10 ನಿಮಿಷದಲ್ಲಿ 26 ಸಾವಿರ ಅಡಿ ಕುಸಿದ ವಿಮಾನ.. ಪ್ರಯಾಣಿಕರಿಗೆ ಜೀವ ಬಾಯಿಗೆ ಬಂದಂತಾಯಿತು! VIDEO

author-image
Veena Gangani
Updated On
10 ನಿಮಿಷದಲ್ಲಿ 26 ಸಾವಿರ ಅಡಿ ಕುಸಿದ ವಿಮಾನ.. ಪ್ರಯಾಣಿಕರಿಗೆ ಜೀವ ಬಾಯಿಗೆ ಬಂದಂತಾಯಿತು! VIDEO
Advertisment
  • ದಿಢೀರನೇ 26 ಸಾವಿರ ಅಡಿ ಅಳಕ್ಕೆ ಕುಸಿದ ಏರ್ ಲೈನ್ಸ್
  • ಇತ್ತೀಚೆಗೆ ಹೆಚ್ಚಾಗುತ್ತಿವೆ ವಿಮಾನ ದುರಂತಗಳ ಸಂಖ್ಯೆ
  • ಟೋಕಿಯೋಗೆ ಹೊರಟಿದ್ದಾಗ ಏಕಾಏಕಿ ಕುಸಿತ ಕಂಡ ವಿಮಾನ

ಇತ್ತೀಚೆಗೆ ವಿಮಾನದಲ್ಲಿ ಅಪತ್ತಿನ ಸ್ಥಿತಿಗಳು ಹೆಚ್ಚಾಗಿ ಎದುರಾಗುತ್ತಿವೆ. ಜೂನ್ 22ರಂದು ಏರ್ ಇಂಡಿಯಾದ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್​ಗಳಲ್ಲಿ ಪತನವಾಗಿತ್ತು. ಈಗ ಮತ್ತೆ ಅಂಥದ್ದೇ ಅಪತ್ತಿನ ಸ್ಥಿತಿಯನ್ನು ಜಪಾನ್ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಎದುರಿಸಿದ್ದಾರೆ.

ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?

publive-image

ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ದಿಢೀರನೇ 26 ಸಾವಿರ ಅಡಿ ಅಳಕ್ಕೆ ಕುಸಿದು ಜಪಾನ್ ಏರ್ ಲೈನ್ಸ್ ವಿಮಾನ ಪ್ರಯಾಣಿಕರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಬೋಯಿಂಗ್ 737 ಸೀರೀಸ್ ವಿಮಾನ ಏಕಾಏಕಿ ಕುಸಿತವಾಗಿದೆ. ಚೀನಾದ ಶಾಂಘೈನಿಂದ ಜಪಾನ್‌ನ ಟೋಕಿಯೋಗೆ ಹೊರಟಿದ್ದ ವಿಮಾನ ಭಾರಿ ಕುಸಿತ ಕಂಡಿದೆ. 26 ಸಾವಿರ ಅಡಿ ಅಳಕ್ಕೆ ಕುಸಿದ ಬಳಿಕ ಕನಸೈ ಏರ್ ಪೋರ್ಟ್ ನಲ್ಲಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದೆ.

36 ಸಾವಿರ ಅಡಿಯಿಂದ ಬರೀ 10,500 ಅಡಿಗೆ ಬೋಯಿಂಗ್ ವಿಮಾನ ಕುಸಿದಿದೆ. ಕೇವಲ 10 ನಿಮಿಷದ ಅಂತರದಲ್ಲಿ 26 ಸಾವಿರ ಅಡಿ ಕೆಳಕ್ಕೆ ವಿಮಾನ ಕುಸಿದಿದ್ದರಿಂದ, ವಿಮಾನ ಪತನವಾಗುತ್ತೆ ಎಂಬ ಭಯದಲ್ಲಿ ಪ್ರಯಾಣಿಕರು ಇದ್ದರು. ವಿಮಾನದ ಕ್ಯಾಬಿನ್‌ ಪ್ರೆಷರ್ ಲೆವೆಲ್ ಬದಲಾವಣೆಯಾಗಿ ಕೆಲ ಪ್ರಯಾಣಿಕರು ಪ್ರಜ್ಞೆ ಕಳೆದುಕೊಂಡರು. ತಕ್ಷಣವೇ ವಿಮಾನದಲ್ಲಿದ್ದ ಆಕ್ಸಿಜನ್ ಮಾಸ್ಕ್ ಗಳನ್ನು ಪ್ರಯಾಣಿಕರು ಹಾಕಿಕೊಂಡಿದ್ದಾರೆ.


">July 2, 2025

ವಿಮಾನ ಲ್ಯಾಂಡಿಂಗ್ ಆದ ಬಳಿಕವೂ ಇನ್ನೂ ನನ್ನ ಕಾಲುಗಳು ನಡುಗುತ್ತಿವೆ ಎಂದು ಪ್ರಯಾಣಿಕರು ಹೇಳಿದ್ದಾರೆ. ಇದೊಂದು ಜೀವಕ್ಕೆ ಅಪಾಯ ಎದುರಾಗುವ ಸನ್ನಿವೇಶ. ಪ್ರಯಾಣಿಕರು ಕಣ್ಣೀರು ಹಾಕುತ್ತಿದ್ದರು. ವಿಮಾನದಲ್ಲಿ 191 ಮಂದಿ ಪ್ರಯಾಣಿಕರಿದ್ದರು. ಎಲ್ಲ ಪ್ರಯಾಣಿಕರಿಗೂ ಸಾವು- ಬದುಕಿನ ಮಧ್ಯೆಯ ಹೋರಾಟದ ಸನ್ನಿವೇಶ ಎದುರಾಗಿತ್ತು. ಜೂನ್ 14 ರಂದು ದೆಹಲಿ- ವಿಯೆನ್ನಾ ನಡುವಿನ ಏರ್ ಇಂಡಿಯಾದ ಬೋಯಿಂಗ್ ವಿಮಾನ ಕೂಡ ಧೀಡೀರನೇ 900 ಅಡಿ ಕೆಳಕ್ಕೆ ಕುಸಿದಿತ್ತು . ಬೋಯಿಂಗ್ 737 ಸೀರೀಸ್ ನ ವಿಮಾನ ಕಳೆದ ವರ್ಷ ದಕ್ಷಿಣ ಕೋರಿಯಾದ ಮೂವನ್ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಆಗುವಾಗ ಪತನವಾಗಿ 179 ಪ್ರಯಾಣಿಕರ ಸಾವನ್ನಪ್ಪಿದ್ದರು. ಇಬ್ಬರು ಸಿಬ್ಬಂದಿ ಮಾತ್ರ ಬದುಕಿ ಉಳಿದಿದ್ದರು. 2022 ರಲ್ಲಿ ಚೀನಾದಲ್ಲಿ ಬೋಯಿಂಗ್ 737 ವಿಮಾನ ಅಪಘಾತಕ್ಕೀಡಾಗಿ 132 ಮಂದಿ ಪ್ರಯಾಣಿಕರು ಜೀವಬಿಟ್ಟಿದ್ದರು.

publive-image

ಈಗ ಜಪಾನ್ ಏರ್ ಲೈನ್ಸ್ ನ ಬೋಯಿಂಗ್ ವಿಮಾನ ಧೀಡೀರನೇ ಕುಸಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಯಕರಿಗೆ ಯಾವುದೇ ಗಾಯಗಳಾಗಿಲ್ಲ. ಪ್ರಯಾಣಿಕರಿಗೆ ಸಾರಿಗೆ ವೆಚ್ಚವಾಗಿ 104 ಡಾಲರ್ ಹಣ ನೀಡಲಾಯಿತು. ಒಂದು ರಾತ್ರಿಯ ವಾಸ್ತವ್ಯದ ವ್ಯವಸ್ಥೆಯನ್ನು ಜಪಾನ್ ಏರ್ ಲೈನ್ಸ್ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment