ಬಿಜೆಪಿಗೆ ಶ್ರೀರಾಮುಲು ರಾಜೀನಾಮೆ ಹೇಳಿಕೆಗೆ ಡಿಕೆಶಿ ನಂಟು? ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ

author-image
admin
Updated On
ಬಿಜೆಪಿಗೆ ಶ್ರೀರಾಮುಲು ರಾಜೀನಾಮೆ ಹೇಳಿಕೆಗೆ ಡಿಕೆಶಿ ನಂಟು? ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ
Advertisment
  • ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶ್ರೀರಾಮುಲು
  • ‘ಶ್ರೀರಾಮುಲು ಅವರು ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ’
  • ಡಿ.ಕೆ ಶಿವಕುಮಾರ್​ ವಿರುದ್ಧ ಜನಾರ್ದನ ರೆಡ್ಡಿ ಹೊಸ ಬಾಂಬ್!

ಬೆಂಗಳೂರು: ಸಂಡೂರು ಉಪಚುನಾವಣೆ ಸೋಲಿನ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಶ್ರೀರಾಮುಲು ಮುನಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮೇಲೆ ರಾಮುಲು ಸಿಡಿದೆದ್ದಿದ್ದು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೂ ಶ್ರೀರಾಮುಲು ಗರಂ ಆಗಿದ್ದಾರೆ.

ಶ್ರೀರಾಮುಲು ಅವರ ರಾಜೀನಾಮೆ ಹೇಳಿಕೆಯ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಕೂಡ ಖಾರವಾದ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ ನೇರವಾಗಿ ಶ್ರೀರಾಮುಲು ಅವರು ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ. ಆದರೆ ಶ್ರೀರಾಮುಲು ನನ್ನ ಮೇಲೆ ಆರೋಪ ಮಾಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮತೊಮ್ಮೆ BJP ತೊರೆಯುತ್ತಾರಾ ಶ್ರೀರಾಮುಲು? ಉಸ್ತುವಾರಿ ಮಾತಿಗೆ ಸಿಡಿಮಿಡಿಯಾಗಿ ಹೇಳಿದ್ದೇನು? 

publive-image

ಶ್ರೀರಾಮುಲುರನ್ನ ಕಾಂಗ್ರೆಸ್​ ಪಕ್ಷಕ್ಕೆ ಕರೆದೊಯ್ಯೋ ಪ್ರಯತ್ನ ನಡೆದಿದೆ. ಸಚಿವ ಸತೀಶ್​ ಜಾರಕಿಹೊಳಿ ಸೋಲಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್​ ಮಾಡಿದ್ದಾರೆ. ರಾಮುಲು ಮೂಲಕ ಜಾರಕಿಹೊಳಿ ಸೋಲಿಸಲು ಡಿಕೆಶಿ ಮುಂದಾಗಿದ್ದಾರೆ ಅನ್ನೋ ಮಾತು ಕೇಳಿದ್ದೇನೆ ಎಂದು ಡಿ.ಕೆ ಶಿವಕುಮಾರ್​ ವಿರುದ್ಧ ಜನಾರ್ದನ ರೆಡ್ಡಿ ಅವರು ಹೊಸ ಬಾಂಬ್​ ಸಿಡಿಸಿದ್ದಾರೆ.

publive-image

ಮುಂದುವರಿದು ಮಾತನಾಡಿದ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ನನಗೆ ಯಾವತ್ತೂ ಸ್ನೇಹಿತನಾಗೇ ಇರುತ್ತಾರೆ. ಒಮ್ಮೆ ನಾನು ಸ್ನೇಹಿತ ಅಂತ ಭಾವಿಸಿದ ಮೇಲೆ ಬದಲಾಯಿಸಲ್ಲ. ಸತೀಶ್​ ಜಾರಕಿಹೊಳಿನ ಮಣಿಸಲು ಡಿಕೆಶಿ ಪ್ಲಾನ್​ ಮಾಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಹೀಗಾಗಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೆಳೆಯಲು ಡಿಕೆಶಿ ಪ್ರಯತ್ನಿಸಿದ್ದಾರೆ ಎಂದಿದ್ದಾರೆ.

publive-image

ಕಾಂಗ್ರೆಸ್‌ನಿಂದ ರಾಮುಲು ಅವರನ್ನ ಸೆಳೆಯುವ ಈ ರಾಜಕೀಯ ಚರ್ಚೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ನನ್ನನ್ನ ಯಾರೂ ಭೇಟಿ ಮಾಡಿಲ್ಲ, ಎಲ್ಲಾ ಸುಳ್ಳು. ಅವರ ಆಂತರಿಕ ಸಮಸ್ಯೆ, ಅದಕ್ಕೂ ನನಗೂ ಸಂಬಂಧ ಇಲ್ಲ. ಅವರ ಆಂತರಿಕ ಜಗಳ ಅವರೇ ನಮ್ಮ ಪಕ್ಷಕ್ಕೆ ಕಳುಹಿಸಲು ಹೊರಟಿದ್ದಾರೆ ಎಂದು ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment