/newsfirstlive-kannada/media/post_attachments/wp-content/uploads/2025/04/MAXWELL_PBKS_TEAM.jpg)
2025ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಮೊದಲು ಸೋಲು ಕಂಡಿದೆ. ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 50 ರನ್ಗಳಿಂದ ಅಮೋಘವಾದ ಗೆಲುವು ಪಡೆದಿದೆ.
ಚಂಡೀಗಢದ ಮುಲ್ಲನ್ಪುರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ರಾಜಸ್ಥಾನ ಪರ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಕ್ರೀಸ್ಗೆ ಆಗಮಿಸಿ ಭರ್ಜರಿ ಆರಂಭ ಪಡೆದರು. ಸಂಜು 38 ರನ್ ಗಳಿಸಿ ಆಡುವಾಗ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿದ್ರೆ ಜೈಸ್ವಾಲ್ (67) ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
ನಿತೀಶ್ ರಾಣ 12, ಬಿರುಸಿನ ಬ್ಯಾಟಿಂಗ್ ಮಾಡಿದ ಹೆಟ್ಮರ್ 12 ಎಸೆತಗಳಲ್ಲಿ 20 ರನ್ ಗಳಿಸಿದ್ರು. ರಿಯಾನ್ ಪರಾಗ್ ಅವರ ಅಮೋಘ ಬ್ಯಾಟಿಂಗ್ನಿಂದ 25 ಎಸೆತಗಳಲ್ಲಿ 43 ಹಾಗೂ ಧೃವ್ ಜುರೆಲ್ 13 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಈ ಎಲ್ಲರ ಕಾಣಿಕೆಯಿಂದ ರಾಜಸ್ಥಾನ್ 20 ಓವರ್ಗಳಲ್ಲಿ 4 ವಿಕೆಟ್ಗೆ 206 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ: ಪಂದ್ಯದ ವೇಳೆ ಅಭಿಮಾನಿಗಳನ್ನ ಥಳಿಸಲು ಯತ್ನಿಸಿದ ಸ್ಟಾರ್ ಕ್ರಿಕೆಟರ್.. ಅಸಲಿಗೆ ಆಗಿದ್ದೇನು?
ಈ ಗುರಿ ಮುಟ್ಟಲು ಪ್ರಯತ್ನಿಸಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಿತ್ತು. ಏಕೆಂದರೆ, ಪ್ರಿಯಾಂಶ್ ಆರ್ಯ ಡಕೌಟ್ ಆದ್ರೆ, ಪ್ರಭಸಿಮ್ರನ್ ಸಿಂಗ್ 17 ರನ್ಗೆ ಕ್ಯಾಚ್ ಕೊಟ್ಟು ಔಟ್ ಆದರು. ಇವರ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ ಕೂಡ 10 ರನ್ಗೆ ಆಟ ಮುಗಿಸಿದರು. ನೆಹಾಲ್ ವಧೇರಾ 41 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್ನಿಂದ 62 ಗಳಿಸಿ ಗೆಲುವಿನ ಅಲೆ ಮೂಡಿಸಿದ್ದರು.
ಆದರೆ ನೆಹಾಲ್ ವಧೇರಾ ಬ್ಯಾಟಿಂಗ್ಗೆ ಹಸರಂಗ ಬ್ರೇಕ್ ಹಾಕಿದರು. ಮ್ಯಾಕ್ಸ್ವೆಲ್ ಕೊಂಚ ಹೊಡೆದಾಡಿದರೂ 30 ರನ್ಗೆ ಪೆವಿಲಿಯನ್ ಸೇರಿದರು. ಬಳಿಕ ಬಂದ ಯಾವ ಬ್ಯಾಟ್ಸ್ಮನ್ ಕೂಡ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಲಿಲ್ಲ. ಹೀಗಾಗಿ ಪಂಜಾಬ್ 9 ವಿಕೆಟ್ಗೆ 155 ರನ್ ಗಳಿಸಲು ಮಾತ್ರ ಶಕ್ತವಾಯಿತು. ಇದರಿಂದಾಗಿ ರಾಜಸ್ಥಾನ ಜೊತೆ 50 ರನ್ಗಳಿಂದ ಪಂಜಾಬ್ ಸೋತಿದೆ. ಆರ್ಆರ್ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದು ತಂಡಕ್ಕೆ ನೆರವಾದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ