ಎಷ್ಟೇ ಬೇಡಿಕೊಂಡರೂ ಪರೀಕ್ಷೆ ಬರೆಯಲು ಬಿಡಲಿಲ್ಲ -ಮಗನ ಭವಿಷ್ಯ ನೆನೆದು ತಾಯಿ ಕಂಗಾಲು

author-image
Veena Gangani
Updated On
ಎಷ್ಟೇ ಬೇಡಿಕೊಂಡರೂ ಪರೀಕ್ಷೆ ಬರೆಯಲು ಬಿಡಲಿಲ್ಲ -ಮಗನ ಭವಿಷ್ಯ ನೆನೆದು ತಾಯಿ ಕಂಗಾಲು
Advertisment
  • ಜನಿವಾರ ತೆಗೆಯದ್ದಕ್ಕೆ CET ಇಂದ ವಂಚಿತನಾದ ವಿದ್ಯಾರ್ಥಿ
  • CET ಪರೀಕ್ಷೆಗಾಗಿ ಬರೆಯಲು ಜನಿವಾರ ಕತ್ತರಿಸಿದ ಸಿಬ್ಬಂದಿ
  • ಜನಿವಾರ ತೆಗೆಯಲೇಬೇಕು ಅನ್ನೋ ಜಿದ್ದು ಸಿಬ್ಬಂದಿಗೆ ಯಾಕೆ?

ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್​ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಜನಿವಾರ ತೆಗೆಯದಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಸಿಗಲಿಲ್ಲ- ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ವಿವಾದ

publive-image

ಹೌದು, ಬೀದರ್​​ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗೆ ಜನಿವಾರ ಕಟ್​ ಮಾಡುವಂತೆ ಹೇಳಿದ್ದಾರಂತೆ. ಆದ್ರೆ ಜನಿವಾರ ತೆಗೆಯದಿದ್ದಕ್ಕೆ ಸಿಬ್ಬಂದಿ ಗಣಿತ ಪರೀಕ್ಷೆಯನ್ನು ಬರೆಯಲು ಬಿಡದೇ ಆತನ ಎಂಜಿನಿಯರಿಂಗ್ ಭವಿಷ್ಯ ಅತಂತ್ರ ಮಾಡಿದ್ದಾರೆ.

[caption id="attachment_120346" align="aligncenter" width="800"]publive-imageವಂಚಿತನಾದ ಸುಚಿವ್ರತ್ ಕುಲಕರ್ಣಿ[/caption]

ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಪರೀಕ್ಷೆಯಿಂದ ವಂಚಿತನಾದ ಸುಚಿವ್ರತ್ ಕುಲಕರ್ಣಿ, ನಿನ್ನೆ ಹೋದಾಗ ಜನಿವಾರ ಕಾಣಿಸಿದ್ದು, ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಅವರು ಅನುಮತಿ ಕೊಟ್ಟಿಲ್ಲ, ನಿನ್ನೆ ಗಣಿತ ಪರೀಕ್ಷೆಯನ್ನು ನಾನು ಬರೆದಿಲ್ಲ. ಅಪ್ಪ ಜನಿವಾರ ಕಟ್​​ ಮಾಡ್ಬೇಡ ಅಂದಿದ್ರು, ನಾನು ರಿಕ್ವೆಸ್ಟ್​ ಮಾಡಿಕೊಂಡೆ ಆದ್ರೂ ಬಿಟ್ಟಿಲ್ಲ ಎಂದು ಬೇಸರ ಹೊರ ಹಾಕಿದ್ದಾನೆ.

[caption id="attachment_120350" align="alignnone" width="800"]publive-imageವಿದ್ಯಾರ್ಥಿ ಸುಚಿವ್ರತ್ ತಾಯಿ ನೀತಾ[/caption]

ಅಷ್ಟೇ ಅಲ್ಲದೇ, ವಿದ್ಯಾರ್ಥಿ ಸುಚಿವ್ರತ್ ತಾಯಿ ನೀತಾ ಮಾತಾಡಿ, ನನ್ನ ಮಗ ರಾತ್ರಿ, ಹಗಲು ಸಿಇಟಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ. ನೂರಾರು ಕನಸು ಕಟ್ಟಿಕೊಂಡು CET ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ. ಜನಿವಾರ ಹಾಕಿದ್ದಕ್ಕೆ ಮಗನಿಗೆ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ

ಈಗ ಜನಿವಾರ ಕತ್ತರಿಸಿರುವ ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ KEA ಕಾರ್ಯನಿರ್ವಾಹಕ ನಿರ್ದೇಶಕರಿಗಿಲ್ಲ ಮಾಹಿತಿ ಇಲ್ಲವಂತೆ. ಜನಿವಾರಕ್ಕೂ CET ಪರೀಕ್ಷೆಗೂ ಏನು ಸಂಬಂಧ ಎಂಬ ಪ್ರಶ್ನೆ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment