/newsfirstlive-kannada/media/post_attachments/wp-content/uploads/2025/04/ARMY.jpg)
ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನೆ ನಡೆಸ್ತಿರುವ ಕಾರ್ಯಾಚರಣೆ ತೀವ್ರಗೊಂಡಿದೆ. ಇದೀಗ ಭಾರತೀಯ ಸೇನೆ ಜಮ್ಮು-ಕಾಶ್ಮೀರದ ಖುಲ್ಗಾಮ್ನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಯಾರು ಅವರು..?
ಬಂಧಿತ ಆರೋಪಿಗಳು ಉಗ್ರರಿಗೆ ನೆರವು ನೀಡಿದವರಾಗಿದ್ದಾರೆ. ಪೆಹಲ್ಗಾಮ್ ದಾಳಿಯ ಉಗ್ರರಿಗೆ ಇವರು ಸಹಾಯ ಮಾಡಿದವರು. ಬಂಧಿತರಿಂದ 2 ಪಿಸ್ತೂಲ್ ಹಾಗೂ ಮದ್ದುಗುಂಡು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಅವರಿಂದ ಉಗ್ರರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದ ಪುರಸಭೆ ಮುಖ್ಯಾಧಿಕಾರಿ ಸಾವು
ಆ ಮೂಲಕ ಭಾರತೀಯ ಸೇನೆಯ ಟಾರ್ಗೆಟ್ ಕೇಲವ ಉಗ್ರರು ಮಾತ್ರವಲ್ಲ. ಕಾಶ್ಮೀರದಲ್ಲಿ ಉಗ್ರರನ್ನು ಪೋಷಿಸುತ್ತಿರುವ ಕೆಲವು ದೇಶದ್ರೋಹಿಗಳನ್ನೂ ಟಾರ್ಗೆಟ್ ಮಾಡ್ತಿದೆ. ಭಯೋತ್ಪಾದಕರಿಗೆ ಸಾಥ್ ಕೊಟ್ಟವರ ಮೇಲೂ ಸೇಡು ತೀರಿಸಿಕೊಳ್ಳಲು ಕೂಂಬಿಂಗ್ ಆರಂಭಿಸಿದೆ. ಅಂತೆಯೇ ಉಗ್ರರಿಗೆ ಸಾಥ್ ನೀಡ್ತಿದ್ದ ಮೂವರ ಮನೆಗಳು ನೆಲಸಮಗೊಂಡಿವೆ. ಸೋಫಿಯಾನದ ಚೋಟಿಪೋರಾ, ಪುಲ್ಪಾಮದ ಮುರಾನ್, ಕುಲ್ಗಾಮ್ನ ಮಾತಲಹಮದಲ್ಲಿರೋ ಮೂರು ಮನೆಗಳು ಧ್ವಂಸ ಮಾಡಲಾಗಿದೆ. ಈಗ ಭಾರತೀಯ ಸೇನೆ ಒಟ್ಟು ಐವರು ಉಗ್ರರ ಧ್ವಂಸ ಮಾಡಿದೆ.
ಉಗ್ರರ ಮನೆಗಳು ಧ್ವಂಸ
1. ಸೋಫಿಯಾನ್: ಶಾಹಿದ್ ಅಹ್ಮದ್ ಕುಟ್ಟಿ ಮನೆ ಧ್ವಂಸ
2. ಪುಲ್ವಾಮಾ: ಹ್ಯಾರಿಸ್ ಅಹ್ಮದ್ ಮನೆ ನೆಲಸಮ
3.ಪುಲ್ವಾಮಾ: ಆದಿಲ್ ಹುಸೇನ್ ಮನೆ ಛಿದ್ರ ಛಿದ್ರ
4.ಖುಲ್ಗಾಮ್: ಹಸನ್ ಉಲ್ಹಕ್ ಶೇಖ್ ಮನೆ ಧ್ವಂಸ
5. ಅನಂತ್ನಾಗ್: ಆಸೀಫ್ ಶೇಖ್ ಮನೆ ನೆಲಸಮ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ