/newsfirstlive-kannada/media/post_attachments/wp-content/uploads/2025/05/MYSOREPAK_SWEETS.jpg)
ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ. ಸದ್ಯ ಇದಕ್ಕೆ ಎಲ್ಲೆಡೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಬಾಲಿವುಡ್​ ಸ್ಟಾರ್ ಐಶ್ವರ್ಯ ರೈ ಅವರು ಪ್ರತಿಷ್ಠಿತ ಫಿಲಂ ಫೆಸ್ಟಿವಲ್​ನಲ್ಲಿ ಹಣೆಗೆ ಸಿಂಧೂರವಿಟ್ಟು ಬೆಂಬಲ ಸೂಚಿಸಿ ಎಲ್ಲರ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ವ್ಯಕ್ತಿ ಒಬ್ಬರು ಸಿಹಿ ತಿನಿಸುಗಳ ಹೆಸರಲ್ಲಿದ್ದ ಪಾಕ್​ ಎನ್ನುವ ಹೆಸರನ್ನೇ ತೆಗೆದು ಹಾಕಿದ್ದಾನೆ.
/newsfirstlive-kannada/media/post_attachments/wp-content/uploads/2025/05/SWEETS.jpg)
ರಾಜಸ್ಥಾನದ ರಾಜಧಾನಿ ಜೈಪುರ ನಗರದ ಸ್ವೀಟ್ಸ್​ ಆಂಗಡಿಯ ಮಾಲೀಕರೊಬ್ಬರು ಸಿಹಿ ತಿಂಡಿಗಳ ಹೆಸರಿನ ಜೊತೆ ಇರುವ ಪಾಕ್ ಎನ್ನುವ ಹೆಸರನ್ನು ಬದಲಿಸಿ ಆಪರೇಷನ್ ಸಿಂಧೂರ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ ಕೆಲವು ಪ್ರಸಿದ್ಧ ಸಿಹಿತಿಂಡಿಗಳ ಮೇಲೆ ಪಾಕ್​ (Pak) ಎನ್ನುವ ಪದ ಸಾಮಾನ್ಯವಾಗಿ ಬರುತ್ತದೆ. ಇದೇ ಹೆಸರನ್ನು ಬದಲಾವಣೆ ಮಾಡಿದ್ದಾನೆ.
ಪ್ರಸಿದ್ಧ ಸಿಹಿ ತಿಂಡಿಗಳಾದ ಮೋತಿ ಪಾಕ್, ಆಮ್ ಪಾಕ್, ಗೊಂಡ್ ಪಾಕ್ ಹಾಗೂ ದಕ್ಷಿಣ ಭಾರತದ ಮೈಸೂರು ಪಾಕ್​ ಈ ಎಲ್ಲವುದರಗಳಲ್ಲಿ ಪಾಕ್ ಎನ್ನುವುದು ಕಾಮಾನ್ ಆಗಿದೆ. ಹೀಗಾಗಿ ಇದರಲ್ಲಿನ ಪಾಕ್ ಅನ್ನುವ ಹೆಸರನ್ನು ತೆಗೆದು ಅದರ ಬದಲಿಗೆ ಶ್ರೀ ಎನ್ನುವ ಪದ ಸೇರಿಸಿದ್ದಾರೆ. ಅಂದರೆ ಇನ್ಮುಂದೆ ಈ ಸ್ವೀಟ್​ಗಳನ್ನು ಮೋತಿ ಶ್ರೀ, ಆಮ್ ಶ್ರೀ, ಗೊಂಡ್ ಶ್ರೀ ಹಾಗೂ ಮೈಸೂರು ಶ್ರೀ ಎಂದು ಕರೆಯುವಂತೆ ಮನವಿ ಮಾಡಿದ್ದಾನೆ.
/newsfirstlive-kannada/media/post_attachments/wp-content/uploads/2025/05/MYSOREPAK_SWEETS_.jpg)
ಜೈಪುರದ ನಗರದಲ್ಲಿ ಈ ಒಬ್ಬರೇ ಅಂಗಡಿ ಮಾಲೀಕರಲ್ಲ, ಬದಲಿಗೆ ಬೇರೆ ಬೇರೆ ಸ್ವೀಟ್ ಅಂಗಡಿ ಮಾಲೀಕರು ಇದೇ ರೀತಿ ಹೆಸರನ್ನು ಬದಲಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ಸೇನೆಗೆ ಸಿಕ್ಕ ವಿಜಯ ಆಗಿದೆ. ಹೀಗಾಗಿ ದೇಶದಲ್ಲಿ ಎಲ್ಲೆಡೆಯಿಂದಲೂ ಬೆಂಬಲ ವ್ಯಕ್ತವಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us