/newsfirstlive-kannada/media/post_attachments/wp-content/uploads/2025/07/JAGADEESHAN.jpg)
ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ನಡುವೆ ಸರಣಿಯ 4ನೇ ಪಂದ್ಯ ನಡೆಯುತ್ತಿದ್ದು ಈಗಾಗಲೇ ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ಪಡೆ ಕೇವಲ 358ಕ್ಕೆ ಆಲೌಟ್ ಆಗಿದೆ. ಈ ಪಂದ್ಯ ಗೆದ್ದು ಸಮಬಲ ಕಾಯ್ದುಕೊಳ್ಳುವ ಅನಿವಾರ್ಯ ಭಾರತಕ್ಕಿದೆ. ಆದರೆ ಗಾಯಗೊಂಡಿರುವ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದು ಈ ಸ್ಥಾನಕ್ಕೆ ಯುವ ಆಟಗಾರನಿಗೆ ಬುಲಾವ್ ನೀಡಲಾಗಿದೆ.
ರಿಷಭ್ ಪಂತ್ ಅವರು ಬ್ಯಾಟಿಂಗ್ ಮಾಡುವಾಗ ಕಾಲಿಗೆ ಚೆಂಡು ತಾಗಿ ಬಲವಾಗಿ ಗಾಯಗೊಂಡಿದ್ದರು. ಚೆಂಡು ಬಡಿದ ರಭಸಕ್ಕೆ ಕಾಲಿನಿಂದ ರಕ್ತ ಬಂದಿತ್ತು. ಇದಕ್ಕೂ ಮೊದಲಿನ ಟೆಸ್ಟ್ನಲ್ಲಿ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದರು. ಗಾಯದ ಬಳಿಕ ಗಾಯಗೊಂಡಿರುವ ರಿಷಭ್ ಪಂತ್ 5ನೇ ಟೆಸ್ಟ್ ಪಂದ್ಯದಲ್ಲಿ ಆಡಲ್ಲ. ಇದೀಗ ಪಂತ್ ಸ್ಥಾನಕ್ಕೆ ತಮಿಳುನಾಡಿನ ಯಂಗ್ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಎನ್ ಜಗದೀಶನ್ ಇಂಗ್ಲೆಂಡ್ಗೆ ಹಾರುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ರಿಷಭ್ ಪಂತ್ ಸ್ಥಾನವನ್ನೇ ನಿರಾಕರಿಸಿದ ಇಶನ್ ಕಿಶನ್.. ಇಂಗ್ಲೆಂಡ್ಗೆ ಹೋಗಲ್ಲವೆಂದ ಯಂಗ್ ವಿಕೆಟ್ ಕೀಪರ್!
ತಮಿಳುನಾಡಿನ ಯುವ ಆಟಗಾರ ಆಗಿರುವ ಎನ್ ಜಗದೀಶನ್ ಅವರು ಬಲಗೈ ಬ್ಯಾಟರ್ ಆಗಿದ್ದಾರೆ. ಅಲ್ಲದೇ ವಿಕೆಟ್ ಕೀಪರ್ ಮಾಡುವಲ್ಲಿ ಎತ್ತಿದ ಕೈ. ಹೀಗಾಗಿ ಪಂತ್ ಸ್ಥಾನಕ್ಕೆ ಎನ್ ಜಗದೀಶನ್ ಸೂಕ್ತ ಎಂದು ಬಿಸಿಸಿಐ ಆಯ್ಕೆ ಸಮಿತಿ ಎನ್ ಜಗದೀಶನ್ರನ್ನ ಸಂಪರ್ಕ ಮಾಡಿದೆ. ಹೀಗಾಗಿ ಮುಂದಿನ 5ನೇ ಟೆಸ್ಟ್ನಲ್ಲಿ ಎನ್ ಜಗದೀಶನ್ ಭಾರತ ತಂಡದಲ್ಲಿ ಡೆಬ್ಯೂ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ.
ಎನ್ ಜಗದೀಶನ್ ಈ ವರೆಗೆ 52 ಪ್ರಥಮ ದರ್ಜೆ ಪಂದ್ಯ ಆಡಿದ್ದು ಇದರಲ್ಲಿ 133 ಕ್ಯಾಚ್ಗಳನ್ನು ಹಿಡಿದಿರುವುದು ಶ್ರೇಷ್ಟವಾಗಿದೆ. 14 ಸ್ಟಂಪ್ ಔಟ್ ಮಾಡಿದ್ದಾರೆ. ಈ ಎಲ್ಲದಕ್ಕಿಂತ ಮಿಗಿಲಾಗಿ 3,373 ರನ್ಗಳನ್ನು ಗಳಿಸಿದ್ದಾರೆ. ಬಿಸಿಸಿಐ ಮೊದಲ ಆಯ್ಕೆ ಆಗಿ ಇಶನ್ ಕಿಶನ್ಗೆ ಆಫರ್ ನೀಡಲಾಗಿತ್ತು. ಆದರೆ ಕಾರಣ ನೀಡಿ ಇಶನ್ ಇಂಗ್ಲೆಂಡ್ಗೆ ಪ್ರಯಾಣ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಎನ್ ಜಗದೀಶನ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಒಲಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ