/newsfirstlive-kannada/media/post_attachments/wp-content/uploads/2025/07/Yashasvi_Jaiswal.jpg)
ಟೀಮ್ ಇಂಡಿಯಾದ ಯಂಗ್ ಓಪನರ್​ ಯಶಸ್ವಿ ಜೈಸ್ವಾಲ್ ಸದ್ಯ ಅತ್ಯುತ್ತಮ ಪರ್ಫಾಮೆನ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಜೈಸ್ವಾಲ್​ಗೆ ಜಸ್ಟ್​ ಈಗ 23 ವರ್ಷ 188 ದಿನಗಳು ಆಗಿವೆ ಅಷ್ಟೇ. ಈ ವಯಸ್ಸಿಗೆ ಕ್ರಿಕೆಟ್​ನಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದಾರೆ. ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್, ಗೌತಮ್ ಗಂಭೀರ್, ಗಂಗೂಲಿ ಅವರ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.
ಆರಂಭಿಕ ಬ್ಯಾಟ್ಸ್​ಮನ್ ಆಗಿರುವ ಯಶಸ್ವಿ ಜೈಸ್ವಾಲ್ ಅವರು ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಸೆಂಚುರಿ ಸಿಡಿಸಿದ್ದರು. ಇದರ ಬೆನ್ನಲ್ಲೇ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಸ್ವಲ್ಪದರಲ್ಲಿ ಶತಕದಿಂದ ವಂಚಿತರಾದರು. 87 ರನ್​​ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್ ಕೇವಲ 13 ರನ್​ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡರು. ಈಗಾಗಲೇ 2ನೇ ಇನ್ನಿಂಗ್ಸ್​ನಲ್ಲಿ 28 ರನ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಈ ಮೂಲಕ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ 2,000 ರನ್​ ಪೂರೈಸಿ ದಾಖಲೆ ಬರೆದಿದ್ದಾರೆ.
ಯಶಸ್ವಿ ಜೈಸ್ವಾಲ್ ಕೇವಲ 40 ಇನ್ನಿಂಗ್ಸ್​ನಲ್ಲಿಯೇ 2000 ರನ್​ ಪೂರೈಸಿದ್ದಾರೆ. ಇದು ಭಾರತದ ಬ್ಯಾಟ್ಸ್​ಮನ್​ಗಳ ಪೈಕಿ ಅತಿ ವೇಗವಾಗಿ 2000 ರನ್ ಪೈರೈಸಿದ ಬ್ಯಾಟ್ಸ್​​ಮನ್ ಆಗಿದ್ದಾರೆ. ಈ ಹಿಂದೆ ಕನ್ನಡಿಗ ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೇಹ್ವಾಗ್ ಅವರೂ 40 ಇನ್ನಿಂಗ್ಸ್​​ಗಳಲ್ಲಿ ಈ ದಾಖಲೆ ಮಾಡಿದ್ದರು. ಸದ್ಯ ಯಶಸ್ವಿ ಜೈಸ್ವಾಲ್ ದ್ರಾವಿಡ್ ಹಾಗೂ ವೀರೇಂದ್ರ ಸೇಹ್ವಾಗ್ ಅವರ ಸಾಲಿನಲ್ಲಿ ನಿಂತಿದ್ದಾರೆ.
ಇನ್ನು ಕ್ರಿಕೆಟ್​ ದೇವರು ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್ 44 ಇನ್ನಿಂಗ್ಸ್​ಗಳಲ್ಲಿ ಈ ದಾಖಲೆ ಮಾಡಿದ್ದರು. ಅದರಂತೆ ವಿಜಯ್ ಹಜಾರೆ, ಗೌತಮ್ ಗಂಭೀರ್ ಅವರು 43 ಇನ್ನಿಂಗ್ಸ್​​ನಲ್ಲಿ 2 ಸಾವಿರ ರನ್​ ಗಳಿಸಿದ್ದರು. ಸೌರವ್ ಗಂಗೂಲಿ 45 ಹಾಗೂ ಚೇತೇಶ್ವರ್ ಪೂಜಾರ 46 ಇನ್ನಿಂಗ್ಸ್​ನಲ್ಲಿ 2000 ರನ್​ ಪೂರೈಸಿದ್ದರು. ಈ ಎಲ್ಲರಗಿಂತ ಯಶಸ್ವಿ ಜೈಸ್ವಾಲ್ ಕೇವಲ 40 ಇನ್ನಿಂಗ್ಸ್​ನಲ್ಲೇ ಈ ಮೈಲಿಗಲ್ಲು ತಲುಪಿ ದಾಖಲೆ ಬರೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ