/newsfirstlive-kannada/media/post_attachments/wp-content/uploads/2025/04/SMG_MANJUNATH.jpg)
ಶಿವಮೊಗ್ಗ: ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ ಕರ್ನಾಟಕದ ಶಿವಮೊಗ್ಗದ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಮಂಜುನಾಥ್ ಗುಂಡಿನ ದಾಳಿಯಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ. ಇವರು ಪ್ರವಾಸಕ್ಕೆಂದು ತಮ್ಮ ಕುಟುಂಬದ ಜೊತೆ ಜಮ್ಮುಕಾಶ್ಮೀರಕ್ಕೆ ಹೋಗಿದ್ದರು. ಪ್ರವಾಸದ ಖುಷಿಯಲ್ಲಿದ್ದ ಮಂಜುನಾಥ್ ಸೇರಿ ಕೆಲವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಘಟನೆಯಲ್ಲಿ ಮಂಜುನಾಥ್ ಪ್ರಾಣ ಕಳೆದುಕೊಂಡಿದ್ದು, ಇನ್ನು 6 ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:RR vs LSG ಐಪಿಎಲ್ ಮ್ಯಾಚ್ ಫಿಕ್ಸ್ ಆಗಿತ್ತಾ..? ಸಿಎಂ, ಕ್ರೀಡಾ ಸಚಿವರಿಗೆ ಫ್ರಾಂಚೈಸಿ ದೂರು
ಮಂಜುನಾಥ್ ಅವರು ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ತೊಡಗಿದ್ದರು. ಮೂಲತಃ ಚಿಕ್ಕಮಂಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದವರು. ಆದರೆ ರಿಯಲ್ ಎಸ್ಟೇಟ್ ವೃತ್ತಿಯಿಂದ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಪತ್ನಿ, ತಾಯಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಕಳೆದ ನಾಲ್ಕೈದು ದಿನದ ಹಿಂದಷ್ಟೇ ಹೆಂಡತಿ ಪಲ್ಲವಿ ಜೊತೆಗೆ ಜಮ್ಮುಕಾಶ್ಮೀರಕ್ಕೆ ತೆರಳಿದ್ದರು.
ಈ ಘಟನೆಯು ಇಂದು ಮಧ್ಯಾಹ್ನ 2:30ರ ಸಮಯಕ್ಕೆ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ತಕ್ಷಣ ಭೇಟಿ ನೀಡಿದ್ದಾರೆ. ಟ್ರಕ್ಕಿಂಗ್ಗೆ ಎಂದು ಹೋಗಿದ್ದ ಟೂರಿಸ್ಟ್ಗಳ ಮೇಲೆ ಈ ದಾಳಿ ನಡೆಸಲಾಗಿದೆ. ಹೀಗಾಗಿ ಭದ್ರತಾ ಸಿಬ್ಬಂದಿ ಈಗಲೂ ಸ್ಥಳದಲ್ಲಿದ್ದು ಅನಾಮಿಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ