/newsfirstlive-kannada/media/post_attachments/wp-content/uploads/2025/05/janardhan-reddy.jpg)
ಆಂಧ್ರದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆದರೆ ಇದರಲ್ಲಿ ಮತ್ತೊಂದು ಟ್ವಿಸ್ಟ್ ಇದ್ದು, ಜಾಮೀನು ಸಿಕ್ಕರೂ ಜನಾರ್ದನ ರೆಡ್ಡಿ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯ ಭಾಗ್ಯವಿಲ್ಲದಾಗಿದೆ.
ಬೇಲ್ ಸಿಕ್ರೂ ಜೈಲಲ್ಲೇ ಜನಾರ್ದನ ರೆಡ್ಡಿ!
ಇತ್ತೀಚೆಗೆ ಓಬಳಾಪುರಂ ಮೈನಿಂಗ್ ಕಂಪನಿ ಕೇಸ್‌ನಲ್ಲಿ ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ಕೋರ್ಟ್, ಜನಾರ್ದನ ರೆಡ್ಡಿ ಅವರಿಗೆ 7 ವರ್ಷ ಶಿಕ್ಷೆ ವಿಧಿಸಿತ್ತು. ತೆಲಂಗಾಣ ಹೈಕೋರ್ಟ್ ಇಂದು ಸಿಬಿಐ ಕೋರ್ಟ್ ವಿಧಿಸಿದ್ದ 7 ವರ್ಷ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆಯಿಂದಾಗಿ ರೆಡ್ಡಿಗೆ ರಿಲೀಫ್ ಸಿಕ್ಕರೂ ಜೈಲಿನಿಂದ ರಿಲೀಸ್ ಆಗುತ್ತಿಲ್ಲ. ಸದ್ಯ ಜನಾರ್ದನ ರೆಡ್ಡಿ ಅವರು ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ತೆಲಂಗಾಣ ಹೈಕೋರ್ಟ್ ಇಂದು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೂ ರೆಡ್ಡಿ ಅವರು ಜೈಲಿನಿಂದ ರಿಲೀಸ್ ಆಗಲ್ಲ. ಯಾಕಂದ್ರೆ ಬೆಂಗಳೂರು ಸಿಬಿಐನಿಂದ ಬೇರೆ ಕೇಸ್‌ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಯುತ್ತಿದೆ.
ಬೆಂಗಳೂರು ಸಿಬಿಐ, ಬೇಲೆಕೇರಿ ಬಂದರು ಅದಿರು ರಫ್ತು ಕೇಸ್‌ನ ತನಿಖೆ ನಡೆಸುತ್ತಿದೆ. ಬಂದರಿನಲ್ಲಿ ಅದಿರು ಅಕ್ರಮ ರಫ್ತು ಕೇಸ್‌ನಲ್ಲಿ ಜನಾರ್ದನ ರೆಡ್ಡಿ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಬಂದ ವಾಲ್ಮೀಕಿ ನಿಗಮದ ಹಗರಣ.. ಅಂದು ED ನೀಡಿದ್ದ ಕಂಪ್ಲೀಟ್ ಮಾಹಿತಿ..!
ಬೆಂಗಳೂರು ಸಿಬಿಐ ಅಧಿಕಾರಿಗಳು ಹೈದರಾಬಾದ್‌ನ ಚಂಚಲಗೂಡ ಜೈಲಿಂದ ಬಾಡಿ ವಾರೆಂಟ್ ಮೇಲೆ ಜನಾರ್ದನ ರೆಡ್ಡಿ ಅವರನ್ನ ಬೆಂಗಳೂರಿಗೆ ಕರೆ ತಂದಿದೆ. ಸದ್ಯ ಇದೇ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರು ಬೆಂಗಳೂರು ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಕ್ಕಿಲ್ಲ. ಓಬಳಾಪುರಂ ಮೈನಿಂಗ್ ಕೇಸ್‌ನಲ್ಲಿ ತಡೆಯಾಜ್ಞೆ ಸಿಕ್ರೂ ಬಿಡುಗಡೆ ಭಾಗ್ಯ ಮಾತ್ರ ಇಲ್ಲ. ಬೇಲೆಕೇರಿ ಕೇಸ್ನಲ್ಲೂ ಜಾಮೀನು ಸಿಕ್ಕರೆ ಮಾತ್ರ ರೆಡ್ಡಿ ರಿಲೀಸ್ ಆಗುವ ಸಾಧ್ಯತೆ ಇದೆ.
ರೆಡ್ಡಿ ಶಾಸಕ ಸ್ಥಾನ ಸದ್ಯಕ್ಕೆ ಸೇಫ್!
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜನಾರ್ದನ ರೆಡ್ಡಿ ಅವರ 7 ವರ್ಷಗಳ ಜೈಲು ಶಿಕ್ಷೆಗೆ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಾಮೀನು ಸಿಕ್ಕಿರುವುದರಿಂದ ಜನಾರ್ದನ ರೆಡ್ಡಿ ಶಾಸಕ ಸ್ಥಾನವು ಸದ್ಯಕ್ಕೆ ಸೇಫ್ ಆಗಿದೆ.
ತೆಲಂಗಾಣ ಹೈಕೋರ್ಟ್ ತೀರ್ಪಿನ ಬಗ್ಗೆ ರಾಜ್ಯ ವಿಧಾನಸಭಾ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ. ಈ ಹಿಂದೆ ಜನಾರ್ದನ ರೆಡ್ಡಿ ಬಂಧನವಾದಾಗ ಶಾಸಕ ಸ್ಥಾನ ಅನರ್ಹವಾಗಿದೆ ಎಂದು ಎಂ.ಕೆ ವಿಶಾಲಾಕ್ಷಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈಗ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ವಿಶಾಲಾಕ್ಷಿಯವರು ಮತ್ತೊಂದು ಪತ್ರ ಬರೆಯಲಿದ್ದಾರೆ. ಪತ್ರದ ಮೂಲಕ ಶಾಸಕ ಸ್ಥಾನ ಅನರ್ಹ ಹಿಂಪಡೆದಿದೆ ಎಂದು ಮಾಹಿತಿ ನೀಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ