/newsfirstlive-kannada/media/post_attachments/wp-content/uploads/2025/05/Ramabhadracharya-pok-1.jpg)
ಆಪರೇಷನ್ ಸಿಂಧೂರ ಕಾರ್ಯಾಚರಣೆ ಪಾಕಿಸ್ತಾನದ ಮೈಚಳಿ ಬಿಡಿಸಿದೆ. ಭಾರತೀಯ ಸೇನೆಯ ಈ ಯಶಸ್ವಿ ಕಾರ್ಯಾಚರಣೆ ಬೆನ್ನಲ್ಲೇ PoK (ಪಾಕ್ ಆಕ್ರಮಿತ ಕಾಶ್ಮೀರ) ಅನ್ನು ವಶಪಡಿಸಿಕೊಳ್ಳಬೇಕು ಅನ್ನೋ ಕೂಗು ಹೆಚ್ಚಾಗುತ್ತಿದೆ. ನಮ್ಮ ಹೆಮ್ಮೆಯ ಸೇನಾ ಶಕ್ತಿ ಪ್ರದರ್ಶನದ ಸಂದರ್ಭದಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಭಾರತೀಯ ಸೇನಾ ಮುಖ್ಯಸ್ಥರಿಗೆ ದೀಕ್ಷೆ ಕೊಟ್ಟು ಇಡೀ ದೇಶದ ಗಮನ ಸೆಳೆದಿದ್ದಾರೆ.
ಮಧ್ಯಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಹಾಗೂ ಮುಖ್ಯಸ್ಥರಾದ ಜಗದ್ಗುರು ರಾಮಭದ್ರಾಚಾರ್ಯರು ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರಿಗೆ ದೀಕ್ಷೆ ನೀಡಿದ್ದು, ನನಗೆ ಗುರುದಕ್ಷಿಣೆಯಾಗಿ PoK ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಾವಾ, ನೀವಾ ನೋಡೇ ಬಿಡೋಣ.. ತುಮಕೂರಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು, ಹೋರಾಟಗಾರರು
ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಕುಟುಂಬ ಸಮೇತ ಮಧ್ಯಪ್ರದೇಶದ ತುಳಸಿ ಪೀಠಕ್ಕೆ ಭೇಟಿ ನೀಡಿ ಜಗದ್ಗುರು ರಾಮಭದ್ರಾಚಾರ್ಯರ ಆಶೀರ್ವಾದ ಪಡೆದರು. ಈ ವೇಳೆ ಗುರುದಕ್ಷಿಣೆಯಾಗಿ PoK ಕೇಳಿರೋದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2025/05/Ramabhadracharya-pok.jpg)
ಜಗದ್ಗುರು ರಾಮಭದ್ರಾಚಾರ್ಯರು ಭಾರತದ ಹಿಂದೂ ಧಾರ್ಮಿಕ ಮುಖಂಡರಲ್ಲಿ ಬಹಳ ಪ್ರಮುಖರು. ಆಧ್ಯಾತ್ಮಿಕ ಮುಖಂಡರಾದ ರಾಮಭದ್ರಾಚಾರ್ಯರು ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ನಮ್ಮ ಸೇನಾ ಮುಖ್ಯಸ್ಥರ ವಿಜಯ ನಮಗೆ ಹೆಮ್ಮೆಯ ವಿಚಾರವಾಗಿದೆ. ಅವರು ಲಂಕೆಯಲ್ಲಿ ಸೀತಾಮಾತೆ ಹನುಮನಿಗೆ ನೀಡಿದೆ ದೀಕ್ಷೆಯನ್ನು ನನ್ನಿಂದ ಪಡೆದಿದ್ದಾರೆ. ಸೀತೆ, ಹನುಮನಿಗೆ ಹೇಳಿದ ಮಂತ್ರವನ್ನು ಅವರಿಗೆ ಹೇಳಿದ್ದೇನೆ. ಈ ದೀಕ್ಷೆ ನೀಡಿದ್ದಕ್ಕಾಗಿ ನಾನು ಸೇನಾ ಮುಖ್ಯಸ್ಥರಿಂದ ಗುರುದಕ್ಷಿಣೆಯಾಗಿ PoK ಅನ್ನು ಕೇಳಿದ್ದೇನೆ. ಅದಕ್ಕೆ ಅವರು ಗುರುದಕ್ಷಿಣೆಯನ್ನು ಖಂಡಿತವಾಗಿಯೂ ನೀಡುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಮಧ್ಯಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕರೂ ಹಾಗೂ ಮುಖ್ಯಸ್ಥರಾದ ಜಗದ್ಗುರು ರಾಮಭದ್ರಾಚಾರ್ಯರು ಹೆಸರಾಂತ ಸಂಸ್ಕೃತ ವಿದ್ವಾಂಸರಾಗಿದ್ದಾರೆ. ಹಿಂದೂ ಆಧ್ಯಾತ್ಮಿಕ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅಂಧರಾಗಿದ್ದರೂ 100ಕ್ಕೂ ಹೆಚ್ಚು ಪುಸ್ತಕಗಳ ಬರಹಗಾರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us