/newsfirstlive-kannada/media/post_attachments/wp-content/uploads/2025/04/JANIVAR-VIVADA.jpg)
ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೀದರ್ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲು ಒಪ್ಪದೇ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾನೆ. ಇದರಿಂದ ಆತನ ಎಂಜಿನಿಯರಿಂಗ್ ಭವಿಷ್ಯ ಅತಂತ್ರಗೊಂಡಿದೆ.
ಇದನ್ನೂ ಓದಿ: ಭಕ್ತಿ ಮಾರ್ಗ, ‘ಧರ್ಮ’ ರಾಜಕಾರಣ.. ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಏನು..?
ಬೀದರ್ ಜನಿವಾರ ಪ್ರಕರಣ
ಬೀದರ್ನ ವಿದ್ಯಾರ್ಥಿ ಕಳೆದ ಬುಧವಾರ ಜನಿವಾರ ಧರಿಸಿ ಬೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ. ಗುರುವಾರ ಗಣಿತ ಪರೀಕ್ಷೆಗೆ ಬಂದಾಗ ಜನಿವಾರ ನೋಡಿದ ಪರೀಕ್ಷಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರಿವಾರ ತೆಗೆಯಲ್ಲ, ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಬೇಡಿಕೊಂಡಿದ್ದಾನೆ. ಕೊನೆಗೆ ಪರೀಕ್ಷೆಯಿಂದಲೇ ಆತ ದೂರ ಉಳಿದಿದ್ದಾನೆ.
ಶಿವಮೊಗ್ಗ ಪ್ರಕರಣ..!
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದೆ.
ಸಚಿವರ ಏನಂದ್ರು..?
ಎರಡೂ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್, ಘಟನೆ ಬಗ್ಗೆ ನನಗೆ ಬೈರತಿ ಸುರೇಶ್ ಅವರು ಫೋನ್ ಮಾಡಿ ಕೇಳಿದರು. ಸಂಜೆವರೆಗೂ ನನಗೆ ಯಾವುದೇ ಮಾಹಿತಿ ಇಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದಾಗ ಸುಗಮವಾಗಿ ಪರೀಕ್ಷೆ ಆಗಿದೆ ಎಂದಿದ್ದರು. ಅಲ್ಲದೇ ಪರೀಕ್ಷೆ ಬರೆದ ವಿದ್ಯಾರ್ಥಿಗಳ ದಾಖಲೆಗಳನ್ನು ಕಳುಹಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?
ಆದರೆ ಶಿವಮೊಗ್ಗ ಹಾಗೂ ಬೀದರ್ ಘಟನೆಯನ್ನು ಖಂಡಿತ ಒಪ್ಪುವ ವಿಚಾರವಲ್ಲ. ಶಿವಮೊಗ್ಗದಲ್ಲಿ ಈ ರೀತಿ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮ ಪ್ರೋಟೋಕಾಲ್ ಅಡಿಯಲ್ಲಿ ಪಾಲನೆ ಮಾಡಬೇಕು. ಯಾವುದೇ ಕೇಂದ್ರದಲ್ಲಿ ಆ ರೀತಿ ಆಗಿದ್ರೆ ಗಂಭೀರವಾಗಿ ಪರಿಗಣನೆ ಮಾಡ್ತೀವಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ಆಗಿರೊದು ಸತ್ಯ ಆದರೆ ಖಂಡಿತ ಅತಿರೇಕ. ಯಾವ ರೀತಿಯ ವಿಕೃತಿ ಮನಸ್ಥಿತಿ ಇದು. ಎಲ್ಲಾ ಜಾತಿ ಧರ್ಮ ಆಚರಣೆ ಸಂಪ್ರದಾಯ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆ ಪ್ರೋತ್ಸಾಹ ಕೊಡಲ್ಲ. ವರದಿ ಪಡೆದ ಬಳಿಕ ಏನ್ ಮಾಡಬಹುದು ಅಂತ ಯೋಚನೆ ಮಾಡ್ತೀನಿ ಎಂದಿದ್ದಾರೆ.
ಇದನ್ನೂ ಓದಿ: ಕರುಳು ಚುರ್ ಅನ್ನೋ ಕೃತ್ಯ.. ಕಸ ಬಿಸಾಡು ಅಂತಾ ವೃದ್ಧನ ಕೈಗೆ ಕವರ್ ಕೊಟ್ಟ ಯುವತಿ.. ಅದರಲ್ಲಿ ಏನಿತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ