newsfirstkannada.com

ಕಾಂಗ್ರೆಸ್​​ಗೆ ಬಿಗ್​ ಶಾಕ್​​.. ಬಿಜೆಪಿ ಸೇರಲು ಅಸಲಿ ಕಾರಣ ಬಿಚ್ಚಿಟ್ಟ ಜಗದೀಶ್​ ಶೆಟ್ಟರ್​​!

Share :

Published January 25, 2024 at 8:40pm

    ‘ಕೈ’ ಕೊಟ್ಟು ‘ಕಮಲ’ ಮುಡಿದ ಮಾಜಿ ಮುಖ್ಯಮಂತ್ರಿ

    ಲೋಕ’ ಕದನಕ್ಕೆ ಬಿಜೆಪಿ ರಿವರ್ಸ್ ಆಪರೇಷನ್..!

    ದೆಹಲಿಯಲ್ಲಿ ವರಿಷ್ಠರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಬೆಂಗಳೂರು: ಮಾಜಿ ಸಿಎಂ ಜಗದೀಶ್​​​ ಶೆಟ್ಟರ್​​​, ಹುಟ್ಟು ಬಿಜೆಪಿಗ.. ಕಟ್ಟಾ ಆರ್​​ಎಸ್​ಎಸ್​​.. ಶೆಟ್ಟರ್​​​ಗೆ 9 ತಿಂಗಳು ಕಳೆದ್ರೂ ಕಾಂಗ್ರೆಸ್​​ ಒಗ್ಗಲೇ ಇಲ್ಲ.. ಸದ್ಯ ಕಾಂಗ್ರೆಸ್​​ನಲ್ಲಿ ಕಾಣದ ಭವಿಷ್ಯ, ಬಿಜೆಪಿಯಲ್ಲಿ ಕಾಣಿಸಿದೆ.. ರಾಜ್ಯ ರಾಜಕೀಯ ಬಿಟ್ಟು ರಾಷ್ಟ್ರ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಯ ಲೆಕ್ಕಾಚಾರದಲ್ಲಿರುವ ಶೆಟ್ಟರ್​​, ಕುಟುಂಬದ ಹಿತರಕ್ಷಣೆಗಾಗಿ ದೇಶದ ರಕ್ಷಣೆಯ ವಾದ ಮಂಡಿಸಿದ್ದಾರೆ.. ಮೋದಿ ಮತ್ತೊಮ್ಮೆ ಅನ್ನೋ ಘೋಷದೊಂದಿಗೆ ಘರ್​​​ವಾಪ್ಸಿ ಆಗಿದ್ದಾರೆ.. ಈ ಮೂಲಕ ಲೋಕ ಹೊಸ್ತಿಲಲ್ಲಿ ಕಾಂಗ್ರೆಸ್​​ ಬಿಗ್​​ ಶಾಕ್​​ ನೀಡಿದ್ದಾರೆ.

ಮಾಜಿ ಸಿಎಂ ಜಗದೀಶ್​​​ ಶೆಟ್ಟರ್​​​, ಹುಟ್ಟು ಬಿಜೆಪಿಗ.. ಕಟ್ಟಾ ಆರ್​​ಎಸ್​ಎಸ್​​.. ಶೆಟ್ಟರ್​​​ಗೆ 9 ತಿಂಗಳು ಕಳೆದ್ರೂ ಕಾಂಗ್ರೆಸ್​​ ಒಗ್ಗಲೇ ಇಲ್ಲ.. ಸದ್ಯ ಕಾಂಗ್ರೆಸ್​​ನಲ್ಲಿ ಕಾಣದ ಭವಿಷ್ಯ, ಬಿಜೆಪಿಯಲ್ಲಿ ಕಾಣಿಸಿದೆ.. ರಾಜ್ಯ ರಾಜಕೀಯ ಬಿಟ್ಟು ರಾಷ್ಟ್ರ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಯ ಲೆಕ್ಕಾಚಾರದಲ್ಲಿರುವ ಶೆಟ್ಟರ್​​, ಕುಟುಂಬದ ಹಿತರಕ್ಷಣೆಗಾಗಿ ದೇಶದ ರಕ್ಷಣೆಯ ವಾದ ಮಂಡಿಸಿದ್ದಾರೆ.. ಮೋದಿ ಮತ್ತೊಮ್ಮೆ ಅನ್ನೋ ಘೋಷದೊಂದಿಗೆ ಘರ್​​​ವಾಪ್ಸಿ ಆಗಿದ್ದಾರೆ.. ಈ ಮೂಲಕ ಲೋಕ ಹೊಸ್ತಿಲಲ್ಲಿ ಕಾಂಗ್ರೆಸ್​​ ಬಿಗ್​​ ಶಾಕ್​​ ನೀಡಿದ್ದಾರೆ.

ಜಗದೀಶ್​​​​ ಶೆಟ್ಟರ್​​​.. ಕರ್ನಾಟಕ ಬಿಜೆಪಿ ಫೋರಂನ ಬಲಿಷ್ಠ ನಾಯಕ.. ಕಿತ್ತೂರು ಕರ್ನಾಟಕ ಭಾಗದ ರಾಜಕೀಯ ಕಲೆಗಾರ.. ಆದ್ರೆ, ಹೆತ್ತಾಡಿಸಿದ ಕಮಲ ಮನೆ ಮೇಲೆ ಸಿಟ್ಟಾಗಿದ್ದ ಶೆಟ್ಟರ್​​​, ಮನದ ಕಿಡಿ ಆರಿದೆ.. ಸಿಡಿದ ಅಸಮಾಧಾನ ಕಳೆದ ಎಲೆಕ್ಷನ್​​​ನಲ್ಲಿ ಕಮಲವನ್ನೇ ಅಪೋಷನ್​​​​ ಪಡೆದಿದ್ದ ಮಾಜಿ ಸಿಎಂ, ಲೋಕ ಕದನಕ್ಕೆ ಬಿಜೆಪಿ ಹೈಕಮಾಂಡ್​​ಗೆ ಅನಿವಾರ್ಯ ಆಗಿದ್ದಾರೆ.. ಈ ಅನಿವಾರ್ಯತೆಯೇ ಗೇಮ್​​​ ಚೇಂಜರ್​​​​ ಶೆಟ್ಟರ್​​ರನ್ನ ರೆಡ್​ ಕಾರ್ಪೆಟ್​​ ಹಾಸಿದೆ.

ಬಿಜೆಪಿಗೆ ಘರ್​​​ವಾಪ್ಸಿಯಾದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್​!
ಲೋಕಸಭಾ ಎಲೆಕ್ಷನ್​​ ಹೊತ್ತಲ್ಲಿ ಬಿಜೆಪಿ ರಿವರ್ಸ್​​ ಆಪರೇಷನ್​​​

ಜೀವನದುದ್ದಕ್ಕೂ ಕಾಂಗ್ರೆಸ್​ ಕೆಣಕಿ ರಾಜಕೀಯ ಮಾಡಿದ್ದ ಮಾಜಿ ಸಿಎಂ,​ ರಾಜಕೀಯ ಸಂಧ್ಯಾ ಕಾಲದಲ್ಲಿ ಕೈಕುಲುಕಿದ್ದು, ಕೇಸರಿ ಸೇನೆಗೆ ಶಸ್ತ್ರಾಘಾತ ನೀಡಿತ್ತು.. ಸದ್ಯ ಎಲ್ಲವನ್ನ ಸರಿಪಡಿಸಿಕೊಂಡ ಕಿತ್ತೂರು ಕೋಟೆಯ ಲಿಂಗಾಯತರ ಬಲಿಷ್ಠ ನಾಯಕ ಶೆಟ್ಟರ್​​, ಮನೆಗೆ ಮರು ಪ್ರವೇಶ ಮಾಡಿದ್ದಾರೆ.. ಲೋಕಸಭೆ ಎಲೆಕ್ಷನ್​ ಹೊತ್ತಲ್ಲೇ ಕಾಂಗ್ರೆಸ್​ಗೆ ಜಗದೀಶ್​​​ ಶೆಟ್ಟರ್​​​​, ಆಘಾತ ನೀಡಿದ್ದಾರೆ.
ಮಾಜಿ ಸಿಎಂ ಜಗದೀಶ್‌ ಶೆಟ್ಟರ್​ ಅಧಿಕೃತವಾಗಿ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.. ಬೆಳಗ್ಗೆ ಶೆಟ್ಟರ್​​ರನ್ನ ಡೆಲ್ಲಿಗೆ ಕರೆತಂದ ಎಲೆಕ್ಷನ್​​​ ಚಾಣಾಕ್ಯ ಬಿಎಸ್​​ವೈ ಮತ್ತು ವಿಜಯೇಂದ್ರ, ನೇರವಾಗಿ ಅಮಿತ್​​ ಶಾ ಮನೆ ಪ್ರವೇಶ ಮಾಡಿದ್ದರು.. ಅದಾಗಿ ಕೆಲವೇ ಹೊತ್ತಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಶೆಟ್ಟರ್​​​​, ಪಕ್ಷದ ನಾಯಕರ ಸಮ್ಮುಖದಲ್ಲಿ ಕಮಲ ಪಾಳಯ ಸೇರಿದ್ರು.. ಈ ಮೂಲಕ ಬಿಜೆಪಿ ನಿರೀಕ್ಷಿಸಿದ ರಣಬೇಟೆ ಆಡಿ ಮುಗಿಸಿದೆ.

ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ರಾಜೀವ್ ಚಂದ್ರಶೇಖರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಶೆಟ್ಟರ್​​​ ಮತ್ತೆ ಕೇಸರಿ ಶಾಲು ಧರಿಸಿದ್ರು.

ಹಿರಿಯ ನಾಯಕರ ಆಸೆ, ಪಕ್ಷದ ಕಾರ್ಯಕರ್ತರ ಅಪೇಕ್ಷೆ

ಈ ವೇಳೆ, ಮಾತ್ನಾಡಿದ ಶೆಟ್ಟರ್​​​, ಇದು ಬಿಜೆಪಿ ಕಾರ್ಯಕರ್ತರು, ಶಾಸಕರ ಅಪೇಕ್ಷೆ.. ರಾಷ್ಟ್ರೀಯ ನಾಯಕರ ಆಸೆ.. ಅತ್ಯಂತ ಗೌರವದಿಂದ, ಪ್ರೀತಿ ವಿಶ್ವಾಸದಿಂದ ಅಮಿತ್​ ಶಾ ಬರಮಾಡಿಕೊಂಡ್ರು.. ಅವರ ಮನವಿಯನ್ನ ಮನ್ನಿಸಿ ಬಿಜೆಪಿ ಸೇರುತ್ತಿದ್ದೇನೆ.. ಪಕ್ಷಕ್ಕೆ ಮರಳ್ತಿರೋದು ಖುಷಿ ಸಂಗತಿ ಎಂದ್ರು.

ಭಾರತದ ಪ್ರಗತಿ, ದೇಶದ ರಕ್ಷಣೆಗಾಗಿ ಮೋದಿ ಅನಿವಾರ್ಯ!

ಕಳೆದ 10 ವರ್ಷಗಳಿಂದ ಭಾರತದ ಪ್ರಗತಿಗೆ, ದೇಶದ ಶಕ್ತಿ, ರಕ್ಷಣೆಗಾಗಿ ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ.. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಹೇಳಿದ್ರು.. ಸದ್ಯ ಪಕ್ಷ ಸೇರ್ಪಡೆ ಆಗ್ತಿದ್ದು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಅಂತ ಭರವಸೆ ನೀಡಿದ್ದಾರೆ.. ಇನ್ನು, ಬಿಜೆಪಿ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಧನ್ಯವಾದ ಹೇಳಿದ್ರು.

ಯಾವುದೇ ಅಪೇಕ್ಷೆ ಇಲ್ಲದೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.. ಇನ್ನು, ಯಡಿಯೂರಪ್ಪ ಮಾತ್ನಾಡಿ, ಶೆಟ್ಟರ್‌ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಿದೆ ಎಂದ್ರು.

ಪಕ್ಷ ಸೇರ್ಪಡೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಿವಾಸಕ್ಕೆ ಭೇಟಿ ನೀಡಿದ್ರು.. ಈ ವೇಳೆ, ಶೆಟ್ಟರ್​ಗೆ ಹೂಗುಚ್ಛ ನೀಡಿ ನಡ್ಡಾ ಬರಮಾಡಿಕೊಂಡ್ರು.. ಒಟ್ಟಾರೆ, ಶೆಟ್ಟರ್​​ ಬಿಜೆಪಿ ಸೇರ್ಪಡೆಯಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ದೊಡ್ಡ ಬಿಜೆಪಿಗೆ ಬಲ ಬರಲಿದೆ.. ಈ ಮೂಲಕ ಕಳೆದುಕೊಂಡಿದ್ದ ಲಿಂಗಾಯತ ಶಕ್ತಿ ಮರಳಿ ಪಡೆದಂತಾಗಿದೆ.. ಶೆಟ್ಟರ್​​ ಆಗಮನ, ಹೊಸ ರಾಜಕೀಯ ಲೆಕ್ಕಾಚಾರಗಳ ವಿಶ್ಲೇಷಣೆಗಳು ಶುರುವಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ಗೆ ಬಿಗ್​ ಶಾಕ್​​.. ಬಿಜೆಪಿ ಸೇರಲು ಅಸಲಿ ಕಾರಣ ಬಿಚ್ಚಿಟ್ಟ ಜಗದೀಶ್​ ಶೆಟ್ಟರ್​​!

https://newsfirstlive.com/wp-content/uploads/2024/01/Jagadish-Shettar-Bjp.jpg

Load More