newsfirstkannada.com

ವಿಶ್ವ ದರ್ಜೆ ಬೌಲರ್​​ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!

Share :

Published July 14, 2024 at 1:07pm

    ಜೇಮ್ಸ್ ಆ್ಯಂಡರ್ಸನ್ ಎಷ್ಟು ವರ್ಷ ಕಾಲ ತಂಡದಲ್ಲಿ ಬೌಲಿಂಗ್ ಮಾಡಿದ್ರು?

    704 ಟೆಸ್ಟ್​ ವಿಕೆಟ್​​ಗಳನ್ನ ಬೇಟೆಯಾಡಿದ್ದ ಬಲಿಷ್ಠ ಬೌಲರ್​ ಆ್ಯಂಡರ್ಸನ್

    ವಿಶ್ವ ಗೆದ್ದ ಬೌಲರ್​ಗೆ ಕಾಡ್ತಿದೆ ಆ ಒಂದು ಕೊರಗು, ಏನದು ನಿಮಗೆ ಗೊತ್ತಾ?

ಜೇಮ್ಸ್ ಆ್ಯಂಡರ್ಸನ್.. ದಿ ಲೆಜೆಂಡರಿ ಬೌಲರ್.. ಈತನ ಬೌಲಿಂಗ್​​ಗೆ ಪತರಗುಟ್ಟದ ಬ್ಯಾಟರ್ ಇಲ್ಲ. ಸುದೀರ್ಘ 22 ವರ್ಷದ ಕರಿಯರ್​ನಲ್ಲಿ ಮಾಡಿದ ದಾಖಲೆಗಳು ಲೆಕ್ಕಕ್ಕಿಲ್ಲ. ಇಂಥ ದಿಗ್ಗಜನಿಗೆ ಟೀಮ್ ಇಂಡಿಯಾದ ಈ ಬ್ಯಾಟರ್​​, ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ರಂತೆ. ನಾನು ಕೆಳ ಮಟ್ಟದ ಬೌಲರ್ ಎಂಬಂತೆ ಮಾಡಿದ್ರಂತೆ. ಅದ್ಯಾರು?.

ಇದನ್ನೂ ಓದಿ: ಬಹಿರ್ದೆಸೆಗೆ ಹೋಗಿದ್ದ 10 ವರ್ಷದ ಬಾಲಕಿ ನಿಗೂಢ ಸಾವು.. ಹೊಂಡದ ಬಳಿ ನಡೆದಿದ್ದಾದ್ರು ಏನು?

ಜೇಮ್ಸ್​ ಆ್ಯಂಡರ್ಸನ್​.. ವಿಶ್ವ ಕ್ರಿಕೆಟ್​ನ ಶ್ರೇಷ್ಠ ಬೌಲರ್. ಒಂದಲ್ಲ.. ಎರಡಲ್ಲ.. ಬರೋಬ್ಬರಿ 21 ವರ್ಷಗಳ ಕಾಲ ವಿಶ್ವ ಕ್ರಿಕೆಟ್​ನ ಬೌಲಿಂಗ್ ದೊರೆಯಾಗಿ ಮರೆದವರು. ಪೇಸ್ ಸೆನ್ಸೇಷನ್​ ಆಗಿ ವಿಶ್ವ ಕ್ರಿಕೆಟ್​ನಲ್ಲಿ ಈತ ಮಾಡದ ಸಾಧನೆ ಇಲ್ಲ. ​ಮಾರಕ ಬೌಲಿಂಗ್​ಗೆ ಪೆವಿಲಿಯನ್ ಪರೇಡ್ ನಡೆಸಿದ ದಿಗ್ಗಜ ಬ್ಯಾಟರ್​​ಗಳು ಒಂದಿಬ್ಬರಲ್ಲ. ಈ ದಿಗ್ಗಜ 704 ಟೆಸ್ಟ್​ ವಿಕೆಟ್​​ಗಳೊಂದಿಗೆ ಇದೀಗ ತೆರೆ ಮರೆಗೆ ಸರಿದಿದ್ದಾರೆ. ಆಲ್​ ಟೈಮ್ ಗ್ರೇಟೆಸ್ಟ್​ ಬೌಲರ್​ ಕರಿಯರ್​ಗೆ ತೆರೆಬಿದ್ದಿದೆ.

ಇದನ್ನೂ ಓದಿ: ಬೈಕ್-ಕಾರಿನ ನಡುವೆ ಭೀಕರ ಆಕ್ಸಿಡೆಂಟ್.. ನಡು ರಸ್ತೆಯಲ್ಲೇ ಉಸಿರು ಚೆಲ್ಲಿದ ಇಬ್ಬರು ಸವಾರರು

ಈ 21 ವರ್ಷದ ಕರಿಯರ್​ನಲ್ಲಿ ಹಲವು ದಿಗ್ಗಜರನ್ನು ಆ್ಯಂಡರ್ಸನ್​ ಕಾಡಿದ್ದಾರೆ. ಅವರುಗಳ ಪೈಕಿ ಗಾಡ್​ ಆಫ್ ಕ್ರಿಕೆಟ್​ ಸಚಿನ್, ಆ್ಯಂಡರ್ಸನ್​ ಎದುರಿಸಿದ ಶ್ರೇಷ್ಠ ಬ್ಯಾಟ್ಸ್​ಮನ್ ಅಂತೆ.

ಕ್ರಿಕೆಟ್ ದೇವರು ಸಚಿನ್, ಆ್ಯಂಡರ್ಸನ್​ ಎದುರಿಸಿದ ಶ್ರೇಷ್ಠ ಬ್ಯಾಟ್ಸ್​ಮನ್. ಈ 21 ವರ್ಷದ ಕರಿಯರ್​ನಲ್ಲಿ ಆ್ಯಂಡರ್ಸನ್ ಎಂಬ ದೈತ್ಯನನ್ನ ಇನ್ನಿಲ್ಲದೆ ಕಾಡಿದ್ದು ಮಾತ್ರ ವಿಶ್ವ ಸಾಮ್ರಾಟ ವಿರಾಟ್​ ಕೊಹ್ಲಿ. ಇದನ್ನೂ ಸ್ವತಃ ದಿಗ್ಗಜ ಬೌಲರ್​​ ಜೇಮ್ಸ್ ಆ್ಯಂಡರ್ಸನ್​​​​​​​​​​ ಹೇಳಿಕೊಂಡಿದ್ದಾರೆ.

‘ತುಂಬಾ ಕೀಳರಿಮೆ ಅನುಭವಿಸಿದ್ದೇನೆ’

ಕೆಲ ಸರಣಿಗಳು ನಿಮಗೆ ಅದ್ಭುತವೆನಿಸುತ್ತದೆ. ಆದರೆ, ಸಾಕಷ್ಟು ಸರಣಿಗಳಲ್ಲಿ ಅದು ಸಾಧ್ಯ ಇಲ್ಲ. ಆರಂಭಿಕ ದಿನಗಳಲ್ಲಿ ವಿರಾಟ್​ ಕೊಹ್ಲಿ ಎದುರು ಆಡುವಾಗ ಪ್ರತಿ ಬಾಲ್‌ ಔಟ್ ಮಾಡಬಹುದು ಎಂದು ಅನಿಸುತ್ತಿತ್ತು. ಈಗ ವಿರಾಟ್​ ಕೊಹ್ಲಿಯನ್ನ ಔಟ್ ಮಾಡಲು ಸಾಧ್ಯ ಇಲ್ಲ. ಇದರಿಂದ ತುಂಬಾ ಕೀಳರಿಮೆ ಅನುಭವಿಸಿದ್ದೇನೆ.

ಜೇಮ್ಸ್ ಆ್ಯಂಡರ್ಸನ್, ವೇಗಿ

ವಿಶ್ವ ದರ್ಜೆಯ ಬೌಲರ್​ಗೆ ಕಾಡಿತು ಕೊಹ್ಲಿಯಿಂದ ಕೀಳರಿಮೆ..?​​

ವಿಶ್ವ ಕ್ರಿಕೆಟ್​ನಲ್ಲಿ ಎಷ್ಟು ಮಂದಿಯ ರೈವರ್ಲಿ ಫ್ಯಾನ್ಸ್​ಗೆ ನೆನಪಿರುತ್ತೋ ಬಿಡುತ್ತೋ. ಗೊತ್ತಿಲ್ಲ. ವಿರಾಟ್​ ಕೊಹ್ಲಿ ವರ್ಸಸ್​ ಜೇಮ್ಸ್ ಆ್ಯಂಡರ್ಸನ್ ನಡುವಿನ ಬ್ಯಾಟಲ್ ಮಾತ್ರ, ಒಂದು ಮಹಾ ಯುದ್ಧದಂತೆ ಭಾಸವಾಗುತ್ತೆ. ಇವರಿಬ್ಬರು ಫೀಲ್ಡ್​ನಲ್ಲಿದ್ದಾಗ ಬ್ಯಾಟ್ ಆ್ಯಂಡ್ ಬಾಲ್ ನಡುವೆ ನಡೆಯುತ್ತಿದ್ದ ಕಾಳಗವೇ ಹಾಗಿತ್ತು.!

2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್​ ಎದುರು ಜೇಮ್ಸ್ ಆ್ಯಂಡರ್ಸನ್ ಮೇಲುಗೈ ಸಾಧಿಸಿದ್ರು. 2016, 2018ರ ಇಂಗ್ಲೆಂಡ್​ ಪ್ರವಾಸದಲ್ಲಿ ಜೇಮ್ಸ್​ ಆ್ಯಂಡರ್ಸನ್​ ಎದುರು ವಿರಾಟ್​ ವೀರಾವೇಶ ಮೆರೆದಿದ್ರು. 2021ರಲ್ಲಿ ಟೆಸ್ಟ್​ ಸರಣಿಯಲ್ಲಿ ಆ್ಯಂಡರ್ಸನ್​ಗೆ ಜಸ್ಟ್​ 2 ಬಾರಿ ಮಾತ್ರವೇ ವಿಕೆಟ್ ಒಪ್ಪಿಸಿದ್ದ ವಿರಾಟ್, 2022ರ ಸರಣಿಯಲ್ಲಿ ಮತ್ತೆ ಮೇಲುಗೈ ಸಾಧಿಸಿದ್ರು. ಕೊಹ್ಲಿ ವಿಕೆಟ್ ಪಡೆಯೋದು ಸುಲಭವೆಂಬ ಭ್ರಮೆಯಲ್ಲಿದ್ದ ಆ್ಯಂಡರ್ಸನ್​, ನಂತರ ಹರಸಾಹಸವನ್ನೇ ಪಟ್ಟಿದ್ರು. ಆ ಬಳಿಕವೇ ಗೊತ್ತಾಗಿದ್ದು ಕೊಹ್ಲಿ ವಿಕೆಟ್ ಬೇಟೆ ಸುಲಭವಲ್ಲ ಎಂದು.. ಇದೇ ಕಾರಣಕ್ಕೆ ದಿಗ್ಗಜ ಬೌಲರ್​ಗೆ ಕೀಳರಿಮೆ ಕಾಡಿತ್ತು.

ಇದನ್ನೂ ಓದಿ: ಮದುವೆ ಆದರೂ ಬಾಡದ ಹಳೇ ಪ್ರೀತಿ.. ಟೊಂಕಕ್ಕೆ ವೇಲು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಒಂದೊಂದು ನಿಜ. ಶ್ರೇಷ್ಠ ಬೌಲರ್​ ವಿದಾಯದ ಬಳಿಕ ಆಡಿರುವ ಮಾತುಗಳು, ವಿರಾಟ್​ ಕೊಹ್ಲಿ ಎಷ್ಟರ ಮಟ್ಟಿಗೆ ಗೋಳಾಡಿದ್ದಾರೆ ಅನ್ನೋದನ್ನ ಮಾತ್ರ ಹೇಳ್ತಿಲ್ಲ. ವಿರಾಟ್​ ಕೊಹ್ಲಿಯ ಅಪ್ರತಿಮ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ನೀಡ್ತಿರೋ ಸಂದೇಶವಾಗಿದೆ. ಇನ್ಮುಂದೆ ಶ್ರೇಷ್ಠ ಬೌಲರ್ ಹಾಗೂ ಶ್ರೇಷ್ಠ ಬ್ಯಾಟರ್​ ನಡುವಿನ ಬ್ಯಾಟಲ್​ನ ಫ್ಯಾನ್ಸ್ ಮಿಸ್​ ಮಾಡಿಕೊಳ್ಳೊದಂತೂ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವ ದರ್ಜೆ ಬೌಲರ್​​ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!

https://newsfirstlive.com/wp-content/uploads/2024/07/virat_kohli_james_anderson.jpg

Load More