/newsfirstlive-kannada/media/post_attachments/wp-content/uploads/2024/11/JK-Article-1.jpg)
ಜಮ್ಮು-ಕಾಶ್ಮೀರ ವಿಧಾನಸಭೆ ಕಲಾಪದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಅಸೆಂಬ್ಲಿಯಲ್ಲಿ ಮತ್ತೆ ಆರ್ಟಿಕಲ್ 370 ಕಿಡಿ ಹೊತ್ತಿದ್ದು, ಬಿಜೆಪಿ ವರ್ಸಸ್ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆದಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆ ಸಂಬಂಧ ವಿಧಾನಸಭೆಯಲ್ಲಿ ನಿನ್ನೆ ನಿರ್ಣಯ ಮಂಡನೆಯಾಗಿದೆ. ವಿಶೇಷ ಸ್ಥಾನಮಾನ ಮರುಸ್ಥಾಪನೆ ವಿರೋಧಿಸಿ ಬಿಜೆಪಿ ಸದಸ್ಯರು ಗಲಾಟೆ ಮಾಡಿದ್ದಾರೆ. ನಿರ್ಣಯವನ್ನು ವಿತ್ ಡ್ರಾ ಮಾಡುವಂತೆ ಬಿಜೆಪಿ ಒತ್ತಾಯ ಮಾಡಿದೆ. ಇದೇ ವಿಚಾರದ ಗಲಾಟೆ ಇಂದು ಬೆಳಗ್ಗಿನ ಕಲಾಪಕ್ಕೂ ತಟ್ಟಿದೆ. ಬೆಳಗ್ಗೆ 10.20ಕ್ಕೆ ಕಲಾಪ ಆರಂಭವಾದರೂ ಬಿಜೆಪಿ ಶಾಸಕರ ಗದ್ದಲ ಮುಂದುವರಿದಿತ್ತು. ಹೀಗಾಗಿ ಸ್ಪೀಕರ್ ಕಲಾಪವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ:ಸೈಲೆಂಟ್ ಕಿಲ್ಲರ್..! ಹೃದಯಾಘಾತ ಆಗುವ 2 ಗಂಟೆ ಮೊದಲು ದೇಹದಲ್ಲಿ ಏನೆಲ್ಲ ಆಗುತ್ತದೆ..?
ಇಂದು ಬೆಳಗ್ಗೆ ಶಾಸಕ ಶೇಖ್ ಖುರ್ಷಿದ್, ಜಮ್ಮುಕಾಶ್ಮೀರಕ್ಕೆ ಇದ್ದ 370ನೇ ವಿಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸುವ ಪೋಸ್ಟರ್ನೊಂದಿಗೆ ಸದನಕ್ಕೆ ತಲುಪಿದ್ದರು. ಇದನ್ನು ನೋಡಿದ ಬಿಜೆಪಿ ಸದಸ್ಯರು ಆಕ್ರೋಶಗೊಂಡು ಅವರ ಕೈಯಲ್ಲಿದ್ದ ಪೋಸ್ಟರ್ ಕಿತ್ತುಕೊಂಡಿದ್ದಾರೆ. ಈ ವೇಳೆ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಬಿಜೆಪಿ ಸದಸ್ಯ ರವೀಂದ್ರ ರೈನಾ ಮಾತನಾಡಿ.. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಈಗ ಇತಿಹಾಸವಾಗಿದೆ. ಒಮರ್ ಅಬ್ದುಲ್ಲಾ ಸರ್ಕಾರ, ಪಾಕಿಸ್ತಾನದ ರೀತಿಯಲ್ಲಿ ವರ್ತಿಸುತ್ತಿದೆ. ಆರ್ಟಿಕಲ್ 370 ವಿಧಿಯ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಪಾಕಿಸ್ತಾನದ ಮನಸ್ಥಿತಿ ಜನ್ಮ ತಾಳಿತು. 370ರ ಪ್ರಸ್ತಾವನೆಯನ್ನು ಅಸಾಂವಿಧಾನಿಕ ರೀತಿಯಲ್ಲಿ ವಿಧಾನಸಭೆಯಲ್ಲಿ ಕಳ್ಳರಂತೆ ತರಾತುರಿಯಲ್ಲಿ ರಹಸ್ಯವಾಗಿ ಮಂಡಿಸಿದ್ದಾರೆ. ನ್ಯಾಷನಲ್ ಕಾಂಗ್ರೆಸ್ ಮತ್ತೆ ಇಲ್ಲಿನ ಶಾಂತಿಯನ್ನು ಹದಗೆಡುವ ಪ್ರಯತ್ನ ಮಾಡುತ್ತಿದೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಭಾರತ ಮಾತೆಯ ಬೆನ್ನಿಗೆ ಚೂರಿ ಹಾಕಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಹರಾಜಿನಲ್ಲಿ ಅಚ್ಚರಿ ಮೂಡಿಸಿದ ಸ್ಟಾರ್ಗಳ ಬೇಸ್ ಪ್ರೈಸ್; KL ರಾಹುಲ್ರ ಮೂಲ ಬೆಲೆ ಎಷ್ಟು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ