/newsfirstlive-kannada/media/post_attachments/wp-content/uploads/2025/03/BLA-and-PAK.jpg)
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಲೂಚ್ ಲಿಬರೇಶನ್ ಆರ್ಮಿಯು (Balochistan Liberation Army) ಜಾಫರ್ ಎಕ್ಸ್​ಪ್ರೆಸ್ (Jaffar Express)​ ರೈಲನ್ನು ಅಪಹರಿಸಿ 214 ಪಾಕಿಸ್ತಾನಿ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಬೆನ್ನಲ್ಲೇ ಪಾಕಿಸ್ತಾನ ದೊಡ್ಡ ಬಿಕ್ಕಟ್ಟು ಎದುರಿಸುತ್ತಿದ್ದು, ನೂರಕ್ಕು ಹೆಚ್ಚು ನಾಗರಿಕರನ್ನು ರಕ್ಷಣೆ ಮಾಡಿರೋದಾಗಿ ಪಾಕ್ ಸೇನೆ ಹೇಳಿಕೊಂಡಿದೆ. ಇತ್ತ ಬಲೂಚಿಸ್ತಾನದ ಬಿಎಲ್​ಎ (BLA) 30ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಹೊಡೆದು ಹಾಕಿರೋದಾಗಿ ಹೇಳಿಕೊಂಡಿದೆ. ಈ ಬಗ್ಗೆ ಪಾಕಿಸ್ತಾನದ ಸೈನಿಕರು, ಪೊಲೀಸರು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬಿಎಲ್​ಎ ವಕ್ತಾರ ಜಯೇಂದ್ರ ಬಲೂಚ್ ಪ್ರಕಾರ, ಬಿಎಲ್​ಎ ಯೋಧರು ಜಾಫರ್ ಎಕ್ಸ್​ಪ್ರೆಸ್​ ರೈಲನ್ನು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನಿ ಸೇನೆ, ಅರೆ ಸೈನಿಕ ಪಡೆಗಳು, ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ 214 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ.
48 ಗಂಟೆ ಗಡುವು
ಬಿಎಎಲ್ ಒತ್ತೆಯಾಳಾಗಿಟ್ಟುಕೊಂಡ ಜನರನ್ನು ಯುದ್ಧ ಕೈದಿಗಳು ಎಂದು ಘೋಷಣೆ ಮಾಡಿದೆ. ಅಲ್ಲದೇ ಪಾಕಿಸ್ತಾನಕ್ಕೆ 48 ಗಂಟೆಗಳ ಅಂತಿಮ ಗಡುವು ನೀಡಿದೆ. ಬಲೂಚ್ ರಾಜಕೀಯ ಕೈದಿಗಳು, ಬಲವಂತಾವಗಿ ಕಣ್ಮರೆಯಾಗಿರುವ ವ್ಯಕ್ತಿಗಳು, ಬಲೂಚ್ ಕಾರ್ಯಕರ್ತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ. ಬೇಡಿಕೆ ಈಡೇರಿಸದೇ ಇದ್ದಲ್ಲಿ ಪರಿಣಾಮ ನೆಟ್ಟಗೆ ಇರಲ್ಲ ಎಂದು ಬಿಎಲ್​ಎ ಎಚ್ಚರಿಕೆ ಕೊಟ್ಟಿದೆ.
BLA ಬಯಸುತ್ತಿರೋದು ಏನು..?
ಬಿಎಲ್‌ಎ ತುಂಬಾ ಸರಳ ಮತ್ತು ಸ್ಪಷ್ಟವಾದ ಬೇಡಿಕೆಗಳನ್ನು ಹೊಂದಿದೆ. ಈ ಬಗ್ಗೆ ಹಲವು ಬಾರಿ ವಿಶ್ವದ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರು ಬಲೂಚಿಸ್ತಾನವನ್ನು ಪ್ರತ್ಯೇಕ ಪ್ರಾಂತ್ಯ, ಪ್ರತ್ಯೇಕ ದೇಶ ಎಂದು ಪರಿಗಣಿಸ್ತಾರೆ. ಅಲ್ಲಿ ಅವರು ಪ್ರತ್ಯೇಕ ಸರ್ಕಾರ ನಡೆಸುತ್ತಾರೆ. ಬಲೂಚಿಸ್ತಾನದಲ್ಲಿ ಯಾವುದೇ ಪಾಕಿಸ್ತಾನಿ ಸಂಸ್ಥೆ ಅಥವಾ ಭದ್ರತಾ ಸಂಸ್ಥೆಯ ಪ್ರತಿನಿಧಿಗಳು ಇರಬಾರದು ಅನ್ನೋದು ಬಲೂಚಿಗಳ ಮೊದಲ ಮತ್ತು ಪ್ರಮುಖ ಬೇಡಿಕೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ 48 ಗಂಟೆಗಳ ಡೆಡ್​ಲೈನ್.. ಟ್ರೈನ್ ಹೈಜಾಕ್​ಗೆ ಮುಖ್ಯ ಕಾರಣ?
/newsfirstlive-kannada/media/post_attachments/wp-content/uploads/2025/03/PAK_TRAIN_2.jpg)
ಸಿಪಿಇಸಿ ಯೋಜನೆಗಳು (China–Pakistan Economic Corridor) ಚೀನಾದೊಂದಿಗೆ ನಡೆಯುತ್ತಿವೆ ಎಂದು ಬಲೂಚ್‌ಗಳು ನಂಬುತ್ತಾರೆ. ಯೋಜನೆಗಳ ಮೂಲಕ ಅವರ ಖನಿಜಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪ್ರಾಜೆಕ್ಟ್​ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಲೂಚ್ ಜನರು ಸ್ಥಳಾಂತರಗೊಂಡಿದ್ದಾರೆ. ಹಾಗಾಗಿ ಈ ಪ್ರಾಜೆಕ್ಟ್​​ ಕೂಡಲೇ ನಿಲ್ಲಿಸಬೇಕು ಅನ್ನೋದು ಒತ್ತಾಯ.
ಅಂದ್ಹಾಗೆ ಪಾಕಿಸ್ತಾನದ ಮೇಲೆ ಬಿಎಲ್‌ಎ ನಡೆಸಿದ ದಾಳಿ ಹೊಸದೇನೂ ಅಲ್ಲ. ಕಳೆದ ಹಲವಾರು ವರ್ಷಗಳಿಂದ ಬಿಎಲ್‌ಎ ಪಾಕಿಸ್ತಾನದ ಮೇಲೆ ಇಂತಹ ದಾಳಿ ನಡೆಸುತ್ತಿದೆ. ಕೆಲವೊಮ್ಮೆ ಅದು ಚೀನಾದ ಎಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡರೆ, ಕೆಲವೊಮ್ಮೆ ಪಾಕಿಸ್ತಾನಿ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ:ಗೆಲುವಿನೊಂದಿಗೆ WPLಗೆ ವಿದಾಯ ಹೇಳಿದ RCB; ‘ಮುಂದಿನ ಸಲ ಕಪ್ ನಮ್ದೆ’ ಎಂದ ಮಂದಾನ ಪಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us