BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್‌!

author-image
admin
Updated On
BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್‌!
Advertisment
  • ಬಿಗ್ ಬಾಸ್ ಸೀಸನ್ 11ರಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ
  • ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಗದೀಶ್ ಎಲಿಮಿನೇಟ್ ಪಕ್ಕಾ!
  • ಬಿಗ್ ಬಾಸ್ ಪ್ರೇಕ್ಷಕರಿಗೆ ಹೊಸ ಕರ್ನಾಟಕ ಕ್ರಶ್‌ ಜಗದೀಶ್‌ ಸಂದೇಶ

ಬಿಗ್ ಬಾಸ್ ಸೀಸನ್ 11ರಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಅವರು ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳ ಜೊತೆ ಜಗದೀಶ್ ಅವರ ಗಲಾಟೆ, ಕೂಗಾಟ, ಜಗಳ ಜೋರಾಗಿತ್ತು. ಬಿಗ್ ಬಾಸ್ ಮನೆಯ ಗಲಾಟೆಯಲ್ಲಿ ದೈಹಿಕವಾಗಿ ಹಲ್ಲೆ ಮಾಡುವ ಹಂತಕ್ಕೆ ಜಗಳಗಳು ನಡೆದಿತ್ತು. ಇದೀಗ ಬಿಗ್ ಬಾಸ್ ಮನೆಗೆ ಜಗದೀಶ್ ಅವರು ಗುಡ್ ಬೈ ಹೇಳಿರೋದು ಪಕ್ಕಾ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಗದೀಶ್, ಉಗ್ರಂ ಮಂಜು, ರಂಜಿತ್ ಅವರ ಜೊತೆ ಅತಿರೇಕದ ಜಗಳ ನಡೆದಿತ್ತು. ಇದಾದ ಮೇಲೆ ಜಗದೀಶ್ ಹಾಗೂ ರಂಜಿತ್ ಅವರನ್ನ ಎಲಿಮಿನೇಟ್‌ ಮಾಡಿದ್ದಾರೆ ಅನ್ನೋ ಸುದ್ದಿ ವರದಿಯಾಗಿತ್ತು. ಇದೀಗ ಬಿಗ್ ಬಾಸ್ ಮನೆಯಿಂದ ಜಗದೀಶ್ ಅವರು ಔಟ್ ಆಗಿದ್ದು, ಈ ಬಗ್ಗೆ ಖುದ್ದು ಜಗದೀಶ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

publive-image

ಇದನ್ನೂ ಓದಿ: Big breaking: ಬಿಗ್​ಬಾಸ್ ಶೋಗೆ ಸಂಕಷ್ಟ; ತುರ್ತು ನೋಟಿಸ್​ ಕೊಟ್ಟ ಕೋರ್ಟ್​

ಜಗದೀಶ್ ಹೇಳಿದ್ದೇನು?
ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಗದೀಶ್ ಅವರು ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಮೆಸೇಜ್, ನಿಮ್ಮ ಆಶೀರ್ವಾದ ನನ್ನ ಈ big boss ಪಯಣ ಸಕ್ಸಸ್‌, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ.

ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು. ನೂರಾರು ಕ್ಯಾಮೆರಾ, ಸಾವಿರಾರು ಬಿಗ್ ಬಾಸ್ ವರ್ಕ್ ಫೋರ್ಸ್, ಆ Director, ಆ ಮಾಂತ್ರಿಕ  ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ ನನ್ನ 20 ಕೋಟಿಗೂ ಹೆಚ್ಚಿನ big boss ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್‌ ಜಗದೀಶ್‌ನಿಂದ ನಿಮಗೆ ಕೋಟಿ ಕೋಟಿ ನಮನ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment