/newsfirstlive-kannada/media/post_attachments/wp-content/uploads/2024/08/Kohli-2.jpg)
ಕ್ರಿಕೆಟ್ನಿಂದ ಖ್ಯಾತಿ ಮಾತ್ರವಲ್ಲ. ಕೋಟಿ ಕೋಟಿ ಹಣ ಹರಿದು ಬರೋದೂ ಓಪನ್ ಸೀಕ್ರೆಟ್. ಟೀಮ್ ಇಂಡಿಯಾ ಕ್ರಿಕೆಟಿಗರಿಗಂತೂ ಹಣಕ್ಕೆ ಬರವೇ ಇಲ್ಲ. ಶ್ರೀಮಂತ ಕ್ರಿಕೆಟಿಗ ಅಂದ ತಕ್ಷಣ ವಿರಾಟ್ ಕೊಹ್ಲಿಯತ್ತ ಎಲ್ಲರ ಚಿತ್ತ ಸರಿಯುತ್ತೆ. ಇದೀಗ ಕಿಂಗ್ ಕೊಹ್ಲಿಯನ್ನ ಜಾಮ್ನಗರದ ರಾಜ ಅಜಯ್ ಜಡೇಜಾ ಮೀರಿಸಿದ್ದಾರೆ. 250 ಕೋಟಿಯಿದ್ದ ಆಸ್ತಿ ಮೌಲ್ಯ, ರಾತ್ರಿ ಬೆಳಗಾಗುವುದರಲ್ಲಿ ಸಾವಿರ ಕೋಟಿಯ ಗಡಿ ದಾಟಿದೆ!
ವಿರಾಟ್ ಕೊಹ್ಲಿ.. ಭಾರತ ಮಾತ್ರವಲ್ಲ.. ವಿಶ್ವಾದ್ಯಂತ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿರೋ ಕ್ರಿಕೆಟಿಗ. ಆನ್ಫೀಲ್ಡ್ ಆಟದಿಂದ ಹಿಡಿದು ಸೋಷಿಯಲ್ ಮೀಡಿಯಾಗಳವರೆಗೂ ಮಾಡ್ರನ್ ಡೇ ಕ್ರಿಕೆಟ್ನ ರಿಯಲ್ ಕಿಂಗ್ ಆಗಿ ಮೆರೆದಾಡ್ತಿದ್ದಾರೆ. ತನ್ನ ಅಸಮಾನ್ಯ ಆಟದಿಂದ ಅಸಾಧ್ಯವಾದುದನೆಲ್ಲಾ ಸಾಧಿಸಿ ತೋರಿಸಿರೋ ಕೊಹ್ಲಿ, ಹೆಸರಿನ ಜೊತೆಗೆ ಕೋಟಿಗಟ್ಟಲೇ ಹಣವನ್ನೂ ಗಳಿಸಿದ್ದಾರೆ. ಮಾಹಿತಿ ಪ್ರಕಾರ ಕೊಹ್ಲಿಯ ಸದ್ಯದ ನೆಟ್ ವರ್ತ್ 1090 ಕೋಟಿ.
ಇದನ್ನೂ ಓದಿ:ಈ ರಾಜಮನೆತನದ ವಾರಸುದಾರ ಆಗ್ತಿದ್ದಾರೆ ಮಾಜಿ ಸ್ಟಾರ್ ಕ್ರಿಕೆಟಿಗ.. ರಾಜವಂಶದ ಇತಿಹಾಸ ತಿಳಿಯಿರಿ..
ಕಿಂಗ್ ಕೊಹ್ಲಿ ಮೀರಿಸಿದ ಜಡೇಜಾ
1090 ಕೋಟಿಯ ಒಡೆಯ ಕಿಂಗ್ ಕೊಹ್ಲಿಯಷ್ಟು ನೇಮ್-ಫೇಮ್ ಗಳಿಸದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹಿಂದಿಕ್ಕಿದ್ದಾರೆ. ಭಾರತ ತಂಡದ ಕ್ಯಾಪ್ಟನ್ ಕೂಡ ಆಗಿದ್ದ ಈ ಅಜಯ್ ಜಡೇಜಾ, ಕೊನೆಯ ಇಂಟರ್ನ್ಯಾಷನಲ್ ಪಂದ್ಯವನ್ನಾಡಿದ್ದು 24 ವರ್ಷದ ಹಿಂದೆ. ಆ ಬಳಿಕ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿ ಬಾಲಿವುಡ್ ಲೋಕಕ್ಕೆ ಕಾಲಿಟ್ಟು ಅಲ್ಲೂ ನೆಲೆಯೂರುವಲ್ಲಿ ಫೇಲ್ ಆದ ಜಡೇಜಾ, ಇದೀಗ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಸದ್ಯ ಕ್ರಿಕೆಟ್ ಅನಾಲಿಸ್ಟ್ ಆಗಿರೋ ಜಡೇಜಾ, ಗಳಿಕೆಯ ವಿಚಾರದಲ್ಲಿ ಸಾವಿರ ಕೋಟಿ ಓಡೆಯ ಕೊಹ್ಲಿಯನ್ನ ಮೀರಿಸಿದ್ದಾರೆ.
ಅಜಯ್ ಜಡೇಜಾಗೆ ದಶಮಿ ಬಂಪರ್
ವಿಜಯ ದಶಮಿ ಹಬ್ಬದ ಬೆಳ್ಳಂಬೆಳಗ್ಗೆ ಜಾಮ್ನಗರದ ಸಂಸ್ಥಾನದ ರಾಜವಂಶದ ಮುಖ್ಯಸ್ಥ ಶತ್ರುಸಲ್ಯಸಿಂಹ ಒಂದು ಅನೌನ್ಸ್ಮೆಂಟ್ ಮಾಡಿದ್ರು. ತಮ್ಮ ಸ್ಥಾನಕ್ಕೆ ಉತ್ತರಾಧಿಕಾರಿಯನ್ನ ಘೋಷಣೆ ಮಾಡಿದ್ರು. ಆ ಉತ್ತಾರಾಧಿಕಾರಿಯಾಗಿ ಆಯ್ಕೆಯಾದ ವ್ಯಕ್ತಿಯೇ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ. ಸೋದರಿಯ ಮಗನಾಗಿರೋ ಅಜಯ್ ಜಡೇಜಾ, ನನ್ನ ಸ್ಥಾನದ ಉತ್ತರಾಧಿಕಾರಿ ಎಂದು ಘೋಷಿಸಿದ್ರು. ಅಜಯ್ ಜಡೇಜಾ ಆಸ್ತಿ ಮೌಲ್ಯ ಏರಿಕೆಗೆ ಈ ಘೋಷಣೆಯೇ ಕಾರಣ.
ಇದನ್ನೂ ಓದಿ:LSGಗೆ ಬೇಕೇಬೇಕು ಕೆಎಲ್ ರಾಹುಲ್; ಕನ್ನಡಿಗನ ಉಳಿಸಿಕೊಳ್ಳಲು ಇದೆ ಮೂರು ಕಾರಣ..!
250 ಕೋಟಿಯಿದ್ದ ಆಸ್ತಿ ಮೌಲ್ಯ 1,450 ಕೋಟಿಗೆ ಏರಿಕೆ
ಅಸಲಿಗೆ ರಾಜವಂಶದ ಉತ್ತರಾಧಿಕಾರಿ ಪಟ್ಟಕ್ಕೇರುವ ಮುನ್ನ ಅಜಯ್ ಜಡೇಜಾ ಆಸ್ತಿ ಮೌಲ್ಯ ಕೇವಲ 250 ಕೋಟಿಯಾಗಿತ್ತು. ಇದೀಗ ರಾಜಮನೆತನದ ಸಿಂಹಾಸನ ಜಡೇಜಾನ ಅರಸಿ ಬಂದ ಬೆನ್ನಲ್ಲೇ ಸಂಪತ್ತು ಕೂಡ ವೃದ್ಧಿಯಾಗಿದೆ. ಎಲ್ಲಾ ಸೇರಿ ಅಜಯ್ ಜಡೇಜಾ ಆಸ್ತಿ ಮೌಲ್ಯ 1,450 ಕೋಟಿಗೆ ಏರಿಕೆಯಾಗಿದೆ. ಕೊಹ್ಲಿಗೆ-ಅಜಯ್ ಜಡೇಜಾಗೆ 360 ಕೋಟಿ ಡಿಫರೆನ್ಸ್.
ರಾಜಮನೆತನಕ್ಕೆ ಕ್ರಿಕೆಟ್ ನಂಟು
ಈ ಜಾಮ್ನಗರದ ರಾಜಮನತೆನಕ್ಕೂ ಭಾರತೀಯ ಕ್ರಿಕೆಟ್ಗೂ ಅವಿನಾಭಾವ ನಂಟಿದೆ. ಈ ರಾಜವಂಶಸ್ಥರು ಭಾರತೀಯ ಕ್ರಿಕೆಟ್ಗೆ ನೀಡಿರೋ ಕೊಡುಗೆ ಅಪಾರ. ಆರಂಭಿಕ ರಾಜ ರಂಜಿತ್ ಸಿನ್ಹ್ ಜಡೇಜಾ ಡೊಮೆಸ್ಟಿಕ್ ಕ್ರಿಕೆಟರ್ ಆಗಿದ್ದರು. ಇವ್ರ ಹೆಸರಲ್ಲೇ ರಣಜಿ ಟ್ರೋಫಿ ಟೂರ್ನಿ ನಡೀತಿರೋದು. ಅವರ ಬಳಿಕ ಕೆಎಸ್ ದುಲೀಪ್ ಸಿನ್ಹಾಜಿ ಸಿಂಹಾಸನವೇರಿದ್ರು. ದುಲೀಪ್ ಟ್ರೋಫಿ ಟೂರ್ನಿಗೆ ಇವ್ರ ಹೆಸರನ್ನ ಇಡಲಾಗಿದೆ. ಅಜಯ್ ತಂದೆ ದೌಲತ್ ಸಿನ್ಹಾ ಕೂಡ ಕ್ರಿಕೆಟರ್ ಆಗಿದ್ರು. ಬಳಿಕ ಜಾಮ್ನಗರದಿಂದ 3 ಬಾರಿ MP ಆಗಿ ಆಯ್ಕೆಯಾಗಿದ್ರು. ಸದ್ಯ ಜಡೇಜಾಗೆ ಪಟ್ಟ ಬಿಟ್ಟುಕೊಟ್ಟಿರೋ ಶತ್ರುಸಲ್ಯಸಿಂಹ ಕೂಡ ಬರೋಡ ಕ್ರಿಕೆಟ್ ತಂಡದ ನಾಯಕನಾಗಿದ್ದರು.
ಟೀಮ್ ಇಂಡಿಯಾ ನಾಯಕನಾಗಿ ಯಶಸ್ಸು ಕಂಡಿದ್ದ ಅಜಯ್ ಜಡೇಜಾಗೆ ದಿಗ್ಗಜ ಕ್ರಿಕೆಟಿಗನಾಗೋ ಅವಕಾಶ ಇತ್ತು. ಮ್ಯಾಚ್ ಫಿಕ್ಸಿಂಗ್ ಕಳಂಕ ಕರಿಯರ್ನ ಮುಗಿಸಿ ಬಿಡ್ತು. ಆ ಬಳಿಕ ಕೋಚ್ ಆಗಿ, ಕ್ರಿಕೆಟ್ ಅನಾಲಿಸ್ಟ್ ಆಗಿದ್ದ ಜಡೇಜಾಗೆ ಇದೀಗ ಜಾಮ್ನಗರದ ಸಿಂಹಾಸನದ ಉತ್ತರಾಧಿಕಾರಿ ಪಟ್ಟ ಒಲಿದು ಬಂದಿದೆ. ರಾತ್ರೋ ರಾತ್ರಿ ಆಸ್ತಿ ಮೌಲ್ಯವೂ ನಿರೀಕ್ಷೆ ಮಾಡಲಾಗದಷ್ಟು ಹೆಚ್ಚಿದೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್ ಕೆಂಗಣ್ಣಿಗೆ ಗುರಿಯಾಗಿದ್ದ ಈ ನಿಯಮವನ್ನು ರದ್ದು ಮಾಡಿದ ಬಿಸಿಸಿಐ, ಆದರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ