ಟೀಮ್​ ಇಂಡಿಯಾಗೆ ಜೂನಿಯರ್​ ಗಬ್ಬರ್​ ಎಂಟ್ರಿ; ಸ್ಟಾರ್​ ಆಟಗಾರನಿಗೆ ಜಾಕ್​ಪಾಟ್​​

author-image
Ganesh Nachikethu
Updated On
T20 ವಿಶ್ವಕಪ್​​​ಗೆ ಆಯ್ಕೆಯಾಗೋದು ಡೌಟ್​​; ಈ ಸ್ಟಾರ್​ ಆಟಗಾರರ ಕ್ರಿಕೆಟರ್​ ಕರಿಯರ್​ ಮುಗೀತಾ..?
Advertisment
  • 2025ರ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್​ ಟ್ರೋಫಿ
  • ಈ ಮುನ್ನವೇ ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಗುಡ್​ನ್ಯೂಸ್​​
  • ಟೀಮ್​ ಇಂಡಿಯಾಗೆ ಜೂನಿಯರ್​ ಗಬ್ಬರ್​​ ಎಂಟ್ರಿ..!

ಟೀಮ್​​ ಇಂಡಿಯಾದ ಗಬ್ಬರ್​ ಎಂದರೆ ಅದು ಸ್ಟಾರ್ ಬ್ಯಾಟರ್ ಶಿಖರ್ ಧವನ್. ಇವರು ಕಳೆದ ವರ್ಷ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ವಿರಾಟ್​​ ಕೊಹ್ಲಿಗೆ ಮುನ್ನವೇ ನಿವೃತ್ತಿ ಘೋಷಿಸಿದ ಶಿಖರ್​ ಧವನ್​​ ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ರು.

ಇನ್ನು, ಮುಂದಿನ ತಿಂಗಳು ಫೆಬ್ರವರಿ 19ನೇ ತಾರೀಕಿನಿಂದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಶುರುವಾಗಲಿದೆ. ಈ ಹೊತ್ತಲ್ಲೇ ಟೀಮ್​ ಇಂಡಿಯಾ ರಿಯಲ್​ ಗಬ್ಬರ್​​​​ ಅವರನ್ನು ಮಿಸ್​ ಮಾಡಿಕೊಳ್ಳಲಿದೆ. ಆದರೆ, ಈಗ ಇವರ ಸ್ಥಾನ ತುಂಬಲು ಟೀಮ್​​ ಇಂಡಿಯಾಗೆ ಜೂನಿಯರ್​ ಗಬ್ಬರ್​ ಎಂಟ್ರಿ ಆಗಿದ್ದಾರೆ.

ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಗುಡ್​ನ್ಯೂಸ್​

ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಸದ್ಯದಲ್ಲೇ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್​ ಮಾಡಲಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​ ಸಿಕ್ಕಿದ್ದು, ಶಿಖರ್ ಧವನ್ ಸ್ಥಾನವನ್ನು ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತುಂಬಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

publive-image

ಎಡಗೈ ಬ್ಯಾಟರ್​ಗೆ ಜಾಕ್​ಪಾಟ್​​

ಭಾರತ ತಂಡದ ಯುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್. ಇವರು ಈಗಾಗಲೇ ಟಿ20 ಮತ್ತು ಟೆಸ್ಟ್ ಮಾದರಿಯಲ್ಲಿ ಅಬ್ಬರಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಏಕದಿನ ತಂಡಕ್ಕೂ ಎಂಟ್ರಿ ನೀಡಲಿದ್ದು, ಇವರು ಚಾಂಪಿಯನ್ಸ್​ ಟ್ರೋಫಿ ಆಡಲಿದ್ದಾರೆ.

ಚಾಂಪಿಯನ್ಸ್​ ಟ್ರೋಫಿ ಯಾವಾಗ?

ಮುಂದಿನ ತಿಂಗಳು ಫೆಬ್ರವರಿ 19ನೇ ತಾರೀಕಿನಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಫೆಬ್ರವರಿ 22ಕ್ಕೆ ಟೀಮ್​ ಇಂಡಿಯಾ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲೇ ನಡೆಯಲಿವೆ. ಉಳಿದ ತಂಡಗಳ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ.

ಇದನ್ನೂ ಓದಿ:‘ಗಂಭೀರ್​​ ಒಬ್ಬ ಮೋಸಗಾರ’- ಮುಖ್ಯ ಕೋಚ್​​ ವಿರುದ್ಧ ಸ್ಟಾರ್​ ಕ್ರಿಕೆಟರ್​​ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment