newsfirstkannada.com

ಲೋಕ ಸಮರದಲ್ಲಿ ‘ಕುಂದಾ’ ಸವಿಯಲು ಜಗದೀಶ್​ ಶೆಟ್ಟರ್ ರೆಡಿ.. ಬೆಳಗಾವಿ ಟಿಕೆಟ್​ ಬಹುತೇಕ ಫಿಕ್ಸ್

Share :

Published March 15, 2024 at 6:33am

    ಸುರೇಶ್​ ಅಂಗಡಿ ಪುತ್ರಿಯರಿಗೆ ಟಿಕೆಟ್​ ಕೇಳಿದ್ದ ಶೆಟ್ಟರ್​

    ಶೆಟ್ಟರ್​ ಪ್ರಸ್ತಾಪವನ್ನ ತಿರಸ್ಕರಿಸಿದ ಬಿ.ಎಸ್​.ಯಡಿಯೂರಪ್ಪ

    ನನ್ನ ಸೊಸೆ ಶ್ರದ್ಧಾಗೆ ಟಿಕೆಟ್​ ಕೊಡಿ ಎಂದಿದ್ದ ಜಗದೀಶ್​ ಶೆಟ್ಟರ್​

ಧಾರವಾಡ ಅಥವಾ ಹಾವೇರಿಯಿಂದ ಟಿಕೆಟ್ ಬಯಸಿದ್ದ ಜಗದೀಶ್ ಶೆಟ್ಟರ್​ಗೆ ಹೈಕಮಾಂಡ್ ನಿರಾಸೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಶೆಟ್ಟರ್​ನ್ನ ಯಡಿಯೂರಪ್ಪ ಮನವೊಲಿಸಿದ್ದಾರೆ. ನಿನ್ನೆ ಧವಳಗಿರಿ ನಿವಾಸದಲ್ಲಿ ನಡೆದ ಸುದೀರ್ಘ ಮಾತುಕತೆಯಲ್ಲಿ ಶೆಟ್ಟರ್​ ಕುಂದಾ ಸವಿಯುವುದಾಗಿ ಒಪ್ಪಿದ್ದಾರೆ.

ಜಗದೀಶ್​ ಶೆಟ್ಟರ್. ಮಾಜಿ ಸಿಎಂ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಕೈ ಹಿಡಿದಿದ್ದ ನಾಯಕ ಈಗ ಮತ್ತೆ ತವರು ಮನೆಗೆ ವಾಪಸ್ಸಾಗಿದ್ದಾರೆ. ಆದ್ರೆ ಹಾವೇರಿ ಮತ್ತು ಧಾರವಾಡ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್​ಗೆ ನಿರಾಸೆಯಾಗಿದೆ. ಮೊನ್ನೆ ರಾಜ್ಯದ 20 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದ್ರೂ ಟಿಕೆಟ್ ಖಾತ್ರಿಯಾಗಿಲ್ಲ. ಹೀಗಾಗಿ ಮತ್ತೆ ಶೆಟ್ಟರ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ​ ಅಂತಾನೇ ಹೇಳಲಾಗಿತ್ತು. ಈಗ ಮತ್ತೊಂದು ಅಖಾಡದಿಂದ ಜಗದೀಶ್ ಸ್ಪರ್ಧಿಸುವ ಸುಳಿವು ಸಿಕ್ಕಿದೆ.

ಜಗದೀಶ್​ ಶೆಟ್ಟರ್​ಗೆ ಬೆಳಗಾವಿ ಟಿಕೆಟ್​ ಬಹುತೇಕ ಫಿಕ್ಸ್​

ಜಗದೀಶ್ ಶೆಟ್ಟರ್ ಮನವೊಲಿಕೆ ಸರ್ಕಸ್ ಕೊನೆಗೂ ಅಂತ್ಯವಾಗಿದೆ. ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜಗದೀಶ್ ಶೆಟ್ಟರ್ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ಕಮಲ ಪಾಳಯದಿಂದಲೇ ಲಭ್ಯವಾಗಿದೆ. ನಿನ್ನೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಹುಬ್ಬಳ್ಳಿಯ ನಿವಾಸದಿಂದ ತೆರಳಿ ಬೆಂಗಳೂರಿನ ಡಾಲರ್ಸ್‌ಕಾಲೋನಿ ನಿವಾಸದಲ್ಲಿ ಭೇಟಿಯಾಗಿ ಶೆಟ್ಟರ್‌ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬೆಳಗಾವಿಯಿಂದ ಸ್ಪರ್ಧಿಸ್ತೀನಿ ಅಮಿತ್ ಶಾಗೆ ತಿಳಿಸಿ ಅಂತ ಹೇಳಿದ್ದಾರೆಂದು ಮಾಹಿತಿ ಸಿಕ್ಕಿದೆ. ಟಿಕೆಟ್ ಸಿಗದ ಹಿನ್ನೆಲೆ ನಿನ್ನೆ ಬೆಂಬಲಿಗರ ಸಭೆ ನಡೆಸಿದ ಬಳಿಕ ಶೆಟ್ಟರ್, ಯಡಿಯೂರಪ್ಪ ಮನೆಗೆ ಆಗಮಿಸಿದ್ದರು. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದೆ ಹೊಸ ಪ್ರಸ್ತಾಪ ಮುಂದಿಟ್ಟಿದ್ದರು.

ಬೆಳಗಾವಿಯಿಂದ ಶೆಟ್ಟರ್​ ಸ್ಪರ್ಧೆ

ಸುರೇಶ್​ ಅಂಗಡಿ ಪುತ್ರಿಯರಿಗೆ ಟಿಕೆಟ್​ ಕೇಳಿದ್ದ ಶೆಟ್ಟರ್​ ನನ್ನ ಬದಲು ಅವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್​ಗೆ ಒತ್ತಾಯಿಸಿ ಬಿಎಸ್​ವೈ ಮುಂದೆ ಪ್ರಸ್ತಾಪಿಸಿದ್ದರು. ನನಗೆ ಟಿಕೆಟ್ ನೀಡುವುದಕ್ಕಿಂತ ಮಂಗಳ ಅಂಗಡಿ ಮೊದಲ ಮಗಳು ಸ್ಫೂರ್ತಿ ಪಾಟೀಲ್ ಅಥವಾ ಅವರ ಎರಡನೇ ಮಗಳು ನನ್ನ ಸೊಸೆ ಶ್ರದ್ಧಾಗೆ ಟಿಕೆಟ್​ ಕೊಡಿ ಅಂತ ಶೆಟ್ಟರ್​ ಹೇಳಿದ್ರು. ಅವರಿಗೆ ಟಿಕೆಟ್ ನೀಡುವುದರಿಂದ ಅಂಗಡಿ ಕುಟುಂಬ ಹಾಗೂ ನಮ್ಮ ಕುಟುಂಬಕ್ಕೂ ನ್ಯಾಯ ಒದಗಿಸಿದಂತೆ ಆಗುತ್ತದೆ. ಕೇಂದ್ರ ನಾಯಕರಿಗೆ ಇದನ್ನು ತಿಳಿಸುವಂತೆ ಪ್ರಸ್ತಾಪ ಮಾಡಿದ್ದರು. ಆದ್ರೆ ಶೆಟ್ಟರ್​ ಪ್ರಸ್ತಾಪವನ್ನ ಯಡಿಯೂರಪ್ಪ ತಿರಸ್ಕರಿಸಿದ್ದರು. ಹೈಕಮಾಂಡ್ ಮುಂದೆ ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಈಗಾಗಲೇ ನಿಮ್ಮ ಹೆಸರನ್ನು ಶಿಫಾರಸ್ಸು ಮಾಡಿದ್ದೇವೆ. ಇದು ಮಕ್ಕಳಾಟವಲ್ಲ, ಹೈಕಮಾಂಡ್ ಬಳಿ ಚರ್ಚೆ ಆಗಿದೆ. ಧೈರ್ಯವಾಗಿ ಸ್ಪರ್ಧೆ ಮಾಡಿ, ನಿಮ್ಮ ಸಂಸತ್ ಪ್ರವೇಶ ನಿಶ್ಚಿತ. ಅನುಮಾನವೇ ಬೇಡ ಅಂತ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಧಾರವಾಡ ಹಾಗೂ ಹಾವೇರಿ ಎರಡು ಕ್ಷೇತ್ರ ಕೈ ತಪ್ಪಿದ ಹಿನ್ನೆಲೆ ಶೆಟ್ಟರ್ ಅಸಮಾಧಾನಗೊಂಡಿದ್ದರು ಎಂಬ ಮಾತುಗಳು ಹರಿದಾಡುತಿದ್ದವು. ಆದ್ರೆ ಯಡಿಯೂರಪ್ಪ ಜೊತೆಗಿನ ಮಾತುಕತೆ ಬಳಿಕ ಎಲ್ಲವೂ ಸುಖಾಂತ್ಯವಾಗಿದೆ ಎನ್ನಲಾಗ್ತಿದೆ. ಬೆಳಗಾವಿಯಿಂದಲೇ ಸ್ಪರ್ಧಿಸಲು ಶೆಟ್ಟರ್ ಒಪ್ಪಿದ್ದು ಅಮಿತ್ ಶಾಗೆ ಸಂದೇಶ ಕಳಿಸಲು ತಿಳಿಸಿದ್ದಾರೆ. ಹೀಗಾಗಿ ಮುಂದಿನ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ಘೋಷಣೆಯಾಗುವುದು ಬಹುತೇಕ ಪಕ್ಕಾ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕ ಸಮರದಲ್ಲಿ ‘ಕುಂದಾ’ ಸವಿಯಲು ಜಗದೀಶ್​ ಶೆಟ್ಟರ್ ರೆಡಿ.. ಬೆಳಗಾವಿ ಟಿಕೆಟ್​ ಬಹುತೇಕ ಫಿಕ್ಸ್

https://newsfirstlive.com/wp-content/uploads/2024/03/jagadish-Shettar.jpg

Load More