Advertisment

222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..?

author-image
Bheemappa
Updated On
222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..?
Advertisment
  • 4 ದಶಕಗಳ ಬಳಿಕ ಬಯಲಾಗುತ್ತಾ ಜಗನ್ನಾಥನ ರತ್ನಭಂಡಾರ?
  • ಆ ರಹಸ್ಯ ಕೋಣೆಯಲ್ಲಿವೆ ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳು!
  • ರತ್ನ ಭಂಡಾರದಲ್ಲಿ 12,838ಕ್ಕೂ ಹೆಚ್ಚು ರತ್ನ ಖಚಿತ ಆಭರಣ

ಒಡಿಶಾದ ಪುರಾಣ ಪ್ರಸಿದ್ದ ಜಗನ್ನಾಥ ದೇವಾಲಯದ ರತ್ನಭಂಡಾರದ ಕೊಠಡಿ ತೆರೆಯಲು ಕ್ಷಣಗಣನೆ ಶುರುವಾಗಿದೆ. ಭಂಡಾರ ಓಪನ್ ಮಾಡಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ. 46 ವರ್ಷಗಳ ನಂತರ, ಭಂಡಾರದ ಕೊಠಡಿ ತೆರೆಯಲಾಗ್ತಿದ್ದು, ಭಕ್ತಕೋಟಿ ಬೆರಗಿನಿಂದ ಕಾದಿದೆ. ಅಷ್ಟಕ್ಕೂ ಈ ರತ್ನಭಂಡಾರದಲ್ಲಿ ಏನೇನಿದೆ? ಅದಕ್ಕೆ ಸರ್ಪಗಳ ರಕ್ಷಣೆ ಇದ್ಯಾ? ಈ ಪ್ರಶ್ನೆಗಳಿಗೆ ಉತ್ತರ ಇಂದು ಸಿಗಲಿದೆ.

Advertisment

ಪುರಿ ಜಗನ್ನಾಥ.. ಬಂಗಾಳ ಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ.. ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಹೋದಧಿಯ ನೆಲ. ಈ ಜಗದೊಡೆಯ ಜಗನ್ನಾಥ ಸಿರಿ ಸಂಪತ್ತಿನಿಂದ ಇಡೀ ಜಗತ್ತನ್ನೇ ಬೆರಗು ಮಾಡ್ತಿದ್ದಾನೆ.. ಸದ್ಯ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಯಲಾಗುವ ಸಮಯ ಬಂದಿದೆ.. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇವಾಲಯ ಇವತ್ತು ಮಹಾ ಪವಾಡಕ್ಕೆ ಸಾಕ್ಷಿಯಾಗಲಿದೆ..

ಇದನ್ನೂ ಓದಿ: ಟ್ರಕ್ಕಿಂಗ್​ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು

publive-image

ಸಾಕಷ್ಟು ರಹಸ್ಯಗಳನ್ನ ಅಡಗಿಸಿಕೊಂಡಿರೋ ಪುರಿ ಜಗನ್ನಾಥ ದೇವಾಲಯ, ವಿಸ್ಮಯ ಅಚ್ಚರಿಗಳ ತಾಣ.. ಊಹೆಗೂ ನಿಲುಕದ ಧನಕನಕ, ಸಂಪತ್ತುಗಳನ್ನ ಹೊಂದಿರುವ ದೇವಸ್ಥಾನ ಮತ್ತೊಮ್ಮೆ ಚಕಿತಗೊಳಿಸಲು ಮುಂದಾಗಿದೆ.. ಇವತ್ತು ದೇಗುಲದ ರತ್ನ ಭಂಡಾರದ ಬಾಗಿಲು ತೆರೆಯಲಾಗ್ತಿದೆ.. ಬರೋಬ್ಬರಿ 46 ವರ್ಷಗಳ ಬಳಿಕ ನಕಲಿ ಕೀ ಬಳಸಿ ರತ್ನಭಂಡಾರದ ಕೋಣೆ ಬಾಗಿಲು ತೆರೆಯಲು ಸಿದ್ಧತೆ ನಡೆದಿದೆ..

Advertisment

ಜಗನ್ನಾಥನ ರತ್ನಭಂಡಾರ!

  • 1978ರಲ್ಲಿ ಕೊನೆ ಬಾರಿಗೆ ತೆರೆದಿತ್ತು ರತ್ನಭಂಡಾರದ ಬಾಗಿಲು
  • ರತ್ನ ಭಂಡಾರದಲ್ಲಿ 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ
  • ಒಟ್ಟು 128.38 ಕೆ.ಜಿ ತೂಕ ಹೊಂದಿರುವ ರತ್ನಾಭರಣಗಳು
  • 454 ಚಿನ್ನದ ವಸ್ತುಗಳಿದ್ದು, ಒಟ್ಟು 221.53 ಕೆ.ಜಿ ಭಾರ ಇದೆ
  • 293 ಕೆ.ಜಿಯಷ್ಟು 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳಿವೆ
  • ವಿಶಿಷ್ಟ ಅಮೂಲ್ಯ ಹರಳುಗಳನ್ನ ಹೊಂದಿರುವ ಆಭರಣಗಳು
  • ಕೊಠಡಿಯಲ್ಲಿ ರಾಜರ ಕಿರೀಟಗಳು ಮತ್ತು ಸಿಂಹಾಸನಗಳು
  • 1978ರಲ್ಲಿ ಆಭರಣಗಳ ಆವಿಷ್ಕಾರಕ್ಕೇನೆ 72 ದಿನಗಳ ಕಾಲ

ಇದನ್ನೂ ಓದಿ: ಕಾವೇರಿ ನೀರಿಗಾಗಿ ಸಿದ್ದು ಒಗ್ಗಟ್ಟಿನ ತಂತ್ರ.. ಸರ್ವ ಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ಸಾಥ್.. ಯಾರೆಲ್ಲ ಬರ್ತಿದ್ದಾರೆ..?

2018ರಲ್ಲಿ ಮತ್ತೆ ಬಾಗಿಲು ತೆಗೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಲಾಗಿತ್ತು. ಆದ್ರೆ 2018ರಲ್ಲಿ ಭಂಡಾರದ ಕೀಲಿ ಕೈ ಕಾಣೆಯಾಗಿತ್ತು.. ಇದೀಗ ಮುಚ್ಚಿದ ಲಕೋಟೆಯಲ್ಲಿ ಡೂಪ್ಲಿಕೇಟ್ ಕೀಲಿ ಕೈ ನೀಡಲಾಗಿದೆ. ಇವತ್ತು 16 ಸದಸ್ಯರ ಉನ್ನತ ಮಟ್ಟದ ಸಮಿತಿ, ಸಾಂಪ್ರದಾಯಿಕ ಉಡುಗೆ ತೊಟ್ಟು ಜಗನ್ನಾಥನಿಗೆ ಪೂಜೆ ಸಲ್ಲಿಸಿ ರತ್ನ ಭಂಡಾರ ತೆರೆಯಲಿದ್ದಾರೆ.

Advertisment

ಇದನ್ನೂ ಓದಿ: ಅನಂತ್-ರಾಧಿಕಾ ದಿ ಗ್ರ್ಯಾಂಡ್ ಮ್ಯಾರೇಜ್; PM ಮೋದಿ, ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿ

publive-image

ರತ್ನಭಂಡಾರದ ರಹಸ್ಯ ಕೊಠಡಿಗೆ ಸರ್ಪ ರಕ್ಷಣೆ!

ಅಂದ್ಹಾಗೆ ದೇವಾಲಯದ ನಿಧಿಗೆ ಸರ್ಪಗಳ ಕಾವಲಿರುತ್ತೆ ಅನ್ನೋ ನಂಬಿಕೆ ಇದೆ. ದೇವತೆಗಳ ಬೆಲೆಬಾಳುವ ವಸ್ತುಗಳನ್ನು ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಗಳಿವೆ.. ಆ ಕಾರಣಕ್ಕೆ ಖಜಾನೆ ತೆರೆಯುವ ಸಂದರ್ಭದಲ್ಲಿ ಹಾವು ಹಿಡಿಯುವವರು, ವೈದ್ಯರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯ ತಂಡಗಳು ಸ್ಟ್ಯಾಂಡ್‌ಬೈನಲ್ಲಿ ಇರಲಿವೆ..

ಇದನ್ನೂ ಓದಿ:ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ

Advertisment

ಈ ಭಂಡಾರದಲ್ಲಿ ಅಮೂಲ್ಯ ಲೋಹಗಳು, ಪುರಾತನ ಆಭರಣಗಳಿವೆ.. ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳಿವೆ.. ಕಳೆದ ಎಲೆಕ್ಷನ್​​ನಲ್ಲಿ ಮೋದಿ ಕೊಟ್ಟ ಮಾತಿನಂತೆ ರತ್ನಭಂಡಾರದ ಬಾಗಿಲು ತೆರೆಯಲಿದೆ.. ಈ ಕ್ಷಣಕ್ಕೆ ಜಗನ್ನಾಥನ ಭಕ್ತಕೋಟಿ ಕಾತುರ, ಅಚ್ಚರಿಯಿಂದ ಕಾದು ಕೂತಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment