/newsfirstlive-kannada/media/post_attachments/wp-content/uploads/2024/10/HONEY-AND-JAGGERY.jpg)
ಇಂದಿನ ಕಾಲದಲ್ಲಿ ತೂಕ ಇಳಿಸುವುದೇ ಒಂದು ದೊಡ್ಡ ಸವಾಲು. ಅದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆಹಾರ ಕ್ರಮದಲ್ಲಿ ಅನೇಕ ಬದಲಾವಣೆ ಮಾಡಿಕೊಳ್ಳಲಾಗುತ್ತದೆ. ಆದ್ರೆ ಇದರ ನಡುವೆ ಸಕ್ಕರೆಗೆ ಪರ್ಯಾಯವಾಗಿ ಏನು ಬಳಸಬೇಕು ಅನ್ನೋದರ ಗೊಂದಲದಲ್ಲಿಯೂ ಜನರು ಇದ್ದಾರೆ. ಸಕ್ಕರೆಗೆ ಪರ್ಯಾಯವಾಗಿ ಬೆಲ್ಲ ಒಳ್ಳೆಯದಾ ಅಥವಾ ಜೇನುತುಪ್ಪ ಒಳ್ಳೆಯದಾ ಅನ್ನೋ ಗೊಂದಲ ಹಲವರಲ್ಲಿದೆ. ಈಗ ಹೇಳಿ ಕೇಳಿ ಸೋಷಿಯಲ್ ಮೀಡಿಯಾ ಜಮಾನಾ. ಇಲ್ಲಿ ನೂರಾರು ಮಂದಿ ನೂರಾರು ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ. ಆದ್ರೆ ಅವೆಲ್ಲವೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಬಾರದು. ಕಾರಣ ಪ್ರತಿಯೊಂದರ ಹಿಂದೆಯೂ ವೈಜ್ಞಾನಿಕ ಕಾರಣಗಳು, ವೈದ್ಯಕೀಯ ಕಾರಣಗಳು ಇರುತ್ತವೆ. ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ ನಂಬುವುದು ಅಷ್ಟೊಂದು ಸರಿಯಲ್ಲ.
ಇದನ್ನೂ ಓದಿ: 50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್​ಸ್ಟೈಲ್ ಹೇಗಿರಬೇಕು?
ಈಗ ಜೇನುತುಪ್ಪ ಹಾಗೂ ಬೆಲ್ಲದ ನಡುವೆ ಇರುವ ಗೊಂದಲವನ್ನೇ ತೆಗೆದುಕೊಳ್ಳೊಣ. ಎರಡರಲ್ಲೂ ಅನುಕೂಲ, ಅನಾನುಕೂಲ ಎರಡೂ ಇವೆ. ಅವು ತೂಕ ಇಳಿಸುವ ನಮ್ಮ ಪ್ರಯತ್ನದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತವೆ ಅನ್ನೋದನ್ನ ಮೊದಲು ನೋಡಬೇಕು.
/newsfirstlive-kannada/media/post_attachments/wp-content/uploads/2024/10/HONEY-AND-JAGGERY-2.jpg)
ಬೆಲ್ಲ ಸಕ್ಕರೆಯ ಕಚ್ಚಾ ವಸ್ತುವಿನ ಒಂದು ರೂಪ. ಕಬ್ಬಿನ ರಸದಿಂದ ಮಾಡಲಾದ ಒಂದು ಸಿಹಿ ಪದಾರ್ಥ. ಹಲವು ಆಹಾರಗಳನ್ನು ತಯಾರಿಸಲು ಬೆಲ್ಲವನ್ನೇ ಭಾರತೀಯರು ಉಪಯೋಗಿಸುತ್ತಾರೆ. ಹೋಳಿಗೆ, ಕಡುಬು ಜೊತೆ ಜೊತೆಗೆ ಇತ್ತೀಚೆಗೆ ಜನರು ಬೆಲ್ಲವನ್ನು ಕೇಕ್ ಮತ್ತು ಬಿಸ್ಕೇಟ್ ತಯಾರಿಸಲು ಸಹ ಉಪಯೋಗಿಸುತ್ತಿದ್ದಾರೆ. ಬೆಲ್ಲದಲ್ಲಿ ಕಬ್ಬಿಣ ಅಂಶ, ಪೋಟ್ಯಾಶಿಯಂ ಮತ್ತು ಕ್ಯಾಲ್ಸಿಯಂನಂತಹ ಅಂಶಗಳು ನಮಗೆ ಹೇರಳವಾಗಿ ಸಿಗುತ್ತವೆ. ಸಕ್ಕರೆಗೆ ಹೋಲಿಸಿದರೆ ಇದು ಸಾವಿರಪಟ್ಟು ಒಳ್ಳೆಯದು ಎಂದೇ ಹೇಳಲಾಗುತ್ತದೆ. ಸಕ್ಕರೆಗೆ ಪರ್ಯಾಯವಾಗಿ ಇತ್ತೀಚೆಗೆ ಬೆಲ್ಲವನ್ನು ಹೇರಳವಾಗಿ ಬಳಸಲಾಗುತ್ತಿದೆ. ಬೆಲ್ಲದ ಚಹಾ ಈಗ ಎಲ್ಲಾ ನಗರ ಪಟ್ಟಣಗಳಲ್ಲಿಯೂ ತನ್ನ ಜಾಗವನ್ನು ಮಾಡಿಕೊಳ್ಳುತ್ತಿದೆ.
ಬೆಲ್ಲದಲ್ಲಿರುವ ಕಬ್ಬಿಣ ಅಂಶ ಹಾಗೂ ಮೆಗ್ನಿಶಿಯಂ ಅಂಶ ತೂಕ ಇಳಿಸಲು ಬಹಳ ಸಹಕಾರಿ ಅಂತ ಹೇಳಲಾಗುತ್ತದೆ. ಆ್ಯಕ್ಟಿವ್ ಲೈಫ್​ಸ್ಟೈಲ್​ಗೆ ಹಾಗೂ ಹೆಚ್ಚು ಶಕ್ತಿ ದೇಹಕ್ಕೆ ಸೇರಲು ಬೆಲ್ಲ ತುಂಬಾ ಸಹಾಯಕಾರಿ ಎಂದೇ ಹೇಳಲಾಗುತ್ತದೆ. ಹೀಗಾಗಿ ಬೆಲ್ಲ ತೂಕ ಇಳಿಸಲು ಬಹಳ ಸಹಾಯಕಾರಿ ಎಂದು ತಜ್ಞರು ಹೇಳುತ್ತಾರೆ.
/newsfirstlive-kannada/media/post_attachments/wp-content/uploads/2024/10/HONEY-AND-JAGGERY-1.jpg)
100 ಗ್ರಾಂ ಬೆಲ್ಲದಲ್ಲಿ 383 ಕ್ಯಾಲರೀಸ್​ಗಳು ಇರುತ್ತವೆ. 98.5 ಗ್ರಾಂನಷ್ಟು ಕೈಬ್ರೋಹೈಡ್ರೇಟ್ ಇರುತ್ತದೆ ಜೊತೆಗೆ 0.4 ಗ್ರಾಂನಷ್ಟು ಪ್ರೊಟೀನ್ ಕೂಡ ಇರುತ್ತದೆ. ಬೆಲ್ಲದಲ್ಲಿ ಇರುವ ಮತ್ತೊಂದು ಅಂಶವನ್ನು ಹೆಚ್ಚಾಗಿ ಹೊಂದಿದೆ ಗ್ಲೈಸೆಮಿಕ್ ಇಂಡೆಕ್ಸ್ ರೇಂಜ್​ 84 ರಿಂದ 94 ರಷ್ಟು ಇರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಈ ಒಂದು ಗ್ಲೈಸೆಮಿಕ್ ಇಂಡೆಕ್ಸ್ ರೆಂಜ್​ ರಕ್ತದಲ್ಲಿ ಸಕ್ಕರೆ ಅಂಶವದ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ ಸಹಾಯಕ ಎಂದು ಹೇಳಲಾಗುತ್ತದೆ. ಇದು ತೂಕ ಇಳಿಸಲು ಬಹಳಷ್ಟು ಸಹಾಯಕ.
/newsfirstlive-kannada/media/post_attachments/wp-content/uploads/2024/10/HONEY-AND-JAGGERY-3.jpg)
ಇನ್ನು ಬೆಲ್ಲವನ್ನು ಜೇನುತುಪ್ಪಕ್ಕೆ ಹೋಲಿಸಿ ನೋಡಿದಾಗ ಬೆಲ್ಲಕ್ಕಿಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ರೇಂಜ್ ಜೇನುತುಪ್ಪದಲ್ಲಿ ಇದೆ ಎಂಬುದು ಕಂಡು ಬರುತ್ತದೆ. ಜೇನುತಪ್ಪ ನೈಸರ್ಗಿಕವಾಗಿ ಸಿಗುವ ಒಂದು ಸಹಿ ಪದಾರ್ಥ. ಬೆಲ್ಲಕ್ಕೆ ಹೋಲಿಸಿ ನೋಡಿದಾಗ ಇದರಲ್ಲಿರುವ ಜಿಐ ಅಂದ್ರೆ ಗ್ಲೈಸೆಮಿಕ್ ಇಂಡೆಕ್ಸ್ ರೇಂಜ್ ಸಂಖ್ಯೆ 45 ರಿಂದ 64 ರಷ್ಟು ಎಂದು ಹೇಳಲಾಗುತ್ತದೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಧಾನವಾಗಿ ಬಿಡುಗಡೆ ಮಾಡಲು ಸಹಾಯಕವಾಗುತ್ತೆ ಎಂದು ಹೇಳಲಾಗುತ್ತೆ.
100 ಗ್ರಾಂ ಜೇನುತುಪ್ಪದಲ್ಲಿ 304 ಕ್ಯಾಲರೀಸ್, 82 ಗ್ರಾಂನಷ್ಟು ಕೈಬ್ರೋಹೈಡ್ರೇಟ್ಸ್ ಹಾಗೂ 0.3 ಪ್ರೋಟಿನ್ ಇರುತ್ತದೆ. ಹೀಗೆ ಜೇನುತುಪ್ಪ ಹಾಗೂ ಬೆಲ್ಲವನ್ನು ಸಕ್ಕರೆಗೆ ಪರ್ಯಾಯವಾಗಿ ನೋಡಿದಾಗ ಜೇನುತುಪ್ಪದ ಉಪಯೋಗ ಮಾಡುವುದು ಬೆಲ್ಲಕ್ಕಿಂತ ಬೆಟರ್ ಎನ್ನಲಾಗುತ್ತದೆ. ಎರಡೂ ಕೂಡ ಒಳ್ಳೆಯ ಪೋಷಕಾಂಶಗಳನ್ನು ಹೊಂದಿದ್ದರೂ ಕೂಡ ಬೆಲ್ಲಕ್ಕಿಂತ ಜೇನುತುಪ್ಪ ಹೆಚ್ಚು ತೂಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us