newsfirstkannada.com

ಭಯೋತ್ಪಾದಕರ ಬೇಟೆಗಿಳಿದಿದ್ದ ಭಾರತೀಯ ಸೇನೆ; ಗುಂಡೇಟಿಗೆ 3 ಯೋಧರು ಹುತಾತ್ಮರಾದ ಕಥೆ

Share :

Published September 16, 2023 at 6:18am

  ಭಯೋತ್ಪಾಕರ ಬೇಟೆಯಾಡಲು ಫೀಲ್ಡ್​​ಗಿಳಿದಿದ್ದ ಸೇನೆ!

  ಟೆರರ್​​ಗಳಿಗೆ ಟ್ರಬಲ್​ ಕೊಡಲು ಸಜ್ಜಾಗಿದ್ದ ಯೋಧರು!

  ಭಯೋತ್ಪಾದಕರ ಗುಂಡೇಟಿಗೆ 3 ಯೋಧರು ಹುತಾತ್ಮ

ಜಮ್ಮು ಕಾಶ್ಮೀರ: ರಕ್ತಪಿಪಾಸುಗಳ ಅಡಗುತಾಣವಾಗಿರೋ ದೇಶದ ಕಿರೀಟ ಕಾಶ್ಮೀರದಲ್ಲಿ ಯೋಧರ ನೆತ್ತರು ಹರಿದಿದೆ. ದಟ್ಟ ಅರಣ್ಯದಲ್ಲಿ ಭಯೋತ್ಪಾದಕರ ಗುಂಡಿಗೆ ಎದೆಯೊಡ್ಡಿದ ಮೂವರು ಸೈನಿಕರು ವೀರ ಮರಣ ಹೊಂದಿದ್ದಾರೆ. ಮುದ್ದಿನ ಅಪ್ಪನ ಕಳೆದುಕೊಂಡ ಪುಟ್ಟ ಮಕ್ಕಳು, ಅಣ್ಣನ ಕಳೆದುಕೊಂಡ ಸಹೋದರಿ, ಮಗನ ಕಳೆದುಕೊಂಡ ತಂದೆ-ತಾಯಿ ವಿಧಿಯಾಟಕ್ಕೆ ಮರುಗಿದ್ದಾರೆ. ಕಾಶ್ಮೀರ ಒಂದು ಕಾಲದಲ್ಲಿ ಪ್ರವಾಸಿಗರ ಸ್ವರ್ಗವಾಗಿದ್ದ ಈ ಭೂಮಿ ಈಗ ರಕ್ತಪಿಪಾಸುಗಳ ಅಡಗುತಾಣವಾಗಿ ಬದಲಾಗಿದೆ.

ಸದಾ ಗುಂಡಿನ ಸದ್ದು, ಭಯೋತ್ಪಾದಕರ ಹೆಜ್ಜೆ ಸಪ್ಪಳ ಮೊಳಗೋ ಈ ನೆಲದಲ್ಲಿ ಅದೆಷ್ಟೋ ಭಾರತ ಮಾತೆಯ ಪುತ್ರರ ವೀರಮರಣವಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಶಾಂತಿಯ ಸಸಿ ನೆಟ್ಟು ಶ್ರಮದ ನೀರೆರೆಯೋ ಸೈನಿಕರ ಅವಿರತ ಹೋರಾಟ ಇಡೀ ದೇಶದ ಜನತೆಯ ನೆಮ್ಮದಿಯ ನಿದ್ರೆಗೆ ಕಾರಣವಾಗಿದೆ.. ಹೀಗೆ ಭಯೋತ್ಪಾದಕರ ಜಾಡು ಹಿಡಿದು ಕಾಶ್ಮೀರದ ಕಣಿವೆಯಲ್ಲಿ ಕಾರ್ಯಾಚರಣೆಯ ಕಹಳೆ ಮೊಳಗಿಸಿದ್ದ ವೀರಯೋಧರನ್ನ ನರರೂಪದ ರಾಕ್ಷಸರು ಬಲಿಪಡೆದಿದ್ದಾರೆ.

ಭಯೋತ್ಪಾಕರನ್ನ ಬೇಟೆಯಾಡಲು ಫೀಲ್ಡ್​​ಗಿಳಿದಿತ್ತು ಸೇನೆ

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಕೋಕರ್​ನಾಗ್​ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಅನ್ನೋ ಪಕ್ಕಾ ಮಾಹಿತಿ ಸೇನೆಗೆ ಸಿಕ್ಕಿತ್ತು. ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರನ್ನ ಹೆಡೆಮುರಿಕಟ್ಟಲು ಫೀಲ್ಡ್​ಗಿಳಿದಿದ್ದರು. ಸೆಪ್ಟೆಂಬರ್​ 12 ರಾತ್ರಿ ಆರಂಭವಾಗಿದ್ದ ಈ ಕಾರ್ಯಾಚರಣೆ 13ರ ಮುಂಜಾನೆ ಹೊತ್ತಿಗೆ ಭಯೋತ್ಪಾದಕರು ಅಡಗಿದ್ದ ಸ್ಥಳ ಪತ್ತೆ ಮಾಡಿತ್ತು. ದಟ್ಟ ಅರಣ್ಯದ ಮಧ್ಯೆ ಬೀಡು ಬಿಟ್ಟಿದ್ದ ರಕ್ಕಸರು ಸೇನೆಯ ಸಪ್ಪಳ ಕೇಳ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದರು.

ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಹುತಾತ್ಮ

ಭಯೋತ್ಪಾಕರನ್ನ ಬೇಟೆಯಾಡಲು ಕೋಕರ್​ನಾಗ್​ ಅರಣ್ಯದಲ್ಲಿ ಕಾರ್ಯಾಚರಣೆಗಿಳಿದಿದ್ದ ಸೇನೆಗೆ ಬುಧವಾರ ಮುಂಜಾನೆ ಅಗ್ನಿ ಪರೀಕ್ಷೆ ಎದುರಾಗಿತ್ತು. ನೋಡ ನೋಡುತ್ತಿದ್ದಂತೆ ಅರಣ್ಯದ ಮಧ್ಯೆ ಭಯೋತ್ಪಾದಕರ ಬಂದೂಕಿನಿಂದ ನುಗ್ಗಿ ಬಂದ ಗುಂಡುಗಳು ಯೋಧರ ದೇಹ ಹೊಕ್ಕಿದ್ದವು. ಗುಂಡಿನ ದಾಳಿಗೆ ಗಂಭೀರವಾಗಿ ಗಾಯಗೊಂಡ ಮೂವರು ಯೋಧರು ಸ್ಥಳದಲ್ಲೇ ಉಸಿರು ಚೆಲ್ಲಿದ್ದರು. ಅಲ್ಲದೇ ಇಬ್ಬರು ಯೋಧರು ಗಾಯಗೊಂಡು, ಓರ್ವರು ನಾಪತ್ತೆಯಾಗಿದರು. ಎನ್​ಕೌಂಟರ್​ನಲ್ಲಿ 19 ರಾಷ್ಟ್ರೀಯ ರೈಫಲ್​ ಘಟಕದ ಕಮಾಂಡರ್​ಗಳಾದ ಕರ್ನಲ್​ ಮನ್​ಪ್ರೀತ್​ ಸಿಂಗ್, ಮೇಜರ್​ ಆಶಿಶ್​ ಮತ್ತು ಜಮ್ಮು ಕಾಶ್ಮೀರ ಪೊಲೀಸ್​ ಉಪ ಅಧೀಕ್ಷಕ ಹುಮಾಯೂನ್​ ಭಟ್​ ಹುತಾತ್ಮರಾಗಿದ್ದಾರೆ. ಮೂವರ ಪಾರ್ಥಿವ ಶರೀರವನ್ನ ಸ್ವಗ್ರಾಮಕ್ಕೆ ರವಾನಿಸಲಾಗಿದ್ದು ಕಣ್ಣೀರ ವಿಧಾಯದೊಂದಿಗೆ ಅಂತಿಮ ಸಂಸ್ಕಾರ ನೆರವೇರಿದೆ.

ಅಪ್ಪನ ದಾರಿ ಕಾದಿದ್ದ ಮಕ್ಕಳಿಗೆ ಕಾದಿತ್ತು ಹತಾಶೆ

ಅನಂತ್​ನಾಗ್​ನ ಎನ್​ಕೌಂಟರ್​ನಲ್ಲಿ ಹುತಾತ್ಮರಾದ ಕರ್ನಲ್​ ಮನ್​ಪ್ರೀತ್​ ಸಿಂಗ್ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. 6 ವರ್ಷದ ಮಗ, 2 ವರ್ಷದ ಮಗಳು ಹಾಗೂ ಪತ್ನಿಯನ್ನ ಹೊಂದಿದ್ದ ಮನ್​ ಪ್ರೀತ್​ ಕುಟುಂಬ ಅನಾಥವಾಗಿ ಹೋಗಿದೆ. ಸ್ವಗ್ರಾಮ ಪಂಜಾಬ್​ನ ಮುಲ್ಲಾನ್​ಪುರ್​ಗೆ ಮನ್​ಪ್ರೀತ್​ ಮೃತದೇಹ ತಲುಪ್ಪುತ್ತಿದ್ದಂತೆ ಕುಟುಂಬಸ್ಥರ ಕಣ್ಣೀರ ಕಟ್ಟೆ ಒಡೆದಿತ್ತು. ಅಪ್ಪನ ಬರುವಿಕೆಯನ್ನ ಕಾದಿದ್ದ ಮನ್​ ಪ್ರೀತ್​ ಸಿಂಗ್​ ಮಕ್ಕಳು ಮೃತದೇಹದ ಮುಂದೆ ನಿಂತು ಸೆಲ್ಯೂಟ್​ ಮಾಡಿದ ದೃಶ್ಯ ಕಣ್ಣಲ್ಲಿ ನೀರು ತರಿಸುವಂತಿತ್ತು.

ಗೃಹಪ್ರವೇಶಕ್ಕೆ ಬರಬೇಕಿದ್ದ ಮಗ.. ಶವವಾಗಿ ಬಂದ

ಎನ್​ಕೌಂಟರ್​ನಲ್ಲಿ ಹುತಾತ್ಮರಾದ ಮೇಜರ್​ ಆಶಿಶ್​ ಹರಿಯಾಣದ ಪಾಣಿಪತ್​ ಮೂಲದವರು.​ ಆಶಿಶ್​ಗೆ ಪತ್ನಿ ಹಾಗೂ ಎರಡುವರೆ ವರ್ಷದ ವಾಮಿಕ ಎಂಬ ಮಗಳಿದ್ದಾಳೆ. ಅಲ್ಲದೇ ಆಶಿಶ್​ ವಯಸ್ಸಾದ ತಂದೆ-ತಾಯಿ ಸಹ ಅವರ ಜೊತೆ ಇದ್ದು ಮೂವರು ಸಹೋದರಿಯರನ್ನ ಸಹ ಅವರು ಹೊಂದಿದ್ದರು. ಸಹೋದರಿಯರ ಮದುವೆಯ ಜವಾಬ್ದಾರಿ ಹೊತ್ತಿದ್ದ ಆಶಿಶ್,​ ಸ್ವಂತ ಮನೆಯೊಂದನ್ನ ಹೊಂದಬೇಕು ಅಂತ ಕನಸು ಕಟ್ಟಿದ್ದರು. ಇತ್ತೀಚೆಗೆ ಆಶಿಶ್​ ಪಾಣಿಪತ್​ನಲ್ಲಿ ಹೊಸ ಮನೆಯೊಂದನ್ನ ಸಹ ನಿರ್ಮಿಸಿದ್ದರು. ಮುಂದಿನ ತಿಂಗಳು ನೂತನ ಗೃಹಕ್ಕೆ ಗೃಹಪ್ರವೇಶ ತನ್ನ ಹುಟ್ಟುಹಬ್ಬದ ದಿನವನ್ನ ಆಶಿಶ್​ ನಿಗಧಿ ಮಾಡಿದ್ದರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು ಗಹಪ್ರವೇಶಕ್ಕೆ ಬರುವುದಾಗಿ ಹೇಳಿದ್ದ ಆಶಿಶ್,​ ಮೃತದೇಹವಾಗಿ ಮನೆ ಸೇರಿದ್ದರು.

ಪುಟ್ಟ ಕಂದನ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ ಅಪ್ಪ

ಭಯೋತ್ಪಾದಕರ ಗುಂಡಿಗೆ ಬಲಿಯಾದ ಜಮ್ಮು ಕಾಶ್ಮೀರ ಪೊಲೀಸ್​ ಉಪ ಅಧೀಕ್ಷಕ ಹುಮಾಯೂನ್​ ಭಟ್​ ಪುಟ್ಟ ಕುಟುಂಬ ಸೂತ್ರ ಹರಿದ ಗಾಳಿಪಟದಂತಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಹುಮಾಯೂನ್​, 4 ತಿಂಗಳ ಪುಟ್ಟ ಮಗನನ್ನ ಹೊಂದಿದ್ರು. ಹುಮಾಯೂನ್​ ಭಟ್ ತಂದೆ ಗುಲಾಮ್​ ಹಸನ್​​ ಭಟ್​ ಸಹ ಹಿರಿಯ ಪೊಲೀಸ್​ ಅಧಿಕಾರಿಯಾಗಿದ್ದಾರೆ. ಹುಮಾಯೂನ್​ ಅವರ ಅಗಲಿಕೆ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಕಾರ್ಯಾಚರಣೆಯಲ್ಲಿ ಕೊನೆಯುಸಿರೆಳೆದ ‘ಕೆಂಟ್​’!

ಅನಂತ್​ನಾಗ್​ನ ಕೋಕರ್​ನಾಗ್​ ಅರಣ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 6 ವರ್ಷದ ಕೆಂಟ್ ಎಂಬ ಶ್ವಾನ ಸಹ ಸಾವನ್ನಪ್ಪಿದೆ. ಕಾರ್ಯಾಚರಣೆ ವೇಳೆ ತನ್ನ ಹ್ಯಾಂಡ್ಲರ್ ರಕ್ಷಿಸಿದ್ದ ಕೆಂಟ್​ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಕೆಂಟ್​ಗೆ ಅಂತಿಮ ನಮಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಭಯೋತ್ಪಾದಕರ ಜಾಡು ಹಿಡಿದು ದಟ್ಟ ಅರಣ್ಯದಲ್ಲಿ ಘರ್ಜಿಸಿದ್ದ ಭಾರತ ಮಾತೆಯ ಮೂವರು ಪುತ್ರರು ವೀರಮರಣ ಹೊಂದಿದ್ದಾರೆ. ಭಯೋತ್ಪಾದಕರ ಅಡಗುತಾಣವಾಗಿ ದಿನೇ ದಿನೇ ಆತಂಕದ ಆಗರವಾಗುತ್ತಿರುವ ಭಾರತದ ಕಿರೀಟ ಕಾಶ್ಮೀರಕ್ಕೆ ಸೈನಿಕರ ರಕ್ತದ ಕಲೆ ಅಂಟುತ್ತಿದೆ. ದೇಶದ ಜನರ ಹಿತಕ್ಕಾಗಿ ಪ್ರಾಣವನ್ನೇ ಮುಡಿಪಿಟ್ಟ ನಮ್ಮ ಯೋಧರಿಗೆ ನಾವೆಲ್ಲರೂ ಸೆಲ್ಯೂಟ್​ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಯೋತ್ಪಾದಕರ ಬೇಟೆಗಿಳಿದಿದ್ದ ಭಾರತೀಯ ಸೇನೆ; ಗುಂಡೇಟಿಗೆ 3 ಯೋಧರು ಹುತಾತ್ಮರಾದ ಕಥೆ

https://newsfirstlive.com/wp-content/uploads/2023/09/death-65.jpg

Load More