/newsfirstlive-kannada/media/post_attachments/wp-content/uploads/2025/04/SMG_MANJUNATH_1-1.jpg)
ಶಿವಮೊಗ್ಗ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ವಿಚಾರ ಗೊತ್ತಿಲ್ಲದೇ ಅವರ ತಾಯಿ ಸುಮತಿ, ಮಗನ ಬರುವಿಕೆಗಾಗಿ ಕಾದು ಕುಳಿತ್ತಿದ್ದಾರೆ.
ಜಮ್ಮುಕಾಶ್ಮೀರಕ್ಕೆ ಹೆಂಡತಿ ಜೊತೆ ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ಅವರು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಆದರೆ ಶಿವಮೊಗ್ಗದ ನಿವಾಸದಲ್ಲಿರುವ ಮಂಜುನಾಥ್ ಅವರ ತಾಯಿ ಸಮತಿ ಅವರಿಗೆ ಈ ವಿಚಾರ ತಿಳಿದಿಲ್ಲ. ತಾಯಿ ಅನಾರೋಗ್ಯ ಹಿನ್ನೆಲೆಯಲ್ಲಿ ಮಗನ ಸಾವಿನ ಕುರಿತು ಅವರಿಗೆ ಇದುವರೆಗೂ ಮಾಹಿತಿ ನೀಡಿಲ್ಲ.
ಇದನ್ನೂ ಓದಿ:ಭಯೋತ್ಪಾದಕರ ಗುಂಡಿನ ದಾಳಿ.. ಪ್ರಾಣ ಕಳೆದುಕೊಂಡ ಮಾಜಿ ಸ್ಪೀಕರ್ ಸಂಬಂಧಿ
ಮೊಬೈಲ್, ಟಿವಿ ಮೂಲಕ ತಾಯಿಗೆ ವಿಷಯ ಗೊತ್ತಾಗುತ್ತದೆ ಎಂದು ಮನೆಯಲಿದ್ದ ಮೊಬೈಲ್ ಹಾಗೂ ಟಿವಿ ಕಲೆಕ್ಷನ್ ಅನ್ನು ಕುಟುಂಬಸ್ಥರು ತೆಗೆದು ಹಾಕಿದ್ದಾರೆ. ಮಗನಿಗೆ ಸಣ್ಣ ಪುಟ್ಟ ಗಾಯಗಳು ಆಗಿರಬಹುದು ತಾಯಿ ಸುಮತಿ ಅಂದುಕೊಂಡಿದ್ದಾರೆ.
ಮಂಜುನಾಥ್ ಅವರು ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ತೊಡಗಿದ್ದರು. ಮೂಲತಃ ಚಿಕ್ಕಮಂಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದವರು. ಆದರೆ ರಿಯಲ್ ಎಸ್ಟೇಟ್ ವೃತ್ತಿಯಿಂದ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಪತ್ನಿ, ತಾಯಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಕಳೆದ ನಾಲ್ಕೈದು ದಿನದ ಹಿಂದಷ್ಟೇ ಹೆಂಡತಿ ಪಲ್ಲವಿ ಜೊತೆಗೆ ಜಮ್ಮುಕಾಶ್ಮೀರಕ್ಕೆ ತೆರಳಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ