ್ದಾಳೆ. ಆಕೆಯ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ಆದ್ದರಿಂದ ನಿಮ್ಮ ಕಂಪನಿಯ ಪಾಲನ್ನು ಪಡೆದುಕೊಳ್ಳುವುದು ಮತ್ತು ಹಣ ಹೂಡಿಕೆ ಮಾಡುವುದು ನಮ್ಮ ಕಂಪನಿಗೆ ಅದು ಅದೃಷ್ಟ ಮತ್ತು ಗೌರವ ಎಂದು ಸುಕೇಶ್​​ ಪತ್ರದಲ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ