ಡಿಕೆಶಿ CM ಆಗುವ ಆಸೆಗೆ ನೀರೆರೆದ ಜೈನ ಆಚಾರ್ಯರು; 18 ಗುರುಗಳಿಂದ ಕೈ ಎತ್ತಿ ಡಿಸಿಎಂಗೆ ಆಶೀರ್ವಾದ..!

author-image
Ganesh
Updated On
ಡಿಕೆಶಿ CM ಆಗುವ ಆಸೆಗೆ ನೀರೆರೆದ ಜೈನ ಆಚಾರ್ಯರು; 18 ಗುರುಗಳಿಂದ ಕೈ ಎತ್ತಿ ಡಿಸಿಎಂಗೆ ಆಶೀರ್ವಾದ..!
Advertisment
  • ಕನಕಪುರ ಕಲಿಗೆ ಗುಣಧರ ನಂದಿ ಆಶೀರ್ವಾದ
  • ಡಿಕೆಶಿ ಸಿಎಂ ಆಗ್ಬೇಕು ಎಂದ ಜೈನ ಆಚಾರ್ಯ
  • ನಾವು ಕಂಟ್ರೋಲ್ ಮಾಡೋಕಾಗಲ್ಲ ಎಂದ ಡಿಕೆಶಿ

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಎಂಬ ಮಾತು ಕಾಂಗ್ರೆಸ್‌ನ ಒಂದು ಗುಂಪಿನಲ್ಲಿದೆ. ಮತ್ತೊಂದು ಗುಂಪು ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಈ ಹೊತ್ತಲ್ಲಿ ಹುಬ್ಬಳ್ಳಿಗೆ ಬಂದ ಡಿಸಿಎಂ ಡಿಕೆ ಶಿವಕುಮಾರ್‌ಗೆ ಜೈನ ಮಂದಿರದ ಎಲ್ಲಾ ಆಚಾರ್ಯರು ಸಿಎಂ ಕನಸು ನನಲಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ.

ಡಿಕೆಶಿ ಸಿಎಂ ಆಗ್ಬೇಕು ಎಂದ ಜೈನ ಆಚಾರ್ಯ

ಹುಬ್ಬಳ್ಳಿಯ ವರೂರು ನವಗ್ರಹ ಕ್ಷೇತ್ರದಲ್ಲಿ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೀತಿದೆ. ಈ ಕಾರ್ಯಕ್ರಮದಲ್ಲಿ ನಿನ್ನೆ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ರು. ಇದೆ ವೇಳೆ ವರೂರ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಆಚಾರ್ಯ ಗುರುದೇವ, ಕುಂತುಸಾಗರ ಸೇರಿ ವೇದಿಕೆ ಮೇಲಿದ್ದ ಎಲ್ಲ ಆಚಾರ್ಯರು ಕೈ ಎತ್ತಿ ನೀವೇ ಮುಂದಿನ ಸಿಎಂ ಆಗಬೇಕು ಎಂದು ಆಶೀರ್ವಾದ ಮಾಡಿದ್ರು. ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬುದೇ ನಮ್ಮ ಆಸೆ ಅಂತ ಆಚಾರ್ಯ ಗುಣಧರನಂದಿ ಮಹಾರಾಜರು ಆಶೀರ್ವದಿಸಿದ್ದಾರೆ.

ಇದನ್ನೂ ಓದಿ: BBK11: ಉಗ್ರಂ ಮಂಜುಗೆ ಕೂಡಿ ಬಂತು ಕಂಕಣ ಭಾಗ್ಯ; ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದೇನು?

publive-image

ದಿನ ಬೆಳಗಾಗೋದ್ರಲ್ಲಿ ಒಂದು ಮಾತನ್ನು ನಾನು ಡಿಕೆ ಶಿವಕುಮಾರ್​ಗೆ ಹೇಳ್ತೀನಿ. ಅದು ಏನು ಅಂದ್ರೆ ನನಗೆ ಎರಡು ಕನಸು ಇವೆ. ಒಂದು ಜೈನರಿಗೆ ನಿಗಮ ಮಂಡಳಿ ಆಗಬೇಕು. ಇನ್ನೊಂದು ನೀವು ಮುಖ್ಯಮಂತ್ರಿ ಆಗಬೇಕು. ಇವತ್ತು ನವಗ್ರಹ ಹವನ ಆಗಿದೆ. ನವಗ್ರಹ ಅನುಷ್ಠಾನ ಆಗಿದೆ. 18 ಆಚಾರ್ಯಗಳು ಕೂಡಿದ್ದಾರೆ. ಅವರೆಲ್ಲರೂ ಕೈಮಾಡಿ ಕೂಗಿ ಹೇಳ್ತೀದ್ದಾರೆ. ಮುಖ್ಯಮಂತ್ರಿ ಭಾಗಿ ಭವಃ ಈ ಸಮಯದಲ್ಲಿ ನಾನು ಒಂದು ನುಡಿ ಇಡುತ್ತೇನೆ. ಮುಖ್ಯಮಂತ್ರಿ ಆಗಿಯೇ ತೀರುತ್ತಾರೆ ಡಿಕೆ ಶಿವಕುಮಾರ್-ಗುಣಧರನಂದಿ ಮಹಾರಾಜರು, ಆಚಾರ್ಯ

ಇದಕ್ಕೆ ವೇದಿಕೆ ಮೇಲೆಯೇ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ.ಶಿವಕುಮಾರ್, ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ ಎಂದು ಮಾರ್ಮಿಕವಾಗಿ ಮಾತನಾಡಿದ್ರು. ಕಾರ್ಯಕ್ರಮ ಮುಗಿದ್ಮೇಲೆ ಇದೇ ವಿಚಾರವಾಗಿ ಮಾತನಾಡಿದ ಡಿಕೆಶಿ, ಧರ್ಮಗುರುಗಳು ಆಶೀರ್ವಾದ ಮಾಡ್ತಾರೆ, ನಾವು ಕಂಟ್ರೋಲ್ ಮಾಡೋಕಾಗಲ್ಲ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತೆ. ಇದ್ರ ಮಧ್ಯೆ ಧರ್ಮಗುರುಗಳು, ಆಪ್ತರು ಸಿಎಂ ಪಟ್ಟದ ಪೈಪೋಟಿಯನ್ನ ಆಗಾಗ ಮುನ್ನೆಲೆಗೆ ತರುತ್ತಲೇ ಇರ್ತಾರೆ. ನಿಜಕ್ಕೂ ಡಿಕೆಶಿಗೆ ಸದ್ಯದಲ್ಲೇ ಅಧಿಕಾರ ಸಿಗುತ್ತಾ? ಧರ್ಮ ಗುರುಗಳ ಆಶೀರ್ವಾದ ಫಲಿಸುತ್ತಾ? ಇದೆಲ್ಲಾ ಹೈಕಮಾಂಡ್ ಕೈಯ್ಯಲ್ಲಿದೆ.

ಇದನ್ನೂ ಓದಿ: ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳುತ್ತಾ.. ಸಭೆಯಲ್ಲಿ ಚರ್ಚೆ ಆದ ಮಹತ್ವದ ಅಂಶಗಳು ಏನೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment