/newsfirstlive-kannada/media/post_attachments/wp-content/uploads/2025/05/abdul-rauf-asghar.jpg)
ಆಪರೇಷನ್ ಸಿಂಧೂರ್​​ನಲ್ಲಿ ಉಗ್ರ ಮಸೂದ್ ಅಜರ್​ನ ಸೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್​ನ ನೆತ್ತರು ಹರಿದಿದೆ. ಈತ IC-814 ಪ್ರಯಾಣಿಕ ವಿಮಾನದ ಹೈಜಾಕ್​​ನ (Indian Airlines Flight 814) ಮಾಸ್ಟರ್ ಮೈಂಡ್​ ಆಗಿದ್ದ. 1999 ಡಿಸೆಂಬರ್ 24 ರಂದು ವಿಮಾನವನ್ನು ಹೈಜಾಕ್ ಮಾಡಲಾಗಿತ್ತು.
ಆಪರೇಷನ್ ಸಿಂಧೂರ್​ನಲ್ಲಿ ಅಸ್ಗರ್ ಪ್ರಾಣಬಿಟ್ಟಿದ್ದಾನೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್​​ನನ್ನು ಅಬ್ದುಲ್ ರೌಫ್ ಅಜರ್ ಅಂತಲೂ ಕರೆಯಲಾಗುತ್ತದೆ. ರೌಫ್ ಅಜರ್, ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರ, ಈಗ ಏರ್​ ಸ್ಟ್ರೈಕ್​ನಲ್ಲಿ ಪ್ರಾಣ ಬಿಟ್ಟಿದ್ದಾನೆ.
ಇನ್ನು ಭಾರತದ ಏರ್​​ಸ್ಟ್ರೈಕ್ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಮಸೂದ್ ಅಜರ್, ನನ್ನ ಕುಟುಂಬದ 10 ಮಂದಿಯ ಜೀವ ಹೋಗಿದೆ ಎಂದು ತಿಳಿಸಿದ್ದ. ಮಸೂದ್ ಅಜರ್​ನನ್ನು ಐಸಿ-814 ಪ್ರಯಾಣಿಕರ ಬಿಡುಗಡೆಗಾಗಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಪಾಕ್​ಗೆ ಹೋಗಿ ಜೈಷ್-ಇ-ಮೊಹಮ್ಮದ್ ಸಂಘಟನೆ ಕಟ್ಟಿಕೊಂಡಿದ್ದಾನೆ.
ಇತನ ಜೈಷ್-ಇ-ಮೊಹಮ್ಮದ್ ಸಂಘಟನೆಯೇ 2001ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿತ್ತು. ಮಸೂದ್ ಅಜರ್ ಅನುಪಸ್ಥಿತಿಯಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಮುನ್ನೆಡೆಸಿದ್ದ ರೌಫ್ ಅಜರ್ ಮುನ್ನಡೆಸಿದ್ದ. ಈಗ ಮಸೂದ್ ಅಜರ್​ನ ಬಲಗೈ ಭಂಟನಂತಿದ್ದ ರೌಫ್ ಅಜರ್​​ನ ಹೊಡೆದುರುಳಿಸುವಲ್ಲಿ ಅಪರೇಷನ್ ಸಿಂಧೂರು ಯಶಸ್ವಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us