newsfirstkannada.com

ಚಿಕ್ಕೋಡಿ ಕಾಂಗ್ರೆಸ್ ಶಾಸಕನಿಂದ ಅಚ್ಚರಿ ನಡೆ.. ರಾಮ ಮಂದಿರ ಉದ್ಘಾಟನೆ ದಿನ ‘ಬಹೃತ್ ಹನುಮ ಪಾದಯಾತ್ರೆ’..!

Share :

Published January 20, 2024 at 7:39am

Update January 20, 2024 at 7:40am

  ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ಶಾಸಕ

  ಪಟ್ಟಣದಲ್ಲಿನ ಹನುಮಾನ್ ಮಂದಿರದಿಂದ ಬೃಹತ್ ಪಾದಯಾತ್ರೆ

  ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ

ಚಿಕ್ಕೋಡಿ: ರಾಮ ಮಂದಿರ ಸಮಾರಂಭದಿಂದ ದೂರ ಉಳಿಯಲು ಕಾಂಗ್ರೆಸ್​ ನಿರ್ಧರಿಸಿದೆ. ಇದರ ಬೆನ್ನಲ್ಲೇ ಅದೇ ದಿನದಂದು ಹನುಮ ಭಕ್ತರ ಜೊತೆ ಬೃಹತ್ ಪಾದಯಾತ್ರೆ ಮಾಡಲು ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಮುಂದಾಗಿದ್ದಾರೆ.

ಬೆಳಗಾವಿಯ ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿಯವರು ಯಕ್ಸಂಭಾ ಪಟ್ಟಣದ ಹನುಮಾನ್ ಮಂದಿರದಿಂದ ತೋರಣಹಳ್ಳಿ ಗ್ರಾಮದ ಹನುಮ ಮಂದಿರದವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಬಳಿಕ ಗ್ರಾಮದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಫೇಸ್​ಬುಕ್​ನಲ್ಲಿ ಪೋಸ್ಟ್ ಶೇರ್ ಮಾಡಿರುವ ಶಾಸಕರು, ಯಕ್ಸಂಭಾ ಪಟ್ಟಣದ ಹನುಮಾನ್ ಮಂದಿರದಿಂದ ತೋರಣಹಳ್ಳಿ ಗ್ರಾಮದ ಮಾರುತಿ ದೇವಸ್ಥಾನದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಪಾದಯಾತ್ರೆ ಕಾಂಗ್ರೆಸ್ ಶಾಸಕನ ನಿರ್ಧಾರದಿಂದ ರಾಮ ಭಕ್ತರಲ್ಲಿ ಅಸಮಾಧಾನ ಉಂಟಾಗಿದೆ. ರಾಮ ಭಕ್ತರ ಓಲೈಕೆ ಮಾಡಲು ಶಾಸಕ ಗಣೇಶ್ ಹುಕ್ಕೇರಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹನುಮಾನ್ ಮಂದಿರ ಜೀರ್ಣೋದ್ಧಾರದ ನೆಪದ ಮೂಲಕ ನಾವು ರಾಮ ಭಕ್ತರು ಎಂಬುವುದನ್ನು ತೋರ್ಪಡಿಸಲು ಈ ಯೋಜನೆಯನ್ನು ಶಾಸಕ ಗಣೇಶ ಹುಕ್ಕೇರಿ ರೂಪಿಸಿದ್ದಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕೋಡಿ ಕಾಂಗ್ರೆಸ್ ಶಾಸಕನಿಂದ ಅಚ್ಚರಿ ನಡೆ.. ರಾಮ ಮಂದಿರ ಉದ್ಘಾಟನೆ ದಿನ ‘ಬಹೃತ್ ಹನುಮ ಪಾದಯಾತ್ರೆ’..!

https://newsfirstlive.com/wp-content/uploads/2024/01/MLA_GANESH_HUKKERI.jpg

Load More