/newsfirstlive-kannada/media/post_attachments/wp-content/uploads/2024/10/jadeja-3.jpg)
IPL2025: ಐಪಿಎಲ್​ನ ರಿಟೈನ್ಶನ್ ಅನೌನ್ಸ್​ಮೆಂಟ್​​ಗೆ ಕ್ಷಣಗಣನೆ ಶುರುವಾಗಿದೆ. ತಂಡಗಳಲ್ಲಿ ಉಳಿಯೋದ್ಯಾರು? ಹೊರ ನಡೆಯೋದು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಆದರೆ, ಈ ನಡುವೆಯೇ ರವೀಂದ್ರ ಜಡೇಜಾ, ಚೆನ್ನೈ ಕ್ಯಾಂಪ್​ನಿಂದ ಹೊರ ಬರ್ತಾರೆ ಎಂಬ ಸುದ್ದಿ ಸುನಾಮಿಯಂತೆ ಅಪ್ಪಳಿಸಿದೆ. ಹಾಗಾದ್ರೆ, ಇದು ನಿಜನಾ?.
ಐಪಿಎಲ್​​ ರಿಟೈನ್ಶನ್​​ಗೂ ಡೆಡ್​ಲೈನ್​ಗೂ ಮುನ್ನವೇ ಈ ತ್ರಿಮೂರ್ತಿಗಳು, ಫ್ರಾಂಚೈಸಿ ತೊರೆಯೋದು ಕನ್ಫರ್ಮ್ ಆಗಿದೆ. ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಉತ್ಸುಕದಲ್ಲಿರುವ ಕೆ.ಎಲ್. ರಾಹುಲ್, ಶ್ರೇಯಸ್​ ಅಯ್ಯರ್, ರಿಷಭ್​ ಪಂತ್​​ ನಾಯಕತ್ವದ ಪಟ್ಟವನ್ನೇ ತೊರೆದು ಬಿಡ್ಡಿಂಗ್​​ ಬ್ಯಾಟಲ್​ನ ಅದೃಷ್ಟದ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಆದರೀಗ ಇವರ ಹಾದಿಯಲ್ಲೇ ಮತ್ತೊಬ್ಬ ಸ್ಟಾರ್ ಹೆಜ್ಜೆಹಾಕಿದ್ದಾರೆ. ಅಂದಹಾಗೆಯೇ ಆ ಸ್ಟಾರ್​ ಬೇಱರು ಅಲ್ಲ. ಸ್ಟಾರ್​ ಆಲ್​ರೌಂಡರ್ ರವೀಂದ್ರ ಜಡೇಜಾ.
/newsfirstlive-kannada/media/post_attachments/wp-content/uploads/2024/09/Ravindra-Jadeja.jpg)
ಜಡೇಜಾ.. ಇದು ನಿಜನಾ?
ಇತ್ತ ರಿಟೈನ್ಶನ್ ಆಟಗಾರರ ಪಟ್ಟಿ ಸಲ್ಲಿಕೆಗೆ ಕ್ಷಣಗಣನೆ ಶುರುವಾಗಿದೆ. ಇನ್ನು ಕೆಲವೇ ಕೆಲ ಗಂಟೆಗಳಲ್ಲಿ ರಿಟೈನ್ಶನ್ ಆಟಗಾರರ ಭವಿಷ್ಯದ ಹೊರಬೀಳಲಿದೆ. ಆದರೆ, ಈ ನಡುವೆ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಂಪ್ ತೊರೆಯುತ್ತಿದ್ದಾರೆ ಎಂಬ ಅಘಾತಕಾರಿ ಸುದ್ದಿ ಸುನಾಮಿಯಂತೆ ಅಪ್ಪಳಿಸಿದೆ. ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದಲೇ ಇಂಥದ್ದೊಂದು ಮಹತ್ವದ ನಿರ್ಧಾರ ಸೌರಾಷ್ಟ್ರ ಆಲ್​ರೌಂಡರ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಇದರ ಹಿಂದೆ ಮಹತ್ವದ ಕಾರಣವೂ ಇದೆ ಎನ್ನಲಾಗ್ತಿದೆ.
ಹಣಕ್ಕಾಗಿ ಚೆನ್ನೈ ತೊರೆಯುತ್ತಿದ್ದಾರಾ ಜಡೇಜಾ..?
ಸ್ಟಾರ್ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದೇ ಕಾರಣಕ್ಕೆ ಜಡೇಜಾ, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಉತ್ಸುಕವಾಗಿದ್ದಾರೆ ಎನ್ನಲಾಗ್ತಿದೆ. ಲೋವರ್ ಆರ್ಡರ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಜಡೇಜಾ, ಬೌಲಿಂಗ್​ನಲ್ಲಿ ಕಮಾಲ್ ಮಾಡ್ತಾರೆ. ಗೇಮ್ ಚೇಂಜರ್ ಪ್ಲೇಯರ್ ಆಗಿರುವ ಜಡೇಜಾ, ಗನ್ ಫೀಲ್ಡರ್​ ಆಗಿ ಫಲಿತಾಂಶವನ್ನೇ ಬದಲಿಸುವ ತಾಕತ್ತಿದೆ. ಈ ಕಾರಣಕ್ಕೆ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲ್ ಆಗ್ತೀವಿ ಅನ್ನೋದೇ ಜಡೇಜಾ ಲೆಕ್ಕಾಚಾರ ಎನ್ನಲಾಗ್ತಿದೆ. ಆದ್ರೆ, 14 ವರ್ಷಗಳ ಕಾಲ ಚೆನ್ನೈ ಕ್ಯಾಂಪ್​ನಲ್ಲಿದ್ದ ಜಡೇಜಾ, ನಿಜಕ್ಕೂ ತೊರೆಯುವ ಮನಸ್ಸು ಮಾಡ್ತಾರಾ ಅನ್ನೋದೇ ಪ್ರಶ್ನೆ.
/newsfirstlive-kannada/media/post_attachments/wp-content/uploads/2024/04/MS-Dhoni_Jadeja.jpg)
ಇದನ್ನೂ ಓದಿ: IPL 2025: ಎಷ್ಟು ಆಟಗಾರರನ್ನ ರಿಟೈನ್ ಮಾಡಬಹುದು? ರಿಟೈನ್ ಆಟಗಾರರಿಗೆ ಸಿಗೋ ಹಣವೆಷ್ಟು ಗೊತ್ತಾ?
ಜಡೇಜಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ್ರೆ, ಕೋಟಿ ಕೋಟಿ ಹಣದ ಹೊಳೆ ಹರಿಯುತ್ತೆ ನಿಜ. ಆದ್ರೆ, ಜಡೇಜಾ ಬೆಳವಣಿಗೆ ಹಿಂದೆ ಚೆನ್ನೈ ಹಾಗೂ ಧೋನಿ ಪಾತ್ರ ಅಪಾರ. ಜೊತೆಗೆ ಈ ಸೀಸನ್ ಧೋನಿ ಪಾಲಿಗೆ ಕೊನೆ ಎನ್ನಲಾಗ್ತಿದೆ. ಇಂಥಹ ಟೈಮ್​ನಲ್ಲಿ ಚೆನ್ನೈ ತೊರೆಯುವ ಮನಸ್ಸು ಜಡೇಜಾ ನಿಜಕ್ಕೂ ಮಾಡ್ತಾರಾ ಎಂಬ ಪ್ರಶ್ನೆ ಇದ್ದೇ ಇದೆ.
ಚೆನ್ನೈನಲ್ಲೇ ಉಳಿಯಲಿದ್ದಾರಾ ರವೀಂದ್ರ ಜಡೇಜಾ?
ಒಂದ್ಕಡೆ ರಿಟೈನ್ಶನ್​ ಪ್ಲೇಯರ್ಸ್ ಲಿಸ್ಟ್​ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್​ ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ಪೋಸ್ಟ್ ಹಂಚಿಕೊಂಡಿದೆ. ಈ ಫೋಸ್ಟ್​ನಲ್ಲಿ ಬಳಸಿರುವ ಇಮೋಜಿಗಳು, ಒಬ್ಬೊಬ್ಬ ಸ್ಟಾರ್ ಆಟಗಾರನ ಸೂಚಿಸುವಂತಿದೆ. ಇದನ್ನ ಫ್ಯಾನ್ಸ್​ ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ತಿದ್ದಾರೆ. ಈ ಪೈಕಿ 5ನೇ ಸಾಲಿನಲ್ಲಿ ಕತ್ತಿ, ಕುದರೆ, ವಿಕ್ಟರಿ ಇಮೋಜಿಗಳು ರವೀಂದ್ರ ಜಡೇಜಾರನ್ನೇ ಸೂಚಿಸುವಂತಿದೆ. ಇದು ಪರೋಕ್ಷ ಜಡೇಜಾನಾ ರಿಟೈನ್​ ಮಾಡಿಕೊಳ್ಳುತ್ತಿರುವ ಸಂದೇಶವನ್ನೇ ನೀಡ್ತಿವೆ.
/newsfirstlive-kannada/media/post_attachments/wp-content/uploads/2024/10/jadeja-1-1.jpg)
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಬಿರುಕು? ಗಂಭೀರ್-ರೋಹಿತ್ ಮಧ್ಯೆ ಜಗಳ..! 3 ಬಣವಾದ ತಂಡ!
ಒಟ್ಟಿನಲ್ಲಿ ಒಂದ್ಕಡೆ ಜಡೇಜಾ ಮೆಗಾ ಹರಾಜಿಗೆ ಹೋಗ್ತಾರೆ ಎಂಬ ಸುದ್ದಿ ಸುನಾಮಿಯನ್ನೇ ಎಬ್ಬಿಸಿದ್ರೆ. ಮತ್ತೊಂದೆಡೆ ಚೆನ್ನೈ ನಿಗೂಢ ಪೋಸ್ಟ್​ ಅಭಿಮಾನಿಗಳ ತಲೆಯಲ್ಲಿ ಉಳಬಿಟ್ಟಿದೆ. ಹೀಗಾಗಿ ಈ ಎಲ್ಲಾ ಅಂತೆಕಂತೆಗಳಿಗೆ ಯಾವ ರೀತಿಯ ಉತ್ತರ ಸಿಗುತ್ತೆ ಜಸ್ಟ್​ ವೇಯ್ಟ್​ ಆ್ಯಂಡ್ ಸೀ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us