IPL ಅಲ್ಲ ಇದು JPL ಟೂರ್ನಿ.. ಕೈದಿಗಳಿಗೂ ಕ್ರಿಕೆಟ್‌ ಭಾಗ್ಯ; ಅಪರೂಪದ VIDEO ವೈರಲ್‌!

author-image
admin
Updated On
IPL ಅಲ್ಲ ಇದು JPL ಟೂರ್ನಿ.. ಕೈದಿಗಳಿಗೂ ಕ್ರಿಕೆಟ್‌ ಭಾಗ್ಯ; ಅಪರೂಪದ VIDEO ವೈರಲ್‌!
Advertisment
  • IPL ಮಾದರಿ JPL ಕ್ರಿಕೆಟ್ ಆಡಿ ಖುಷಿ ಪಟ್ಟ ಜೈಲು ಹಕ್ಕಿಗಳು
  • ಬೇರೆ, ಬೇರೆ ಬ್ಯಾರಕ್‌ನಲ್ಲಿರುವ ಕೈದಿಗಳಲ್ಲಿ 8 ಕ್ರಿಕೆಟ್ ಟೀಮ್
  • ಆ್ಯರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆದ್ದು ಖುಷಿ ಪಟ್ಟ ಕೈದಿಗಳು

ಇದು IPL ಜಮಾನ. ಇಂಡಿಯನ್ ಪ್ರೀಮಿಯರ್ ಲೀಗ್ ಎಲ್ಲರಿಗೂ ಮನರಂಜನೆ ನೀಡುವ ಅತಿ ದೊಡ್ಡ ಟೈಮ್ ಆಗಿದೆ. ಭಾರತ, ಪಾಕ್ ಸಂಘರ್ಷದ ಹಿನ್ನೆಲೆ IPL ತಾತ್ಕಾಲಿಕವಾಗಿ ಅಮಾನತು ಆಗಿತ್ತು. ಆದರೆ ಈಗ ಐಪಿಎಲ್ ಮತ್ತೆ ಆರಂಭವಾಗುತ್ತಿದೆ. ಇದು ಐಪಿಎಲ್ ಪ್ರಿಯರಿಗೆ ಖುಷಿಯಾದ ಸುದ್ದಿ. ಜೈಲಿನಲ್ಲಿರುವ ಕೈದಿಗಳು IPL ಮಾದರಿ JPL ಕ್ರಿಕೆಟ್ ಆಡಿ ಖುಷಿ ಪಟ್ಟ ಅಪರೂಪದ ಘಟನೆ ಮಥುರಾದಲ್ಲಿ ನಡೆದಿದೆ.

JPL ಅಂದ್ರೆ ಜೈಲ್ ಪ್ರೀಮಿಯರ್ ಲೀಗ್. ಮಥುರಾ ಜೈಲ್ ಸೂಪರಿಂಟೆಂಡೆಂಟ್ ಜೈಲು ಹಕ್ಕಿಗಳಿಗೆ ಇಂತಹದೊಂದು ಅವಕಾಶ ಕಲ್ಪಿಸಿದ್ದಾರೆ. ಮಥುರಾ ಜಿಲ್ಲೆಯ ಜೈಲಿನಲ್ಲಿರುವ ಕೈದಿಗಳು ಕ್ರಿಕೆಟ್ ಆಡಿ ಸಖತ್ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: KKR ವಿರುದ್ಧ ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಕಹಿ ನೆನಪು.. ಗೆದ್ದಿದ್ದು ಯಾವಾಗ ಗೊತ್ತಾ..? 

ಜೈಲ್ ಪ್ರೀಮಿಯರ್ ಲೀಗ್ ಅನ್ನು ಐಪಿಎಲ್ ಮಾದರಿಯಲ್ಲೇ ಆಡಿಸಲಾಗಿದೆ. ಬೇರೆ, ಬೇರೆ ಬ್ಯಾರಕ್‌ನಲ್ಲಿರುವ ಕೈದಿಗಳಲ್ಲಿ 8 ಕ್ರಿಕೆಟ್ ಟೀಮ್ ಕಟ್ಟಲಾಗಿದೆ. 8 ತಂಡಗಳಿಗೆ ಒಟ್ಟು 12 ಲೀಗ್ ಮ್ಯಾಚ್ ಹಾಗೂ 2 ಸೆಮಿ ಫೈನಲ್ ಪಂದ್ಯ ಆಡಿಸಲಾಗಿದೆ.

publive-image

2025 JPL ಏಪ್ರಿಲ್‌ನಲ್ಲಿ ಆರಂಭವಾಗಿದ್ದು, ಫೈನಲ್ ಪಂದ್ಯದಲ್ಲಿ ನೈಟ್ ರೈಟರ್ಸ್ ವಿರುದ್ಧ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗಿದೆ. ಜೈಲಾಧಿಕಾರಿಗಳು ಗೆದ್ದ ತಂಡಕ್ಕೆ ಪ್ರಶಸ್ತಿ, ಪ್ಲೇಯರ್ ಆಫ್ ದಿ ಮ್ಯಾಚ್, ಪ್ಲೇಯರ್ ಆಫ್ ದಿ ಸೀರಿಸ್ ನೀಡಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಭುರಾ ಎಂಬ ಕೈದಿಗೆ ಆ್ಯರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ತೆಗೆದ ಪಂಕಜ್ ಎಂಬ ಕೈದಿಗೆ ಪರ್ಪಲ್ ಕ್ಯಾಪ್ ಕೂಡ ನೀಡಲಾಗಿದೆ.

publive-image

ಮಥುರಾ ಜೈಲ್ ಸೂಪರಿಂಟೆಂಡೆಂಟ್ ಅಂಶುಮಾನ್ ಗಾರ್ಗ್ ಅವರ ಪ್ರಕಾರ, ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಖಿನ್ನತೆ ಕಾಡುತ್ತಾ ಇರುತ್ತದೆ. ಜಾಮೀನು ಸಿಗದ ಚಿಂತೆ, ಮನೆಯವರು ಭೇಟಿ ಮಾಡಲು ಬಾರದೇ ಇರೋದು ಕಾಡುತ್ತಾ ಇರುತ್ತೆ.


">May 15, 2025

ಆದರೆ ಜೈಲ್ ಪ್ರೀಮಿಯರ್ ಲೀಗ್ ಆಡಿಸುವುದರಿಂದ ಕೈದಿಗಳ ಮಾನಸಿಕ ಸ್ಥಿತಿ ಸುಧಾರಿಸುತ್ತದೆ. ಕೈದಿಗಳ ಆರೋಗ್ಯದ ಸಮಸ್ಯೆಗಳು ಸುಧಾರಿಸುತ್ತದೆ ಎಂದಿದ್ದಾರೆ. ಅಧಿಕಾರಿಗಳ ಈ ಅಭಿಪ್ರಾಯಕ್ಕೆ ಪೂರಕವಾಗಿ JPL ಆಡಿದ ಕೈದಿಗಳು ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಮಥುರಾ ಜೈಲಿನ ಈ ಜೈಲ್ ಪ್ರೀಮಿಯರ್ ಲೀಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment