newsfirstkannada.com

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಫೀವರ್‌; ಗೂಳಿ ದಾಳಿಗೆ 36 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

Share :

Published January 15, 2024 at 9:39pm

    ಪೊಂಗಲ್‌ನ ಮೊದಲ ದಿನವೇ ಜಲ್ಲಿಕಟ್ಟು ಆಯೋಜನೆ

    ಅವನಿಯಪುರಂನಲ್ಲಿ 8 ಸುತ್ತು ನಡೆದ ಜಲ್ಲಿಕಟ್ಟು ಕ್ರೀಡೆ

    ಗೂಳಿ ಗೆದ್ದರೆ ಗೂಳಿಯ ಯಜಮಾನನಿಗೆ ಬಹುಮಾನ

ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಡಗರ ಮನೆ ಮಾಡಿದೆ. ಪೊಂಗಲ್ ಜೊತೆ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಫೀವರ್ ಹೆಚ್ಚಾಗಿದೆ. ತಮಿಳು ನೆಲದಲ್ಲಿ ಕೊಬ್ಬಿದ ಗೂಳಿಗಳ ಭುಜ ಹಿಡಿದು ಬಗ್ಗಿಸಲು ಯುವಕರು ಸಜ್ಜಾಗಿದ್ದಾರೆ. ಇವತ್ತಿನಿಂದ ಮೂರು ದಿನಗಳ ಕಾಲ ಗೂಳಿಗಳ ಕಾಳಗ ನೋಡುಗರ ಮೈ ನವಿರೇಳಿಸಲಿದೆ.

ಇವತ್ತಿನಿಂದ ಮೂರು ದಿನಗಳ ಕಾಲ ಗೂಳಿಗಳ ಖದರ್‌!

ತಮಿಳುನಾಡಿನಲ್ಲಿ ಪ್ರಮುಖವಾಗಿ ಆಚರಿಸೋ ಹಬ್ಬ ಪೊಂಗಲ್. ಈ ಹಬ್ಬದಲ್ಲಿ ಪೊಂಗಲ್ ಎಷ್ಟು ಫೇಮಸ್ಸೋ ಜಲ್ಲಿಕಟ್ಟು ಸ್ಪರ್ಧೆ ಅದಕ್ಕಿಂತ ಒಂದು ಕೈ ಮೇಲು. ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆಯಾಗಿರೋ ಜಲ್ಲಿಕಟ್ಟು ಬರೀ ಕ್ರೀಡೆಯಷ್ಟೇ ಅಲ್ಲ. ತಮಿಳು ನೆಲದ ಸಾಂಸ್ಕೃತಿಕ ಆಚರಣೆ. ಇದೀಗ ಮಧುರೈನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಚಾಲನೆ ಸಿಕ್ಕಿದೆ. ಗೂಳಿಗಳನ್ನ ಪಳಗಿಸುವ ಆಟದಲ್ಲಿ ಯುವಕರ ಸಾಹಸ ಮೈನವಿರೇಳಿಸುವಂತಿದೆ. ಕೊಬ್ಬಿದ ಗೂಳಿಗಳ ಭುಜಹಿಡಿಯುವ ಸ್ಪರ್ಧೆ ಶುರುವಾಗಿದೆ. ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಇವತ್ತು ಜಲ್ಲಿಕಟ್ಟು ಕ್ರೀಡೆ ಆರಂಭವಾಗಿದೆ. ಗೂಳಿಗಳ ಪಳಗಿಸುವ ಆಟ ತಮಿಳುನಾಡಿನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಅದರಂತೆ ಮೊದಲ ದಿನವಾದ ಇಂದು ಅವನಿಯಪುರಂನಲ್ಲಿ ಜಲ್ಲಿಕಟ್ಟು ಜಾತ್ರೆ ಜೋರಾಗಿತ್ತು. ಗೂಳಿಗಳನ್ನ ಹಿಡಿಯಲು ನಾಮುಂದು ತಾಮುಂದು ಅಂತ ಹೊಂಚು ಹಾಕಿ ನಿಂತ ಭುಜಹಿಡಿದು ಬಗ್ಗಿಸುವ ಆಟ ನೋಡಗರ ಕಣ್ಮನಸೆಳೆದಿತ್ತು. ಬಿರುಗಾಳಿಯಂತೆ ನುಗ್ಗಿ ಬರುವ ಗೂಳಿಗಳನ್ನ ಹಿಡಿದು ಬಹುಮಾನ ಪಡೆಯಲು ಯುವಕರ ದಂಡೇ ಅಖಾಡಕ್ಕೆ ಇಳಿದಿತ್ತು.

ಮೊದಲ ದಿನವಾದ ಇಂದು ಜಲ್ಲಿಕಟ್ಟು ಕ್ರೀಡೆಯಲ್ಲಿ ಸುಮಾರು 2 ಸಾವಿರದ 400 ಗೂಳಿಗಳು ಅಖಾಡಕ್ಕೆ ಲಗ್ಗೆ ಇಟ್ಟಿದ್ವು. ಈ ಗೂಳಿಗಳನ್ನ ಪಳಗಿಸಲು 1 ಸಾವಿರದ 318 ಮಂದಿ ಯುವಕರು ಜಲ್ಲಿಕಟ್ಟು ಮೈದಾನಕ್ಕೆ ಇಳಿದಿದ್ರು. ಅಂದ್ಹಾಗೆ ಜಲ್ಲಿಕಟ್ಟು ಆಯೋಜಕರು ಗೂಳಿಯನ್ನು ಪಳಗಿಸಲು ಕಾಲಮಿತಿ ನಿಗದಿಪಡಿಸಿರ್ತಾರೆ. ಅದರಂತೆ ಗೂಳಿಯನ್ನ ಪಳಗಿಸುವವನು ಅದರ ಭುಜವನ್ನ ಎಷ್ಟು ಹೊತ್ತು ಹಿಡಿದಿರುತ್ತಾನೆ ಎಂಬ ಅವಧಿಯ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇನ್ನೂ ಎರಡನೇ ದಿನದ ಜಲ್ಲಿಕಟ್ಟು ಕ್ರೀಡೆ ಪಾಲಮೇಡುನಲ್ಲಿ ನಾಳೆ ನಡೆಯಲಿದೆ. ಬಳಿಕ ಅಲಂಗಲ್ಲೂರಿನಲ್ಲಿ ಮೂರನೇ ದಿನದ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿದೆ.

ಜಲ್ಲಿಕಟ್ಟು ಕ್ರೀಡೆ ವೇಳೆ 36 ಮಂದಿಗೆ ಗಾಯ

ಅಂದ್ಹಾಗೆ ಜಲ್ಲಿಕಟ್ಟು ಅತಿ ಅಪಾಯಕರ ಕ್ರೀಡೆಯಾಗಿದ್ದು, ಮೊದಲ ದಿನದಂದೇ ಹಲವು ಮಂದಿ ಗಾಯಗೊಂಡ ಪ್ರಸಂಗವೂ ನಡೆದಿದೆ. ಗೂಳಿಗಳನ್ನ ಹಿಡಿಯಲು ಹೋಗಿ 36 ಮಂದಿ ಆಸ್ಪತ್ರೆ ಸೇರಿದ್ದಾರೆ. ಅಲ್ಲದೇ ಸಬ್‌ ಇನ್ಸ್‌ಪೆಕ್ಟರ್ ಒಬ್ಬರು ಜಲ್ಲಿಕಟ್ಟು ವೇಳೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಾರೆ, ಪೊಂಗಲ್ ಹಬ್ಬದಂದು ತಮಿಳುನಾಡಿನಲ್ಲಿ ಜಲ್ಲೀಕಟ್ಟು ಅತ್ಯಂತ ಫೇಮಸ್ ಕ್ರೀಡೆ. ಆದ್ರೆ, ಅಷ್ಟೇ ಡೇಂಜರಸ್ ಆಟ ಕೂಡಾ. ಹೀಗಾಗಿ ಈ ಕ್ರೀಡೆ ನಿಷೇಧಕ್ಕೆ ಸುಪ್ರೀಂಕೋರ್ಟ್‌ ಕಟಕಟೆಗೂ ಬಂದು ನಿಂತಿದೆ. ಪೊಂಗಲ್ ಜೊತೆ ಜಲ್ಲಿಕಟ್ಟು ಜನರಿಗೆ ಸಖತ್ ಥ್ರಿಲ್ ಕೊಡೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಫೀವರ್‌; ಗೂಳಿ ದಾಳಿಗೆ 36 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2024/01/jalli-kattu-1.jpg

Load More