/newsfirstlive-kannada/media/post_attachments/wp-content/uploads/2024/10/JAGAN-AND-SHARMILA.jpg)
ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್​ ರೆಡ್ಡಿ ರಾಷ್ಟ್ರೀಯ ಸಂಸ್ಥ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಅವರ ಸಹೋದರಿ ಹಾಗೂ ಆಂಧ್ರಪ್ರದೇಶದ ಕಾಂಗ್ರೆಸ್​​ ಅಧ್ಯಕ್ಷೆ ವೈ ಎಸ್ ಶರ್ಮಿಳಾ ಕಾನೂನು ಬಾಹಿರವಾಗಿ ಸರಸ್ವತಿ ಪವರ್ ಅಂಡ್ ಇಂಡಸ್ಟ್ರೀಸ್​ ಪ್ರೈವೇಟ್ ಲಿಮಿಟೆಡ್​ನ ಶೇರ್​ಗಳನ್ನು ತನ್ನ ಹಾಗೂ ತಾಯಿ ವಿಜಯಲಕ್ಷ್ಮೀ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಒಂದು ಶೇರ್​ಗಳು ನನ್ನ ಹಾಗೂ ನನ್ನ ಪತ್ನಿ ಭಾರತಿ ಹೆಸರಿನಲ್ಲಿದ್ದವು ಎಂದು ಅರ್ಜಿಯಲ್ಲಿ ಜಗನ್ ಮೋಹನ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾ ಗಾಂಧಿ ಆಸ್ತಿ ಕೇವಲ 12 ಕೋಟಿ ರೂಪಾಯಿ! ಪತಿ ರಾಬರ್ಟ್ ವಾದ್ರಾ ಸಂಪತ್ತು ಎಷ್ಟು ಗೊತ್ತಾ?
ಈ ಒಂದು ಅರ್ಜಿ ಕಂಪನಿ ಆ್ಯಕ್ಟ್​ 59 ಸೆಕ್ಷನ್ ಅಡಿ ದಾಖಲಾಗಿದೆ. ಜಗನ್ ಮೋಹನ್ ರೆಡ್ಡಿಯವರ ವಕ್ತಾರರು ಹೇಳುವ ಪ್ರಕಾರ ಈ ಶೇರ್​ಗಳು ಆನುವಂಶಿಕವಾಗಿ ಬಂದ ಶೇರ್​ಗಳಲ್ಲ, ಜಗನ್ ಪ್ರೀತಿ ಹಾಗೂ ವಿಶ್ವಾಸದಿಂದ ತನ್ನ ತಾಯಿಗೆ ನೀಡುತ್ತಿದ್ದರು. ಆದ್ರೆ ಈ ಆಸ್ತಿ ಈಗ ಕೋರ್ಟ್​ ಅಂಗಳದಲ್ಲಿದೆ. ತಗಾದೆ ಬಗೆಹರಿಯುವವರೆಗೂ ಈ ಶೇರ್​​ಗಳನ್ನು ಹೀಗೆ ವರ್ಗಾವಣೆ ಮಾಡಲು ಬರುವುದಿಲ್ಲ. ಆದ್ರೆ ಶರ್ಮಿಳಾ ಕಾನೂನು ಬಾಹಿರವಾಗಿ ಈ ಶೇರ್​ಗಳನ್ನು ವರ್ಗಾವಣೆ ಮಾಡಿದ್ದಾರೆ. ಜಗನ್​ ಕೋರ್ಟ್ ಮೊರೆ ಹೋಗದೆ ಈಗ ಬೇರೆ ಯಾವುದೇ ಮಾರ್ಗವಿಲ್ಲ ಎಂದು ಹೇಳಲಾಗಿದೆ.
ಇನ್ನೂ ಶರ್ಮಿಳಾ ಪರವಾಗಿ ಮಾತನಾಡಿರುವ ಅವರ ವಕ್ತಾರರು. ಜಗನ್ ಮೋಹನ್ ರೆಡ್ಡಿ ನ್ಯಾಯಮಂಡಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅವೆಲ್ಲವೂ ಸುಳ್ಳು ಹಾಗೂ ಹಾದಿ ತಪ್ಪಿಸುವ ಉದ್ದೇಶದಿಂದ ಕೂಡಿರುವಂತವು. ಜಗನ್ ಈಗಾಗಲೇ ಉಡುಗೊರೆ ರೂಪದಲ್ಲಿ ಅವರ ತಾಯಿ ವಿಜಯಲಕ್ಷ್ಮೀಗೆ ನೀಡಿದ್ದಾರೆ. ಆದ್ರೆ ಈಗ ಅವರಿಗೆ ವಿಜಯಲಕ್ಷ್ಮೀ ಅವರು ಆ ಎಲ್ಲಾ ಶೇರ್​ಗಳನ್ನು ಶರ್ಮಿಳಾಗೆ ನೀಡಬಹುದು ಎಂದು ಆತಂಕದಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಅವುಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಮರಳಿ ತಮ್ಮ ವಶಕ್ಕೆ ಪಡೆಯುವ ಉದ್ದೇಶದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಸೆಪ್ಟಂಬರ್ 9ರಂದು ಎನ್​ಸಿಎಲ್​ಟಿ ಹೈದ್ರಾಬಾದ್ ಬ್ರ್ಯಾಂಚ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರು ಹೇಳುವ ಪ್ರಕಾರ ತಮ್ಮ 74,26,294 ಇಕ್ವಿಟಿ ಶೇರ್​ಗಳನ್ನ ಅವರ ತಾಯಿಯ ಹೆಸರಿಗೆ ವರ್ಗಾಯಿಸಲಾಗಿದೆ. ತಮ್ಮ ಪತ್ನಿ ಭಾರತಿ ಅವರ ಹೆಸರಲ್ಲಿರುವ 40,50,000 ಶೇರ್​ಗಳನ್ನೂ ತಾಯಿಯ ಹೆಸರಿಗೆ ವರ್ಗಾಯಿಸಲಾಗಿದೆ. 12 ಲಕ್ಷ ಕ್ಲಾಸಿಕ್ ರಿಯಾಳಿಟಿ ಪ್ರೈವೇಟ್​ ಲಿಮಿಟೆಡ್ ಶೇರ್​ಗಳನ್ನ ಹಳೆಯ ಸರಸ್ವತಿ ಪವರ್ ನಿರ್ದೇಶಕರಿಗೆ ವರ್ಗಾಹಿಸಲಾಗಿದೆ ಎಂದು ದೂರಿದ್ದಾರೆ. ಇಲ್ಲಿ ಕಂಪನಿ ಹೆಸರು ತಿದ್ದುಪಡಿ ಮಾಡುವ ಕಾರ್ಯವೂ ನಡೆದಿದೆ ಎಂದು ಆರೋಪಿಸಿದ್ದಾರೆ.
ಅರ್ಜಿಯಲ್ಲಿ ಜಗನ್ ಮೋಹನ್ ಮತ್ತೊಂದು ಮಾತನ್ನು ಹೇಳಿದ್ದಾರೆ. ನಾನು ನನ್ನ ತಾಯಿಗೆ ಆ ಎಲ್ಲಾ ಶೇರ್​​ಗಳನ್ನು ನಿಷ್ಕಲ್ಮಶ ಪ್ರೀತಿ ಹಾಗೂ ವಿಶ್ವಾಸದಿಂದಲೇ ನೀಡುವವನಿದ್ದೆ. ಆದ್ರೆ, ಕೇಂದ್ರ ತನಿಖಾ ಸಂಸ್ಥೆಗಳ ತನಿಖೆ ಸಂಪೂರ್ಣವಾಗಿ ಈ ಕೇಸ್ ಇತ್ಯರ್ಥವಾದ ಬಳಿಕ ಮಾತ್ರ ಅದು ಸಾಧ್ಯವಾಗಲಿದೆ ಅಲ್ಲಿಯವರೆಗೂ ಅದು ಅಸಾಧ್ಯ ಎಂದು ಜಗನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us