/newsfirstlive-kannada/media/post_attachments/wp-content/uploads/2025/05/Bangalore-Jain-Community-Protest-1.jpg)
ಬೆಂಗಳೂರು: ಅಲ್ಪಸಂಖ್ಯಾತರಿಗೆ ಮೀಸಲಾದ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪಡೆಯುವಲ್ಲಿ ಜೈನ ಸಮುದಾಯಕ್ಕೆ ತಾರತಮ್ಯವಾಗ್ತಿದೆ. ಈ ಬಗ್ಗೆ ಸರ್ಕಾರ ಬೇಡಿಕೆಗಳನ್ನು ಪರಿಗಣಿಸಿಲ್ಲ. ಹೀಗಾಗಿ ಮೇ 29, 2025ರಿಂದ ಫ್ರೀಡಂ ಪಾರ್ಕ್, ಬೆಂಗಳೂರಿನಲ್ಲಿ ಜೈನ ಮುಖಂಡರುಗಳು ಅನಿರ್ದಿಷ್ಟವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಪ್ರಮುಖ ಏಳು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಜೈನ ಸಮುದಾಯಕ್ಕೆ ಸಮಾನತೆಯನ್ನು ಖಾತ್ರಿಪಡಿಸುವಂತೆ ಕೋರಿದೆ.
ಜೈನ ಸಮುದಾಯವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರಾಗಿ ಗುರುತಿಸಲ್ಪಟ್ಟಿದೆ. ಆದರೆ ಪ್ರಾತಿನಿಧ್ಯ, ಸಂಪನ್ಮೂಲಗಳ ಹಂಚಿಕೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ನಾವು ವ್ಯವಸ್ಥಿತವಾಗಿ ಹಿಂದುಳಿದಿದ್ದೇವೆ.
/newsfirstlive-kannada/media/post_attachments/wp-content/uploads/2025/05/Bangalore-Jain-Community-Protest.jpg)
ಪ್ರಮುಖ 7 ಬೇಡಿಕೆಗಳು ಯಾವುವು?
1. ಜೈನ ಅಭಿವೃದ್ಧಿ ನಿಗಮದ ಸ್ಥಾಪನೆ: ನಮ್ಮ ಸಮುದಾಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಜೈನ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಪ್ರತಿ ವರ್ಷ ₹200 ಕೋಟಿ ಮೀಸಲಿಡಬೇಕು.
2. ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ ಮೀಸಲಾತಿ: 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ + 100 ಹೊಸ) ಪ್ರತಿ ಜಿಲ್ಲೆಯ ಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹಾಗೂ ಶೈಕ್ಷಣಿಕ ಕೇಂದ್ರಗಳಿರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳನ್ನು ಜೈನರಿಗಾಗಿ ಮೀಸಲಿಡಬೇಕು. ಶಾಕಾಹಾರಿ ವಿದ್ಯಾರ್ಥಿನಿಲಯಗಳಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇರಬೇಕು.
3. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಪ್ರಾತಿನಿಧ್ಯ: ಅಧ್ಯಕ್ಷ ಸ್ಥಾನವನ್ನು ಜೈನ ಸಮುದಾಯಕ್ಕೆ ನೀಡಬೇಕು ಮತ್ತು ಇಬ್ಬರು ಜೈನ ನಿರ್ದೇಶಕರನ್ನು ನೇಮಿಸಬೇಕು. ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವಂತೆ ನಿಯಮ ರೂಪಿಸಬೇಕು.
4. ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಪ್ರಾತಿನಿಧ್ಯ: ಅಧ್ಯಕ್ಷ ಸ್ಥಾನವನ್ನು ಜೈನ ಸಮುದಾಯಕ್ಕೆ ನೀಡಬೇಕು ಮತ್ತು ಜೈನ ಸದಸ್ಯರನ್ನು ಆಯೋಗದಲ್ಲಿ ಸೇರಿಸಬೇಕು. ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸ್ಥಾನ ಸಿಗುವಂತೆ ನಿಯಮ ಮಾಡಬೇಕು.
5. ಅಲ್ಪಸಂಖ್ಯಾತರ ಯೋಜನೆಗಳಲ್ಲಿ ಮೀಸಲಾತಿ ಹೆಚ್ಚಿಸುವುದು: ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಲ್ಲಿ ಜೈನ ಸಮುದಾಯಕ್ಕೆ 5% ರಿಂದ 20% ಗೆ ಮೀಸಲಾತಿ ಹೆಚ್ಚಿಸಬೇಕು.
6. ಪ್ರಾಚೀನ ಜೈನ ಬಸದಿಗಳ ಸಂರಕ್ಷಣೆ: ಪ್ರಾಚೀನ ಜೈನ ಬಸದಿಗಳು ಮತ್ತು ಅವುಗಳ ಆಸ್ತಿಗಳ ಸಂರಕ್ಷಣೆಗಾಗಿ ಕಠಿಣ ಕಾನೂನು ತರಬೇಕು. ಅತಿಕ್ರಮಣವನ್ನು ಗುರುತಿಸಲು ಸರ್ವೇ ನಡೆಸಿ, ಅತಿಕ್ರಮಣ ತೆಗೆಯಲು ವಿಶೇಷ ಕಾನೂನು ವ್ಯವಸ್ಥೆ ಮಾಡಬೇಕು.
7. ಜೈನ ಬಸದಿಗಳಿಗೆ ಸುರಕ್ಷತಾ ವ್ಯವಸ್ಥೆ: ಎಲ್ಲಾ ಪ್ರಾಚೀನ ಜೈನ ಬಸದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಸುರಕ್ಷಾ ಸಿಬ್ಬಂದಿ, ಮತ್ತು ಸೋಲಾರ್ ಲೈಟ್ ವ್ಯವಸ್ಥೆಯನ್ನು ಒದಗಿಸಬೇಕು.
ಪ್ರಸ್ತುತ ಸಂಪನ್ಮೂಲಗಳ ಹಂಚಿಕೆ ಮತ್ತು ಪ್ರಾತಿನಿಧ್ಯವು ಕೆಲವು ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ಒಲವು ತೋರುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಸಂಸ್ಥೆಗಳಲ್ಲಿ ಕೇವಲ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರನ್ನು ಮಾತ್ರ ಪ್ರಮುಖ ಸ್ಥಾನಗಳಿಗೆ ನೇಮಿಸಲಾಗಿದೆ, ಆದರೆ ಜೈನ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಇದನ್ನೂ ಓದಿ: ಹೇಮಾವತಿ ನೀರಿಗಾಗಿ ತುಮಕೂರು ರೈತರ ಹೋರಾಟ ಯಾಕೆ? ಏನಿದರ ಇತಿಹಾಸ? ಅಸಲಿಗೆ ಆಗಿದ್ದೇನು?
ಉದಾಹರಣೆಗೆ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ವರ್ಷಕ್ಕೆ ₹250 ಕೋಟಿ ಮೀಸಲಿಡಲಾಗಿದೆ, ಆದರೆ ಜೈನರಿಗೆ ಅಂತಹ ಯಾವುದೇ ಬೆಂಬಲವಿಲ್ಲ. ಈ ಅಸಮಾನತೆಯಿಂದಾಗಿ ನಾವು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ, ಆದರೆ ನಿಮ್ಮ ಮಧ್ಯಸ್ಥಿಕೆಯಿಂದ ಈ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಬಹುದು ಎಂಬ ವಿಶ್ವಾಸ ನಮಗಿದೆ. ಈ ಬೇಡಿಕೆಗಳನ್ನು ಈಡೇರಿಸಿ, ಎಲ್ಲಾ ಅಲ್ಪಸಂಖ್ಯಾತರಿಗೆ ಸಮಾನತೆಯನ್ನು ಕೋರಲಾಗಿದೆ ಎಂದು ಹೋರಾಟಗಾರರು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us