newsfirstkannada.com

ಜೈಸ್ವಾಲ್ ಡಬಲ್ ಸೆಂಚುರಿ ದರ್ಬಾರ್.. ಯಶಸ್ವಿಯ ಬ್ಯಾಟಿಂಗ್ ಅಭ್ಯಾಸ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ!

Share :

Published February 19, 2024 at 11:38am

Update February 19, 2024 at 11:43am

    ಜೈಸ್ವಾಲ್ ದ್ವಿಶತಕ, ರಾಜ್​ಕೋಟ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಮಳೆ

    213 ರನ್​ಗಳಲ್ಲಿ 14 ಬೌಂಡರಿ, 12 ಭಾರೀ ಸಿಕ್ಸರ್ ಸಿಡಿಸಿದ್ದ ಜೈಸ್ವಾಲ್

    ಒಂದೇ ಶಾಟ್​​ 300 ಬಾರಿ ಅಭ್ಯಾಸ, ಸಕ್ಸಸ್​ ಸಿಗೋವರ್ಗೂ ಬಿಡಲ್ಲ.!

ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ವಿ ಜೈಸ್ವಾಲ್ ಅಬ್ಬರ ಮುಂದುವರಿದಿದೆ. ರಾಜ್​ಕೋಟ್​ನಲ್ಲಿ ಡಬಲ್ ಸೆಂಚುರಿಯ ದರ್ಬಾರ್ ನಡೆಸಿ ಜೈಸ್ವಾಲ್ ಮಿಂಚಿದ್ದಾರೆ. ಆಂಗ್ಲರ ಮೇಲೆ ಸವಾರಿ ನಡೆಸಿ ಮಿಂಚಿರುವ ಯಶಸ್ವಿ ಯಶಸ್ಸಿನ ಅಸಲಿ ಮಂತ್ರ ಏನು?.

ಯಶಸ್ವಿ ಜೈಸ್ವಾಲ್ ರಾಜ್​ಕೋಟ್​ನಲ್ಲಿ ವಿಧ್ವಂಸಕ ಬ್ಯಾಟಿಂಗ್​ ನಡೆಸಿದ ಯಂಗ್​ ಬ್ಯಾಟ್ಸ್​ಮನ್​. ಈತನ ಫಿಯರ್ ಲೆಸ್ ಬ್ಯಾಟಿಂಗ್​ಗೆ ಎದುರಾಳಿ ಇಂಗ್ಲೆಂಡ್​ ಬೌಲರ್​ಗಳು ಕಕ್ಕಬಿಕ್ಕಿಯಾದ್ರು. ರಣಾರ್ಭಟ ನಡೆಸಿದ ಜೈಸ್ವಾಲ್​ ರಾಜ್​ಕೋಟ್​​ನಲ್ಲಿ ರನ್​ ಕೋಟೆಯನ್ನೇ ನಿರ್ಮಿಸಿದ್ರು.

ಯಶಸ್ವಿ ಜೈಸ್ವಾಲ್ ದ್ವಿಶತಕದ ಅಬ್ಬರ..!

3ನೇ ದಿನದಾಟದಲ್ಲಿ 104 ರನ್​ ಗಳಿಸಿ ರಿಟೈರ್ಡ್​​ ಹರ್ಟ್​ ಆಗಿ ಪೆವಿಲಿಯನ್​ಗೆ ಹಿಂತಿರುಗಿದ್ದ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್ ವಿಕೆಟ್ ಪತನದ ಬೆನಲ್ಲೇ ಕ್ರೀಸ್​ಗೆ ಮರಳಿದ್ರು. ಮೈದಾನಕ್ಕೆ ಎಂಟ್ರಿ ನೀಡಿದ್ದೇ ತಡ ದಂಡಂ ದಶಗುಣಂ ಮಂತ್ರ ಪಠಿಸಿದ ಜೈಸ್ವಾಲ್​ ದರ್ಬಾರ್ ನಡೆಸಿದ್ರು​. ಅಗ್ರೆಸ್ಸಿವ್​​ ಶೈಲಿಯಲ್ಲಿ ಬ್ಯಾಟ್​ ಬೀಸಿದ ಮುಂಬೈಕರ್​, ಇಂಗ್ಲೆಂಡ್ ಬೌಲರ್​ಗಳ ಬೆವರಿಳಿಸಿದರು. ಜಸ್ಟ್​ 231 ಎಸೆತಗಳಲ್ಲೇ ದ್ವಿಶತಕ ಪೂರೈಸಿ ಮಿಂಚಿದ್ರು. ಈ ಮೂಲಕ ಟೆಸ್ಟ್​ ಕ್ರಿಕೆಟ್​​​ನಲ್ಲಿ 2ನೇ ದ್ವಿಶತಕ ದಾಖಲಿಸಿದ್ರು

ಅಜೇಯ 213 ರನ್​ಗಳ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 14 ಬೌಂಡರಿ, 12 ಸಿಕ್ಸರ್​ಗಳಿದ್ವು.​ ಈ ಅಮೋಘ ಇನ್ನಿಂಗ್ಸ್​ನ ಭಿನ್ನ-ವಿಭಿನ್ನ ಶಾಟ್​​​ ಸೆಲೆಕ್ಷನ್ ನೋಡುಗರ ಗಮನ ಸೆಳೆಯಿತು. ನೀರು ಕುಡಿದಷ್ಟು ಸುಲಭಕ್ಕೆ ಜೈಸ್ವಾಲ್​, ಬ್ಯಾಟ್​ ಬೀಸಿದ್ರು. ಈ ಸಕ್ಸಸ್​ ಹಿಂದಿರೋದು 2 ವರ್ಷದ ಕಠಿಣ ಪರಿಶ್ರಮ.

ಜೈಸ್ವಾಲ್ ಕರಿಯರ್ ಬದಲಿಸಿದ ಝಬಿನ್..!

ರಾಜಸ್ಥಾನ್ ರಾಯಲ್ಸ್​ ಟ್ರಯಲ್ಸ್​ನಲ್ಲಿ ಜೈಸ್ವಾಲ್​ರ ಬ್ಯಾಟಿಂಗ್​ ಹಾಗೂ ಕಾನ್ಫಿಡೆನ್ಸ್​ ಲೆವೆಲ್​​ಗೆ ಕ್ರಿಕೆಟ್ ಹೆಡ್ ಝಬಿನ್ ಭರೂಚಾ ಮನಸೋತಿದ್ದರು. ಅಂಡರ್​-19ನಲ್ಲಿ ಸಕ್ಸಸ್​ ಕಂಡಿದ್ರೂ, ಐಪಿಎಲ್ ಡಿಫರೆಂಟ್ ಗೇಮ್. ಹೀಗಾಗಿ ಜೈಸ್ವಾಲ್, ಪವರ್​ ಗೇಮ್​​​ ಮೇಲೆ ಸಾಕಷ್ಟು ವರ್ಕ್​ ಮಾಡಲಾಯ್ತು. ಝಬಿನ್ ಭರೂಚಾ ಅಂದು ತಿದ್ದಿ ತೀಡಿದ್ದಕ್ಕೆ ಜೈಸ್ವಾಲ್ ಸಕ್ಸಸ್​ ಕಂಡಿದ್ದಾರೆ. ಹೀಗಾಗಿಯೇ ಝಬಿನ್​ರನ್ನ ಜೈಸ್ವಾಲ್​ ನೆನಪಿಸಿಕೊಂಡರು.

ಈ ಎಲ್ಲಾ ಕ್ರೆಡಿಟ್ ಝಬಿನ್ ಭರೂಚಾ ಸರ್​​​ಗೆ ಸಲ್ಲಬೇಕು. ನನ್ನ ಜೊತೆ ಸಾಕಷ್ಟ ಶ್ರಮ ವಹಿಸಿದ್ದಾರೆ. ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಭಿನ್ನ, ವಿಭಿನ್ನ ಪರಿಸ್ಥಿತಿಗಳಲ್ಲಿ ಆಡಲು. ನಾನು ಕೂಡ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ.

ಯಶಸ್ವಿ ಜೈಸ್ವಾಲ್, ಕ್ರಿಕೆಟಿಗ

ಯಶಸ್ವಿ ಜೈಸ್ವಾಲ್​ ಪರ್ಫೆಕ್ಷನ್​​ ಹಿಂದಿದೆ ಆ ಒಂದು ಸೀಕ್ರೆಟ್​..!

ಇಂಟರ್​​ನ್ಯಾಷನಲ್​ ಕ್ರಿಕೆಟ್​ನಲ್ಲಿ ಇಷ್ಟು ವೇಗವಾಗಿ ಯಶಸ್ವಿ ಜೈಸ್ವಾಲ್ ಸಕ್ಸಸ್​ ಕಂಡಿರೋದ್ರ ಹಿಂದೆರೋದು ಹಾರ್ಟ್​ವರ್ಕ್​. ಅಂತರಾಷ್ಟ್ರೀಯ ಕ್ರಿಕೆಟ್​ ಎಂಟ್ರಿಗೂ ಮುನ್ನ ನೆಟ್ಸ್​ನಲ್ಲಿ ಸುರಿಸಿದ ಬೆವರು ಹನಿಯ ಪ್ರತಿಫಲವೇ ಈ ಸಕ್ಸಸ್​. ಪ್ರತಿನಿತ್ಯ ದೀರ್ಘಕಾಲ ನೆಟ್ಸ್​ನಲ್ಲಿ ಅಭ್ಯಾಸ ಮಾಡ್ತಾ ಕಳೆಯುತ್ತಿದ್ದ ಜೈಸ್ವಾಲ್​​, ಒಂದೇ ಒಂದು ಶಾಟ್ ಅನ್ನ​​​​​​​​​​​​​​​​​ ಬರೋಬ್ಬರಿ 300 ಬಾರಿ ಅಭ್ಯಾಸ ಮಾಡ್ತಿದ್ರಂತೆ. ನಿತ್ಯ 300 ಬಾರಿ ಕಟ್ ಶಾಟ್ಸ್​, 300 ಸ್ವೀಪ್​ ಶಾಟ್ಸ್​​ ಸೇರಿದಂತೆ ವಿವಿಧ ರೀತಿಯ ಶಾಟ್ಸ್​ ಪ್ರಯೋಗ ನಡೆಸ್ತಿದ್ರಂತೆ. ಪ್ರತಿ ಶಾಟ್​ ಪರ್ಫೆಕ್ಟ್​ ಆಗೋ ತನಕ ಬಿಡದೇ ಅಭ್ಯಾಸ ನಡೆಸ್ತಿದ್ರಂತೆ.

ವಿಭಿನ್ನ ತೂಕದ ಬ್ಯಾಟ್​​ & ಬಾಲ್​​ನೊಂದಿಗೆ ಅಭ್ಯಾಸ

ಜೈಸ್ವಾಲ್ ಅಭ್ಯಾಸಲ್ಲಿ ಬೌಂಡರಿ ಗೆರೆ ದಾಟುವ ಟಾರ್ಗೆಟ್​ ಕೂಡ ಇತ್ತು. ಪ್ರಾಕ್ಟೀಸ್​ನಲ್ಲಿ 100 ಮೀಟರ್ ಸಿಕ್ಸ್​ ಜೈಸ್ವಾಲ್​ ಟಾರ್ಗೆಟ್​ ಆಗಿತ್ತು. ಇದಕ್ಕಾಗಿ ವಿಭಿನ್ನ ತೂಕ ಹಾಗೂ ಗಾತ್ರದ ಬ್ಯಾಟ್‌ಗಳ ಜೊತೆಗೆ ಅಭ್ಯಾಸ ನಡೆಸ್ತಿದ್ರಂತೆ. ಈ ತೂಕದ ಬ್ಯಾಟ್​ನಿಂದ ಅಂಗೈ ನೋವಿನ ಜೊತೆ ಜೊತೆಗೆ ಗುಳ್ಳೆಗಳು ಆಗುತ್ತಿದ್ವಂತೆ. ಆದ್ರೆ, ಸಾಧಿಸುವ ಛಲದ ಮುಂದೆ ಈ ನೋವು ಸಣ್ಣದಾಗಿತ್ತು. ಆ 2 ವರ್ಷಗಳ ಅಭ್ಯಾಸದ ಫಲದಿಂದ ಇಂದು ಜೈಸ್ವಾಲ್​ ಕ್ಲೀನ್ ಹಿಟ್ಸ್​ ಹೊಡೀತಿದ್ದಾರೆ. ಈ ಎಲ್ಲರದ ಕ್ರೆಡಿಟ್​ನ ರಾಜಸ್ಥಾನ ರಾಯಲ್ಸ್​ಗೆ ಸಲ್ಲಬೇಕು.

10 ಸಾವಿರ ಕಿಕ್​ಗಳನ್ನ ಅಭ್ಯಾಸ ಮಾಡಿದವನ ಬಗ್ಗೆ ನನಗೆ ಭಯವಿಲ್ಲ. ಆದ್ರೆ, ಒಂದೇ ಕಿಕ್​ ಅನ್ನ 10 ಸಾವಿರ ಬಾರಿ ಅಭ್ಯಾಸ ಮಾಡಿದವನನ್ನ ಕಂಡ್ರೆ ನಂಗೆ ಭಯ ಅನ್ನೋದು ಫೈಟರ್​​ ಬ್ರೂಸ್ಲಿಯ ಫೇಮಸ್ ಮಾತು. ಈ ಮಾತು 300 ಬಾರಿ ಒಂದೇ ಶಾಟ್​​ ಅನ್ನ ಅಭ್ಯಾಸ ಮಾಡಿದ ಜೈಸ್ವಾಲ್​ ವಿಚಾರದಲ್ಲಿ ನಿಜವಾಗಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಜೈಸ್ವಾಲ್ ಡಬಲ್ ಸೆಂಚುರಿ ದರ್ಬಾರ್.. ಯಶಸ್ವಿಯ ಬ್ಯಾಟಿಂಗ್ ಅಭ್ಯಾಸ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ!

https://newsfirstlive.com/wp-content/uploads/2024/02/Yashaswi-Jaiswal_1.jpg

Load More