ಮಂಜುನಾಥ್ ಮೃತದೇಹ ರವಾನೆ.. ಬೆಳಗಿನ ಜಾವ ಬೆಂಗಳೂರು ತಲುಪಲಿರೋ ಪಾರ್ಥಿವ ಶರೀರ

author-image
Bheemappa
Updated On
ಮಂಜುನಾಥ್ ಮೃತದೇಹ ರವಾನೆ.. ಬೆಳಗಿನ ಜಾವ ಬೆಂಗಳೂರು ತಲುಪಲಿರೋ ಪಾರ್ಥಿವ ಶರೀರ
Advertisment
  • ಎಸ್ಕಾರ್ಟ್ ಭದ್ರತೆಯಲ್ಲಿ ಬರಲಿರುವ ಮಂಜುನಾಥ್ ಪಾರ್ಥಿವ ಶರೀರ
  • ನಗರಕ್ಕೆ ಆಗಮಿಸುತಿದ್ದಂತೆ ಹಿಂದೂ ಕಾರ್ಯಕರ್ತರಿಂದ ಬೈಕ್ ರ್ಯಾಲಿ
  • ಅಂತಿಮ ದರ್ಶನಕ್ಕೆ ಬ್ಯಾರಿಕೇಡ್ ಅಳವಡಿಸಿ ಜಿಲ್ಲಾಡಳಿತದಿಂದ ಸಿದ್ಧತೆ

ಶಿವಮೊಗ್ಗ: ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಅವರ ಮೃತದೇಹ ನಾಳೆ ಅಂದರೆ ಏಪ್ರಿಲ್​ 24ರ ಬೆಳಗಿನ ಜಾವ ಬೆಂಗಳೂರು ಏರ್​​ಪೋರ್ಟ್​ಗೆ ಆಗಮಿಸಲಿದೆ.

ಮಂಜುನಾಥ್ ಮೃತದೇಹ ಬೆಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಏರ್​ಪೋರ್ಟ್​ನಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ ಮೃತದೇಹವನ್ನು ಆ್ಯಂಬುಲೆನ್ಸ್​ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗುತ್ತದೆ.

ಬೆಂಗಳೂರು, ತುಮಕೂರು ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗಕ್ಕೆ ಮೃತದೇಹ ಇರುವ ಆ್ಯಂಬುಲೆನ್ಸ್​ ಪ್ರಯಾಣ ಮಾಡಲಿದೆ. ಬೆಳಗ್ಗೆ 8 ಗಂಟೆಗೆ ಶಿವಮೊಗ್ಗದ ವಿಜಯನಗರ ಗುತ್ಯಪ್ಪ ಕಾಲೋನಿಯಲ್ಲಿರುವ ಮೃತಮಂಜುನಾಥ್ ಅವರ ನಿವಾಸ ಮಂಜುಶ್ರೀಗೆ ಆ್ಯಂಬುಲೆನ್ಸ್​ ಆಗಮಿಸುವ ಸಾಧ್ಯತೆ ಇದೆ. ಈ ವೇಳೆ ನಗರಕ್ಕೆ ಆ್ಯಂಬುಲೆನ್ಸ್​ ಬರುತ್ತಿದ್ದಂತೆ ಮೃತರ ಮನೆಯವರೆಗೆ ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದಾರೆ.

ಇದನ್ನೂ ಓದಿ: BREAKING; ಪಾಕ್​​ಗೆ ಸಿಂಧೂ ನದಿ ನೀರು ಹಂಚಿಕೆ ರದ್ದು.. PM ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ 5 ನಿರ್ಧಾರ

publive-image

ನಾಳೆ ಮಧ್ಯಾಹ್ನ 12:30 ರಿಂದ 1 ಗಂಟೆವರೆಗೆ ಮನೆಯ ಮುಂದೆ ಮಂಜುನಾಥ್ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಈಗಾಗಲೇ ಅವರ ಮನೆ ಮುಂದೆ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡುತ್ತಿದೆ. ಇದರ ಜೊತೆಗೆ ಅಂತಿಮ ದರ್ಶನಕ್ಕೆ ಬರುವ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಆಗಮಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

ಅಂತಿಮ ದರ್ಶನ ಪಡೆದ ನಂತರ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗುವ ಸಾಧ್ಯತೆ ಇದೆ. ಮೆರವಣಿಗೆ ನಂತರ ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗರಾದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ. ಮಂಜುನಾಥ್ ಅವರ ಅಂತ್ಯ ಸಂಸ್ಕಾರವನ್ನು ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರು ನೆರವೇರಿಸಲಿದ್ದಾರೆ. ಗುಂಡಾ ಭಟ್ಟ ಎನ್ನುವರು ಅಂತ್ಯ ಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ಕೊಡಲಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment